ಚಿತ್ರರಂಗದಲ್ಲಿ ಇರುವುದು ಸುಲಭವಲ್ಲ, ನಿಮ್ಮ ಪ್ರೀತಿಯೇ ನನಗೆ ಆಶೀರ್ವಾದ: ನಟಿ ನಯನತಾರಾ

ಲೇಡಿ ಸೂಪರ್‌ಸ್ಟಾರ್ ಎಂದೇ ಖ್ಯಾತಿ ಗಳಿಸಿರುವ ನಟಿ ನಯನತಾರಾ ಅವರು ಚಿತ್ರರಂಗದಲ್ಲಿ ಸುದೀರ್ಘ ಯಶಸ್ವಿ ಇನಿಂಗ್ಸ್‌ಗಾಗಿ ಪ್ರೇಕ್ಷಕರ ಪ್ರೀತಿಯಿಂದಾಗಿಯೇ ಇದು ಸಾಧ್ಯ ಎಂದಿದ್ದಾರೆ.
ನಟಿ ನಯನತಾರಾ
ನಟಿ ನಯನತಾರಾ
Updated on

ಮುಂಬೈ: ಲೇಡಿ ಸೂಪರ್‌ಸ್ಟಾರ್ ಎಂದೇ ಖ್ಯಾತಿ ಗಳಿಸಿರುವ ನಟಿ ನಯನತಾರಾ ಅವರು ಚಿತ್ರರಂಗದಲ್ಲಿ ಸುದೀರ್ಘ ಯಶಸ್ವಿ ಇನಿಂಗ್ಸ್‌ಗಾಗಿ ಪ್ರೇಕ್ಷಕರ ಪ್ರೀತಿಯಿಂದಾಗಿಯೇ ಇದು ಸಾಧ್ಯ ಎಂದಿದ್ದಾರೆ.

ಸುಮಾರು ಎರಡು ದಶಕಗಳ ತನ್ನ ವೃತ್ತಿಜೀವನದಲ್ಲಿ ವಿವಿಧ ಭಾಷೆಗಳಲ್ಲಿ ಕೆಲಸ ಮಾಡಿದ 38 ವರ್ಷದ ನಟಿ, 'ಚಿತ್ರರಂಗದಲ್ಲಿ ತನ್ನ ಪ್ರಯಾಣವು ಸುಲಭದ್ದಾಗಿರಲಿಲ್ಲ. ಆದರೆ, ಎಲ್ಲಾ ಏರಿಳಿತಗಳು ತನಗೆ ಬಹಳಷ್ಟು ಕಲಿಸಿದೆ ಎಂದು ಹೇಳಿದರು.

'ನಾನು ಕಲಿತದ್ದು ತುಂಬಾ ಇದೆ. ನಾನು ಎಲ್ಲವನ್ನು ಹಾದು ಹೋಗಿದ್ದೇನೆ. ಆದರೆ, ಎಲ್ಲವೂ ಚೆನ್ನಾಗಿದೆ. ನಾನು ಮಾಡಿದ ತಪ್ಪುಗಳು ಏನೇ ಇರಲಿ, ಒಳ್ಳೆಯ ಮತ್ತು ಕೆಟ್ಟ ಹಂತಗಳನ್ನು ನಾನು ದಾಟಿದ್ದೇನೆ. ಈಗ ಎಲ್ಲವೂ ಚೆನ್ನಾಗಿದೆ. ಇದೆಲ್ಲ ಕಲಿಕೆಯಲ್ಲಿನ ಅನುಭವ. 18-19 ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಇರುವುದು ಸುಲಭವಲ್ಲ. ಆದರೆ, ಪ್ರೇಕ್ಷಕರು ಮತ್ತು ದೇವರು ನನ್ನ ಮೇಲೆ ದಯೆ ತೋರಿಸಿದ್ದಾರೆ. ನಾನು ಅವರ ಆಶೀರ್ವಾದವನ್ನು ಪಡೆದಿದ್ದೇನೆ. ಇದೆಲ್ಲವನ್ನು ಪದಗಳಲ್ಲಿ ಜೋಡಿಸಿ ಹೇಗೆ ಹೇಳುವುದು ಎಂದು ನನಗೆ ತಿಳಿಯದು' ಎಂದು ನಯನತಾರಾ ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

ನಟಿ 2003 ರಲ್ಲಿ ಮಲಯಾಳಂ ಚಿತ್ರ 'ಮನಸ್ಸಿನಕ್ಕರೆ' ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಬಳಿಕ ತಮಿಳಿನ 'ಅಯ್ಯ' (2005), ತೆಲುಗಿನ 'ಲಕ್ಷ್ಮಿ' (2006) ಮತ್ತು ಕನ್ನಡದ 'ಸೂಪರ್' (2010) ಸಿನಿಮಾ ಮೂಲಕ ಇತರೆ ಭಾಷೆಯ ಚಿತ್ರರಂಗಳಿಗೂ ಕಾಲಿಟ್ಟರು.

ಈ ವರ್ಷ, ಅವರು ಶಾರುಖ್ ಖಾನ್ ಅವರ ಪ್ಯಾನ್-ಇಂಡಿಯಾ ಚಿತ್ರ 'ಜವಾನ್' ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ಆದರೆ, ತಮ್ಮ ಪ್ರಾಥಮಿಕ ಗುರಿ ಯಾವಾಗಲೂ ಉತ್ತಮ ಕಥೆಗಳೊಂದಿಗೆ ಪ್ರೇಕ್ಷಕರನ್ನು ರಂಜಿಸುವುದು ಎನ್ನುತ್ತಾರೆ ನಟಿ-ನಿರ್ಮಾಪಕಿ ನಯನತಾರಾ.

