ಚಿತ್ರದ ಬಗ್ಗೆ ಪ್ರಚಾರ ಮಾಡಲು 'ಹೊಂದಿಸಿ ಬರೆಯಿರಿ' ತಂಡದ ವಿಶಿಷ್ಟ ಮಾರ್ಗ!

ಈ ಹಿಂದೆ ರಾಕ್ ಲೈನ್ ವೆಂಕಟೇಶ್ ಅವರ ಸಹವರ್ತಿಯಾಗಿದ್ದ ರಾಮೇನಹಳ್ಳಿ ಜಗನ್ನಾಥ್ 'ಹೊಂದಿಸಿ ಬರೆಯಿರಿ' ಚಿತ್ರದ ಮೂಲಕ ಚೊಚ್ಚಲ ಬಾರಿಗೆ ನಿರ್ದೇಶಕರಾಗಿದ್ದಾರೆ. ಈ ಚಿತ್ರದಲ್ಲಿ  ಐಶಾನಿ ಶೆಟ್ಟಿ, ಗುಲ್ಟೂ ಖ್ಯಾತಿಯ ನವೀನ್ ಶಂಕರ್, ಮುಂದಿನ ನಿಲ್ದಾಣದ ನಟ ಪ್ರವೀಣ್ ತೇಜ್ ಭಾವನಾ ಮತ್ತು ಶ್ರೀ ಮಹಾದೇವ್ ನಟಿಸಿದ್ದಾರೆ. 
ಹೊಂದಿಸಿ ಬರೆಯಿರಿ ಚಿತ್ರ ತಂಡ
ಹೊಂದಿಸಿ ಬರೆಯಿರಿ ಚಿತ್ರ ತಂಡ
Updated on

ಈ ಹಿಂದೆ ರಾಕ್ ಲೈನ್ ವೆಂಕಟೇಶ್ ಅವರ ಸಹವರ್ತಿಯಾಗಿದ್ದ ರಾಮೇನಹಳ್ಳಿ ಜಗನ್ನಾಥ್ 'ಹೊಂದಿಸಿ ಬರೆಯಿರಿ' ಚಿತ್ರದ ಮೂಲಕ ಚೊಚ್ಚಲ ಬಾರಿಗೆ ನಿರ್ದೇಶಕರಾಗಿದ್ದಾರೆ. ಈ ಚಿತ್ರದಲ್ಲಿ  ಐಶಾನಿ ಶೆಟ್ಟಿ, ಗುಲ್ಟೂ ಖ್ಯಾತಿಯ ನವೀನ್ ಶಂಕರ್, ಮುಂದಿನ ನಿಲ್ದಾಣದ ನಟ ಪ್ರವೀಣ್ ತೇಜ್ ಭಾವನಾ ಮತ್ತು ಶ್ರೀ ಮಹಾದೇವ್ ನಟಿಸಿದ್ದಾರೆ. 

ಹೊಂದಿಸಿ ಬರೆಯಿರಿ ಚಿತ್ರ ಫೆಬ್ರವರಿ 10ರಂದು ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರದ ಬಗ್ಗೆ ಪ್ರಚಾರ ಮಾಡಲು ಚಿತ್ರ ನಿರ್ಮಾಪಕರು ವಿಶಿಷ್ಟವಾದ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಪತ್ರ ಬರೆಯುವ ಮೂಲಕ  ಚಿತ್ರತಂಡ ತಮ್ಮ ಆಲೋಚನೆಗಳನ್ನು ಜನರಿಗೆ ತಲುಪಿಸಲು ಮುಂದಾಗಿದೆ. 

“ಪತ್ರಗಳನ್ನು ಬರೆಯುವುದು ಶತಮಾನಗಳಿಂದಲೂ ಇರುವ ಒಂದು ಕಾಲಾತೀತ ಕಲೆ. ಡಿಜಿಟಲ್ ಸಂವಹನದ ಮೂಲಕ ಪುನರಾವರ್ತಿಸಲು ಸಾಧ್ಯವಾಗದ ಕೈಬರಹದ ಪತ್ರವನ್ನು ಸ್ವೀಕರಿಸುವಲ್ಲಿ ವಿಶೇಷತೆ ಇದೆ. ಪತ್ರಗಳು ಹೆಚ್ಚು ವೈಯಕ್ತಿಕ ಮತ್ತು ಅರ್ಥಪೂರ್ಣವಾಗಿರುತ್ತವೆ ಏಕೆಂದರೆ ಅವುಗಳು ನಮ್ಮನ್ನು ಹೆಚ್ಚು ಚಿಂತನಾ ಶೀಲ ಮತ್ತು ಅರ್ಥಪೂರ್ಣ ರೀತಿಯಲ್ಲಿ ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತದೆ. ಹಾಗಾಗಿ ನಾವು ಈ ಚಿತ್ರದ ಮೂಲಕ ಪತ್ರ ಬರೆಯುವ ಹಳೆಯ ಸಂಪ್ರದಾಯವನ್ನು ಅನುಸರಿಸಲು ಬಯಸಿದ್ದೇವೆ ಮತ್ತು ಇದರಲ್ಲಿ  ಭಾಗವಹಿಸಲು ಪ್ರತಿಯೊಬ್ಬ ಸಿನಿಪ್ರೇಕ್ಷಕರನ್ನು ನಾವು ಕೇಳುತ್ತೇವೆ ಎಂದು ನಿರ್ದೇಶಕರು ಹೇಳುತ್ತಾರೆ.

ಇಲ್ಲಿಯವರೆಗೆ ಅವರು 12,000 ಜನರಿಗೆ ಪೋಸ್ಟ್‌ ಕಾರ್ಡ್‌ಗಳನ್ನು ಕಳುಹಿಸಿದ್ದು, 20,000 ಜನರಿಗೆ ತಲುಪಿಸಿದ್ದಾರೆ. ಪತ್ರ ಸ್ವೀಕರಿಸಿದವರು ಚಿತ್ರದ ಬಗ್ಗೆ ಮಾಹಿತಿ ಪಡೆಯುತ್ತಾರೆ. 

ಸಂಡೇ ಸಿನಿಮಾ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ 'ಹೊಂದಿಸಿ ಬರೆಯಿರಿ' ತಮ್ಮ ಕಾಲೇಜು ದಿನಗಳಿಂದ ಮದುವೆ ಮತ್ತು ನಂತರದ ವಿವಿಧ ಪಾತ್ರಗಳ 12 ವರ್ಷಗಳ ಪ್ರಯಾಣದ ಗುರುತಾಗಿದೆ. ಸಂಬಂಧಗಳ ಕುರಿತಾದ ಚಿತ್ರ ಬಹಳಷ್ಟು ಜೀವನ ಪಾಠಗಳನ್ನು ನೀಡುತ್ತದೆ ಎಂದು ಅವರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com