'ಆರಾಮ್ ಅರವಿಂದ್ ಸ್ವಾಮಿ' ಅನೀಶ್ ಗೆ ಮಿಲನಾ ನಾಗರಾಜ್ ನಾಯಕಿ

ಅಕಿರಾ ಸಿನಿಮಾ ಅನೀಶ್ ಅವರ ಮುಂಬರುವ ಚಿತ್ರವನ್ನು ಅಭಿಷೇಕ್ ಶೆಟ್ಟಿ ನಿರ್ದೇಶಿಸುತ್ತಿದ್ದಾರೆ.  ಆರಾಮ್ ಅರವಿಂದ್ ಸ್ವಾಮಿ ಸಿನಿಮಾಗೆ ಪ್ರಮುಖ ನಾಯಕನನ್ನು ಹೊರತುಪಡಿಸಿ, ಇತರ ವಿವರಗಳನ್ನು ನಿರ್ದೇಶಕರು ಮುಚ್ಚಿಟ್ಟಿದ್ದಾರೆ.
ಮಿಲನಾ ನಾಗರಾಜ್
ಮಿಲನಾ ನಾಗರಾಜ್

ಅಕಿರಾ ಸಿನಿಮಾ ಅನೀಶ್ ಅವರ ಮುಂಬರುವ ಚಿತ್ರವನ್ನು ಅಭಿಷೇಕ್ ಶೆಟ್ಟಿ ನಿರ್ದೇಶಿಸುತ್ತಿದ್ದಾರೆ.  ಆರಾಮ್ ಅರವಿಂದ್ ಸ್ವಾಮಿ ಸಿನಿಮಾಗೆ ಪ್ರಮುಖ ನಾಯಕನನ್ನು ಹೊರತುಪಡಿಸಿ, ಇತರ ವಿವರಗಳನ್ನು ನಿರ್ದೇಶಕರು ಮುಚ್ಚಿಟ್ಟಿದ್ದಾರೆ.

ಆದರೆ ಅನೀಶ್ ಗೆ ಜೋಡಿಯಾಗಿ ಮಿಲನಾ ನಾಗರಾಜ್ ನಟಿಸುತ್ತಿದ್ದಾರೆ ಎಂಬ ವಿಷಯ ಸಿನಿಮಾ  ಎಕ್ಸ್ ಪ್ರೆಸ್ ಗೆ ಮೂಲಗಳಿಂದ ತಿಳಿದು ಬಂದಿದೆ. ರೋಮ್ಯಾಂಟಿಂಕ್ ಕಾಮಿಡಿ ಸಿನಿಮಾದಲ್ಲಿ ಮಿಲನಾ ನಾಗರಾಜ್ ನಟಿಸುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಅನೀಶ್ ಜೊತೆ ಮಿಲನಾ ತೆರೆ ಹಂಚಿಕೊಳ್ಳಲಿದ್ದಾರೆ. ಅವರು ಈಗಾಗಲೇ ಚಿತ್ರದ ಕೆಲವು ಭಾಗಗಳ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ, ಮಿಲನಾಪಾತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು  ನಿರೀಕ್ಷಿಸಲಾಗುತ್ತಿದೆ.

ಆರಾಮ್ ಅರವಿಂದ್ ಸ್ವಾಮಿ ಸಿನಿಮಾವನ್ನು ಅಕಿರಾ ಮತ್ತು ಗುಲ್ಟೂ ನಿರ್ಮಾಪಕರು ಜಂಟಿಯಾಗಿ ನಿರ್ಮಿಸಿದ್ದಾರೆ.

ನಮ್ ಗಣಿ ಬಿಕಾಂ ಪಾಸ್ ಮತ್ತು ಗಜಾನನ  ಗ್ಯಾಂಗ್ ಚಿತ್ರಗಳಿಗೆ ಹೆಸರುವಾಸಿಯಾಗಿರುವ ಅಭಿಷೇಕ್ ಶೆಟ್ಟಿ ಈ ಚಿತ್ರಕ್ಕೂ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ.

ನಿರ್ದೇಶಕ ನವೀನ್ ದ್ವಾರಕಾನಾಥ್ ಅವರ ಫಾರ್ ರೆಗ್ನ್‌ನಲ್ಲಿ ಮಿಲನಾ  ನಾಗರಾಜ್ -ಪೃಥ್ವಿ ಅಂಬಾರ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಹಾಗೂ ಪಿ ಸಿ ಶೇಖರ್ ಅವರ ಲವ್ ಬರ್ಡ್ಸ್ ಚಿತ್ರದಲ್ಲಿ ಕೃಷ್ಣ ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com