ವಿಜಯ್ ವರ್ಮಾ ಜೊತೆ ಮಿಲ್ಕಿ ಬ್ಯೂಟಿ ಡೇಟಿಂಗ್: ನಟಿ ತಮನ್ನಾ ಲಿಪ್ ಲಾಕ್ ವಿಡಿಯೋ ವೈರಲ್
ನಟಿ ತಮನ್ನಾ ಭಾಟಿಯಾ, ತಮ್ಮ 15ನೇ ವಯಸ್ಸಿಗೆ ನಾಯಕಿಯಾಗಿ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು. ಈಗ ಅವರಿಗೆ 32 ವರ್ಷ. ಕಳೆದ 17 ವರ್ಷಗಳ ಕರಿಯರ್ನಲ್ಲಿ ಕನ್ನಡ, ಹಿಂದಿ, ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಕೆಲವು ದಿನಗಳಿಂದ ಅವರ ಮದುವೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ಹಬ್ಬಿತ್ತು. ಅದು ತಮನ್ನಾ ಗಮನಕ್ಕೆ ಬರುವಷ್ಟರಲ್ಲಿ, ರೆಕ್ಕೆಪುಕ್ಕ ಎಲ್ಲಾ ಸೃಷ್ಟಿಯಾಗಿ ಹುಡುಗನ ಬಗ್ಗೆ ಇಲ್ಲಸಲ್ಲದ ಮಾಹಿತಿಯೂ ಸೇರಿಕೊಂಡಿತ್ತು.
ಇದೀಗ ಹೊಸ ವರ್ಷದ ಸಂಭ್ರಮಾಚರಣೆಯ ವಿಡಿಯೋವೊಂದು ವೈರಲ್ ಆಗಿದ್ದು, ಮದುವೆ ವಿಚಾರಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿದಂತಾಗಿದೆ. ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ತಮನ್ನಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಅದಕ್ಕೆ ಕಾರಣ ಹೊಸ ವರ್ಷದ ವಿಡಿಯೋ.
ನಟಿ ತಮನ್ನಾ ಗೋವಾದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮಾಡಿದ್ದು, ಈ ವೇಳೆ ವಿಜಯ್ ವರ್ಮಾರನ್ನು ತಬ್ಬಿಕೊಂಡು, ಕಿಸ್ ಮಾಡಿರುವ ದೃಶ್ಯ ಸೆರೆಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತೀಚೆಗಷ್ಟೇ ಇಬ್ಬರು ಮುಂಬೈ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಲ್ಲದೆ, ಗಲ್ಲಿ ಬಾಯ್ ಚಿತ್ರದ ನಟ ವಿಜಯ್ ವರ್ಮಾ ಕಳೆದ ಡಿ.21ರಂದು ತಮನ್ನಾ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಿದ್ದರು.
ಈ ವಿಡಿಯೋದಲ್ಲಿ ತಮನ್ನಾ ಹಾಗೂ ವಿಜಯ್ ಒಟ್ಟಿಗೆ ನಿಂತಿದ್ದು, ಕಿಸ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ, ವಿಡಿಯೋದಲ್ಲಿ ಇದರ ಸ್ಪಷ್ಟ ಚಿತ್ರಣ ಇಲ್ಲ. ಫ್ಯಾನ್ಪೇಜ್ಗಳು ಮಾತ್ರ ಇದು ತಮನ್ನಾ ಹಾಗೂ ವಿಜಯ್ ವರ್ಮಾ ಎಂದೇ ಹೇಳುತ್ತಿವೆ. ಈ ವಿಡಿಯೋದ ಅಸಲಿ ವಿಚಾರ ಇನ್ನಷ್ಟೇ ತಿಳಿಯಬೇಕಿದೆ. ವಿಜಯ್ ಬಿಳಿ ಬಣ್ಣದ ಬಟ್ಟೆ ಧರಿಸಿದ್ದಾರೆ. ತಮನ್ನಾ ಅವರು ಪಿಂಕ್ ಬಣ್ಣದ ಡ್ರೆಸ್ ಹಾಕಿದ್ದಾರೆ.