ಬಾಫ್ಟಾ ಫಿಲ್ಮ್‌ ಪ್ರಶಸ್ತಿ 2023: ಅಂತಿಮ ನಾಮನಿರ್ದೇಶನ ಪಟ್ಟಿಯಿಂದ 'ಆರ್ ಆರ್ ಆರ್' ಔಟ್

ಭಾರತೀಯ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಆಕ್ಷನ್ ಬ್ಲಾಕ್‌ ಬಸ್ಟರ್ 'ಆರ್‌ಆರ್‌ಆರ್' ಚಿತ್ರ ಗುರುವಾರ ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್- ಬಾಫ್ಟಾ ಫಿಲ್ಮ್‌ ಪ್ರಶಸ್ತಿಗಾಗಿ ಕೊನೆ ಹಂತದ ನಾಮನಿರ್ದೇಶನದಿಂದ ಹೊರಗೆ ಬಂದಿದೆ.
ಆರ್ ಆರ್ ಆರ್ ಚಿತ್ರದ ಫೋಸ್ಟರ್
ಆರ್ ಆರ್ ಆರ್ ಚಿತ್ರದ ಫೋಸ್ಟರ್

ಭಾರತೀಯ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಆಕ್ಷನ್ ಬ್ಲಾಕ್‌ ಬಸ್ಟರ್ 'ಆರ್‌ಆರ್‌ಆರ್' ಚಿತ್ರ ಗುರುವಾರ ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್- ಬಾಫ್ಟಾ ಫಿಲ್ಮ್‌ ಪ್ರಶಸ್ತಿಗಾಗಿ ಕೊನೆ ಹಂತದ ನಾಮನಿರ್ದೇಶನದಿಂದ ಹೊರಗೆ ಬಂದಿದೆ.

ಇಂಗ್ಲೀಷ್ ಯೇತರ ಭಾಷೆಯ ವಿಭಾಗದ ಧೀರ್ಘ ಪಟ್ಟಿಯಲ್ಲಿ ಆರ್ ಆರ್ ಆರ್ ಚಿತ್ರ ಇತ್ತು. ಆದರೆ, ಅಂತಿಮ ಐದು ನಾಮ ನಿರ್ದೇಶಿತ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಯಿತು. 'ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್, ಅರ್ಜೆಂಟೀನಾ 1985, ಕೊರ್ಸೇಜ್, ಡಿಸಿಷನ್ ಟು ಲೀವ್ ಮತ್ತು ದಿ ಕ್ವೈಟ್ ಗರ್ಲ್  ಚಿತ್ರಗಳು ಅಂತಿಮವಾಗಿ ನಾಮನಿರ್ದೇಶಿತ ಚಿತ್ರಗಳಾಗಿವೆ. 

ಈ ತಿಂಗಳ ಆರಂಭದಲ್ಲಿ 'ನಾಟು ನಾಟು' ಗೀತೆಗಾಗಿ ಜಾಗತಿಕ ಮಟ್ಟದ 'ಗೋಲ್ಡನ್ ಗ್ಲೋಬ್' ಪ್ರಶಸ್ತಿ ಬಾಚಿಕೊಂಡಿದ್ದ ಆರ್ ಆರ್ ಆರ್ ಚಿತ್ರ ಕೊನೆ ಗಳಿಗೆಯಲ್ಲಿ ಬಾಫ್ಟಾ ಫಿಲ್ಮ್‌ ಪ್ರಶಸ್ತಿಗೆ ನಾಮನಿರ್ದೇಶನಗೊಳ್ಳುವಲ್ಲಿ ವಿಫಲವಾಗಿದೆ. ಬಾಫ್ಟಾ ಫಿಲ್ಮ್‌ ಪ್ರಶಸ್ತಿ 2023 ಸಮಾರಂಭ ಫೆಬ್ರವರಿ 19 ರಂದು ಸೌತ್‌ಬ್ಯಾಂಕ್ ಸೆಂಟರ್‌ನ ರಾಯಲ್ ಫೆಸ್ಟಿವಲ್ ಹಾಲ್‌ನಲ್ಲಿ ನಡೆಯಲಿದೆ.

ಅತ್ಯುತ್ತಮ ಚಿತ್ರ, ಛಾಯಾಗ್ರಹಣ, ಅಭಿನಯ ಸಾಕ್ಷ್ಯಚಿತ್ರ, ಇಂಗ್ಲಿಷ್ ಭಾಷೆಯಲ್ಲದ ಚಲನಚಿತ್ರ ಮತ್ತು ಸಾಕ್ಷ್ಯಚಿತ್ರ ಸೇರಿದಂತೆ 24 ವಿಭಾಗಗಳಿಗೆ ನಾಮನಿರ್ದೇಶನಗಳನ್ನು ಸಂಘಟಕರು ಗುರುವಾರ ಅಂತಿಮಗೊಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com