ಕೈಗೆ ಗಾಯ: ಶೂಟಿಂಗ್ ವೇಳೆ ನಟಿ ಸಮಂತಾಗೆ ಏನಾಯ್ತು!

ಸಮಂತಾ ರುತ್ ಪ್ರಭು ದಕ್ಷಿಣ ಚಿತ್ರರಂಗದ ಅತ್ಯಂತ ಪ್ರಸಿದ್ಧ ನಟಿ. ಅಭಿನಯದಿಂದ ಪ್ಯಾನ್ ಇಂಡಿಯಾ ಮಟ್ಟದ ಪ್ರೇಕ್ಷಕರ ಹೃದಯದಲ್ಲಿ ಸಾಕಷ್ಟು ಸ್ಥಾನವನ್ನು ಗಳಿಸಿದ್ದಾರೆ.
ಸಮಂತಾ
ಸಮಂತಾ
Updated on

ಮುಂಬೈ: ಸಮಂತಾ ರುತ್ ಪ್ರಭು ದಕ್ಷಿಣ ಚಿತ್ರರಂಗದ ಅತ್ಯಂತ ಪ್ರಸಿದ್ಧ ನಟಿ. ಅಭಿನಯದಿಂದ ಪ್ಯಾನ್ ಇಂಡಿಯಾ ಮಟ್ಟದ ಪ್ರೇಕ್ಷಕರ ಹೃದಯದಲ್ಲಿ ಸಾಕಷ್ಟು ಸ್ಥಾನವನ್ನು ಗಳಿಸಿದ್ದಾರೆ. ಪ್ರಸ್ತುತ, ನಟಿ ಅಮೆರಿಕನ್ ಸರಣಿ ಸಿಟಾಡೆಲ್‌ನ ಹಿಂದಿ ಆವೃತ್ತಿಯ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಸೆಟ್‌ನಲ್ಲಿ ಆಕೆ ಗಾಯಗೊಂಡಿದ್ದು ಅದನ್ನು ಸ್ವತಃ ಅವರೇ Instagram ಸ್ಟೋರಿಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಸಮಂತಾ ರುತ್ ಪ್ರಭು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿರುತ್ತಾರೆ. ವೃತ್ತಿಪರ ಜೀವನ ಮತ್ತು ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಈಗ ಅವರು ತಮ್ಮ ಕೈಗಳಿಗೆ ಗಾಯವಾಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಆಕ್ಷನ್ ಸೀಕ್ವೆನ್ಸ್ ಮಾಡುವಾಗ ಗಾಯ
ಸಮಂತಾ ರುತ್ ಪ್ರಭು ಹಂಚಿಕೊಂಡಿರುವ ಚಿತ್ರದಲ್ಲಿ ಅವರು ತಮ್ಮ ಎರಡೂ ಕೈಗಳನ್ನು ತೋರಿಸಿದ್ದಾರೆ. ಅವರ ಹೆಬ್ಬೆರಳಿನ ಮೇಲೆ ಗಾಯದ ಗುರುತುಗಳಿರುವುದನ್ನು ಕಾಣಬಹುದು. ಇದರೊಂದಿಗೆ, ಮೇಲ್ಭಾಗದಲ್ಲಿ ಕೆಲವು ಗೀರುಗಳು ಸಹ ಗೋಚರಿಸುತ್ತವೆ. ಆಕ್ಷನ್ ಸೀಕ್ವೆನ್ಸ್ ಮಾಡುವಾಗ ಅವರಿಗೆ ಈ ಗಾಯಗಳಾಗಿವೆ ಎಂಬುದು ಅವರ ಶೀರ್ಷಿಕೆಯಿಂದ ಸ್ಪಷ್ಟವಾಗಿದೆ.

ಸಿಟಾಡೆಲ್ ಸರಣಿಯ ಮೂಲ ನಿರ್ಮಾಪಕರು ರುಸ್ಸೋ ಬ್ರದರ್ಸ್, ಇದರಲ್ಲಿ ನಟರಾದ ರಿಚರ್ಡ್ ಮ್ಯಾಡೆನ್, ಪ್ರಿಯಾಂಕಾ ಚೋಪ್ರಾ ಮತ್ತು ಸ್ಟಾನ್ಲಿ ಟುಸಿ ಮುಂತಾದ ತಾರೆಗಳು ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ, ಪ್ರಿಯಾಂಕಾ ಈ ಸರಣಿಯ ಫಸ್ಟ್ ಲುಕ್ ಅನ್ನು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿದ್ದರು. ಮತ್ತೊಂದೆಡೆ, ನಾವು ಅದರ ಹಿಂದಿ ರೂಪಾಂತರದ ಬಗ್ಗೆ ಮಾತನಾಡಿದರೆ, ರಾಜ್ ಮತ್ತು ಡಿಕೆ ಅದನ್ನು ಮಾಡುತ್ತಿದ್ದಾರೆ. ಈ ಸರಣಿಯಲ್ಲಿ ಸಮಂತಾ ಜೊತೆಗೆ ಬಾಲಿವುಡ್ ನಟ ವರುಣ್ ಧವನ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಸ್ಪೈ ಥ್ರಿಲ್ಲರ್ ಸರಣಿಯಾಗಿದ್ದು, ಸಮಂತಾ ಮತ್ತು ವರುಣ್ ಇಬ್ಬರೂ ಆಕ್ಷನ್ ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಮಂತಾ ಈ ಹಿಂದೆ ಯಶೋದಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಅವರು ಬಾಡಿಗೆ ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ತೆರೆಕಂಡ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 40 ಕೋಟಿ ಗಳಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com