34 ವರ್ಷಗಳ ನಂತರ ಮತ್ತೆ ತೆರೆಗೆ 'ಇನ್ಸ್ ಪೆಕ್ಟರ್ ವಿಕ್ರಮ್': ಬರ್ತ್ ಡೇ ಬಾಯ್ 'ಶಿವಣ್ಣ' ಹೊಸ ಸಿನಿಮಾ!
ಸೆಂಚ್ಯುರಿ ಸ್ಟಾರ್ ಶಿವರಾಜಕುಮಾರ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದೀಗ ಸೆಂಚುರಿ ಸ್ಟಾರ್ ಶಿವಣ್ಣ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
Published: 12th July 2023 01:37 PM | Last Updated: 13th July 2023 06:52 PM | A+A A-

ಶಿವಣ್ಣ ಹೊಸ ಸಿನಿಮಾ
ಸೆಂಚ್ಯುರಿ ಸ್ಟಾರ್ ಶಿವರಾಜಕುಮಾರ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದೀಗ ಸೆಂಚುರಿ ಸ್ಟಾರ್ ಶಿವಣ್ಣ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಈಗ ಹೊಸ ಸಿನಿಮಾವನ್ನು ಘೋಷಿಸಿದ್ದಾರೆ, ಇನ್ಸ್ ಪೆಕ್ಟರ್ ವಿಕ್ರಮ್ ಲಕಿ ಗೋಪಾಲ್ ಚೊಚ್ಚಲ ನಿರ್ದೇಶನದಲ್ಲಿ ಐ ವಿ ರಿಟರ್ನ್ಸ್ ಎಂಬ ಶೀರ್ಷಿಕೆಯಡಿ ಸಿನಿಮಾ ಬರುತ್ತಿದೆ. ಮೈಲಾರಿ ಸಹಯೋಗದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ.
ಮೊದಲನೆಯದಾಗಿ, ಇನ್ಸ್‌ಪೆಕ್ಟರ್ ವಿಕ್ರಮ್ ಚಿತ್ರದಲ್ಲಿ ಶಿವಣ್ಣ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇದೊಂದು ಹಾಸ್ಯಮಯ ಥ್ರಿಲ್ಲರ್ ಸಿನಿಮಾವಾಗಿದೆ, 1989 ರಲ್ಲಿ ಉದಯ್ ಶಂಕರ್ ಕಥೆ ಬರೆದ ಸಿನಿಮಾವನ್ನು ದಿನೇಶ್ ಬಾಬು ನಿರ್ದೇಶನ ಮಾಡಿದ್ದರು. ಶಿವಣ್ಣ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
ಇದನ್ನೂ ಓದಿ: ಹ್ಯಾಟ್ರಿಕ್ ಹೀರೋ', 'ಸೆಂಚುರಿ ಸ್ಟಾರ್' ಶಿವರಾಜ್ ಕುಮಾರ್ ಗೆ ಹುಟ್ಟುಹಬ್ಬ ಸಂಭ್ರಮ: ಅಭಿಮಾನಿಗಳಿಂದ ಆಚರಣೆ
34 ವರ್ಷಗಳ ನಂತರ ಲಕಿ ಗೋಪಾಲ್ ಮತ್ತೆ ಇನ್ಸ್‌ಪೆಕ್ಟರ್ ವಿಕ್ರಮ್ ಅವರನ್ನು ಮತ್ತೆ ಬೆಳ್ಳಿತೆರೆಗೆ ತರಲು ಮುಂದಾಗಿದ್ದಾರೆ. ಶಿವರಾಜಕುಮಾರ್ ಅವರ ಜನ್ಮದಿನದಂದು ಅಧಿಕೃತ ಘೋಷಣೆಯನ್ನು ಮಾಡಲಾಯಿತು, ಜೊತೆಗೆ ಸಂ ಐ ವಿ ರಿಟರ್ನ್ಸ್ ಶೀರ್ಷಿಕೆ ಅನಾವರಣಗೊಳಿಸಿತು.
ಲಕಿ ಗೋಪಾಲ್ ಮತ್ತು ಅವರ ತಂಡವು ಚಿತ್ರದ ಚಿತ್ರಕಥೆ ಮತ್ತು ಸಂಭಾಷಣೆಗಾಗಿ ಕೆಲಸ ಮಾಡುತ್ತಿದೆ. ಶಿವರಾಜಕುಮಾರ್ ಅವರು ತಮ್ಮಈ ಮೊದಲಿನ ಕಮಿಟ್‌ಮೆಂಟ್‌ಗಳನ್ನು ಮುಗಿಸಿದ ನಂತರ ಈ ಚಿತ್ರದಲ್ಲಿ ಕೆಲಸ ಮಾಡುತ್ತಾರೆ.
ಇದನ್ನೂ ಓದಿ: 45' ಸಿನಿಮಾದಲ್ಲಿನ ನನ್ನ ಲುಕ್ ಬಗ್ಗೆ ರಾಜ್ ಬಿ ಶೆಟ್ಟಿ ಮೆಚ್ಚುಗೆ: ನಟ ಶಿವರಾಜ್‌ಕುಮಾರ್
ಏತನ್ಮಧ್ಯೆ, ಶ್ರೀನಿ ಅವರ ನಿರ್ದೇಶನದ ಘೋಸ್ಟ್ ನಿರ್ಮಾಪಕರು ಅವರ ಹುಟ್ಟುಹಬ್ಬದಂದು ಚಿತ್ರದ ಫರ್ಸ್ಟ್ ಲುಕ್ ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ. ಐವಿ ರಿಟರ್ನ್ಸ್ ಜೊತೆಗೆ, ಯೋಗರಾಜ್ ಭಟ್ ನಿರ್ದೇಶನದ ಕರಟಕ ಧಮನಕ, ಅರ್ಜುನ್ ಜನ್ಯ ಅವರ 45, ನರ್ತನ್ ಅವರ ಭೈರತಿ ರಣಗಲ್ ಮತ್ತು ಅವರ ತಮಿಳು ಯೋಜನೆಗಳಾದ ಜೈಲರ್ (ರಜನಿಕಾಂತ್) ಮತ್ತು ಕ್ಯಾಪ್ಟನ್ ಮಿಲ್ಲರ್ (ಧನುಷ್) ಚಿತ್ರಗಳಲ್ಲಿ ಶಿವಣ್ಣ ನಟಿಸುತ್ತಿದ್ದಾರೆ.