ಯೋಗರಾಜ ಭಟ್ಟರು ಹೆಣೆದ ಕುತಂತ್ರಿ ನರಿಗಳ ಕಥೆ: ಕರಟಕ-ದಮನಕ ಸಿನಿಮಾ ಪೋಸ್ಟರ್‌ ಔಟ್‌!

ಪಂಚತಂತ್ರ ಕಥೆಯ ಕರಟಕ ಮತ್ತು ದಮನಕಗಳ ಪಾತ್ರಗಳಿಂದ ಸ್ಫೂರ್ತಿ ಪಡೆದ ಈ ಚಲನಚಿತ್ರವು ಆಕ್ಷನ್-ಪ್ಯಾಕ್ಡ್ ಎಂಟರ್ಟೈನರ್ ಎಂದು ಬಿಂಬಿಸಲಾಗಿದೆ. ಚಿತ್ರದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಕರಟಕ ದಮನಕ ಎಂದರೆ ‘ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು.
ಕರಟಕ-ದಮನಕ ಸಿನಿಮಾ ಪೋಸ್ಟರ್
ಕರಟಕ-ದಮನಕ ಸಿನಿಮಾ ಪೋಸ್ಟರ್
Updated on

ಬೆಂಗಳೂರು: ಹ್ಯಾಟ್ರಿಕ್‌ ಹೀರೊ ಶಿವರಾಜ್‌ ಕುಮಾರ್‌ ಇದೇ ಮೊದಲ ಬಾರಿಗೆ ಇಂಡಿಯನ್ ಮೈಕೆಲ್ ಜಾಕ್ಸನ್ ಪ್ರಭುದೇವ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ವಿಶೇಷ ಅಂದರೆ ಈ ಸಿನಿಮಾಗೆ ಯೋಗರಾಜ್ ಭಟ್ ಅವರ ನಿರ್ದೇಶನವಿದೆ.

ಸಿನಿಮಾದ ಟೈಟಲ್‌ ಕೂಡ ರಿವೀಲ್‌ ಆಗಿದ್ದು, ‘K ಕರಟಕ D ದಮನಕ’ ಎಂದು ವಿಭಿನ್ನ ಶೀರ್ಷಿಕೆ ಇಟ್ಟಿದ್ದಾರೆ. ಹಾಗಾದ್ರೆ ‘K ಕರಟಕ D ದಮನಕ’ ಸಿನಿಮಾದ ಅರ್ಥ ಏನು? ಈ ಬಗ್ಗೆ ಪೋಸ್ಟ್‌ ಮೂಲಕ ಯೋಗರಾಜ್‌ ಭಟ್‌ ರಿವೀಲ್‌ ಮಾಡಿದ್ದಾರೆ.

ಪಂಚತಂತ್ರ ಕಥೆಯ ಕರಟಕ ಮತ್ತು ದಮನಕಗಳ ಪಾತ್ರಗಳಿಂದ ಸ್ಫೂರ್ತಿ ಪಡೆದ ಈ ಚಲನಚಿತ್ರವು ಆಕ್ಷನ್-ಪ್ಯಾಕ್ಡ್ ಎಂಟರ್ಟೈನರ್ ಎಂದು ಬಿಂಬಿಸಲಾಗಿದೆ. ಚಿತ್ರದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಕರಟಕ ದಮನಕ ಎಂದರೆ ‘ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು ಕರಟಕ ಇನ್ನೊಂದರ ಹೆಸರು ದಮನಕ.

ಈ ಎರಡೂ ನರಿಗಳು ಕಾಡು ಮತ್ತು ನಾಡಿನ ತಲೆ ಕೆಡಿಸಿ ಇತಿಹಾಸವಾದವು. ಈ ಕುತಂತ್ರಿ ನರಿಗಳು ಇಂದು ಇಲ್ಲಿ ಮಾನವ ರೂಪ ತಾಳಿವೆ. ಎಚ್ಚರಿಕೆ’ ಎಂದು ಫೋಸ್ಟ್ ಮಾಡಿದ್ದಾರೆ. ಹಲವು ದಿನಗಳಿಂದ ಈ ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ರಾಕ್ ಲೈನ್ ವೆಂಕಟೇಶ್ ಕೂಡ ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಅವರು ಈ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಪಾತ್ರ ನಿರ್ವಹಿಸುತ್ತಿದ್ದಾರೆ.

ಹಲವು ದಿನಗಳಿಂದ ಈ ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ರಾಕ್ ಲೈನ್ ವೆಂಕಟೇಶ್ ಕೂಡ ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಅವರು ಈ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಪಾತ್ರ ನಿರ್ವಹಿಸುತ್ತಿದ್ದಾರೆ.

ಬೆಂಗಳೂರು ಹೊರವಲಯ, ಕೋಲಾರ, ಗೌರಿಬಿದನೂರು, ಉತ್ತರ ಕರ್ನಾಟಕದ ಹೊರವಲಯ ಸೇರಿದಂತೆ ವಿವಿಧೆಡೆ ಈಗಾಗಲೇ  ಚಿತ್ರೀಕರಣ ನಡೆದಿದೆ. ಪ್ರಸ್ತುತ, ಅಂತಿಮ ಹಂತದ ಚಿತ್ರೀಕರಣದಲ್ಲಿದೆ. ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್‌ ಲಾಂಛನದಲ್ಲಿ ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ. ಜೊತೆಗೆ ಪ್ರಿಯಾ ಆನಂದ್ ಮತ್ತು ನಿಶ್ವಿಕಾ ನಾಯ್ಡು ನಾಯಕಿಯರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com