ನಯನತಾರಾ ಮತ್ತು ಅವರ ನಿರ್ದೇಶಕ ಪತಿ ವಿಘ್ನೇಶ್ ಶಿವನ್ 2021ರಲ್ಲಿ ತಮ್ಮ ರೌಡಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದರು. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರಗಳಾದ 'ಕೂಜಂಗಲ್', 'ನೇತ್ರಿಕನ್' ಮತ್ತು 'ಕಾತುವಾಕುಲ ರೆಂಡು ಕಾದಲ್' ಗಳನ್ನು ಬೆಂಬಲಿಸಿದ್ದಾರೆ.

'ನಾವೇ ಚಿತ್ರವನ್ನು ನಿರ್ಮಿಸುತ್ತಿರಲಿ ಅಥವಾ ಖರೀದಿಸುತ್ತಿರಲಿ ಅಥವಾ ನಾನು ಚಿತ್ರದಲ್ಲಿ ನಟಿಸುತ್ತಿರಲಿ ಒಳ್ಳೆಯ ಚಿತ್ರಗಳನ್ನು ಮಾಡಲು ಪ್ರಯತ್ನಿಸುವುದು ಮತ್ತು ಮಾಡುವುದು ನನ್ನ ಏಕೈಕ ಕೆಲಸ. ಒಳ್ಳೆಯ ಚಿತ್ರಗಳು ಪ್ರೇಕ್ಷಕರನ್ನು ತಲುಪಬೇಕು ಎಂಬುದು ನಮ್ಮ ಆಶಯ. ಉತ್ತಮ ವಿಷಯವನ್ನು ಒದಗಿಸುವುದು ಮತ್ತು ಯೋಗ್ಯವಾದ ಚಲನಚಿತ್ರಗಳನ್ನು ಮಾಡುವುದು ನನಗೆ ಯಾವಾಗಲೂ ಮುಖ್ಯವಾಗಿರುತ್ತದೆ' ಎಂದು ನಟಿ ಹೇಳಿದರು.

'ಶ್ರೀರಾಮ ರಾಜ್ಯಂ', 'ಚಂದ್ರಮುಖಿ', 'ಘಜಿನಿ', 'ರಾಜಾ ರಾಣಿ', 'ಅರಮ್', 'ಇರು ಮುಗನ್', ಮತ್ತು 'ನೇತ್ರಿಕಣ್ಣ್' ಚಿತ್ರಗಳಲ್ಲಿನ ಅಭಿನಯಕ್ಕೆ ಹೆಸರುವಾಸಿಯಾಗಿರುವ ನಯನತಾರಾ, 'ಒಳ್ಳೆಯ ಚಿತ್ರವು ಯಾವಾಗಲೂ ಪ್ರೇಕ್ಷಕರೊಂದಿಗೆ ಒಂದು ಸಂಪರ್ಕವನ್ನು ಸಾಧಿಸುತ್ತದೆ ಎಂದು ನಂಬುತ್ತಾರೆ.

'ನಿಮ್ಮ ಕೆಲಸದ ಬಗ್ಗೆ ನೀವು ಪ್ರಾಮಾಣಿಕರಾಗಿದ್ದರೆ, ನಿಮ್ಮ ಕೆಲಸವನ್ನು ನೀವು ಚೆನ್ನಾಗಿ ಮಾಡಿದರೆ. ಅದು ನಿಮಗೆ ಉತ್ತಮ ಕೆಲಸ ಮಾಡುತ್ತದೆ. ಪ್ರೇಕ್ಷಕರು ನಿಮ್ಮೊಂದಿಗೆ ಸಂಪರ್ಕ ಸಾಧಿಸುತ್ತಾರೆ, ಅವರು ನಿಮ್ಮೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರೆ, ಅವರು ನಿಮ್ಮನ್ನು ಆಚರಿಸುತ್ತಾರೆ. ಇದುವೇ ಜೀವನದ ದೊಡ್ಡ ಸಂತೋಷವಾಗುತ್ತದೆ' ಎಂದರು.

ನಯನತಾರಾ ಅವರ ಇತ್ತೀಚಿನ ಬಿಡುಗಡೆಯು ತಮಿಳಿನ ಹಾರರ್ ಸಿನಿಮಾ 'ಕನೆಕ್ಟ್' ಆಗಿದೆ. ಅಲ್ಲದೆ, ನಿರ್ದೇಶಕ ಅಟ್ಲೀ ಅವರ 'ಜವಾನ್' ಮತ್ತು ಜೀ ಸ್ಟುಡಿಯೋಸ್‌ನೊಂದಿಗೆ ಇನ್ನೂ ಹೆಸರಿಡದ ಚಿತ್ರದಲ್ಲಿ ನಯನತಾರಾ ನಟಿಸುತ್ತಿದ್ದಾರೆ. ಇದನ್ನು ಶಿಮ್ಮಗ್ಗ ಖ್ಯಾತಿಯ ನೀಲೇಶ್ ಕೃಷ್ಣ ನಿರ್ದೇಶಿಸಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com