ವೀರಪ್ಪನ್ (ಸಂಗ್ರಹ ಚಿತ್ರ)
ವೀರಪ್ಪನ್ (ಸಂಗ್ರಹ ಚಿತ್ರ)

ಕಾಡುಗಳ್ಳ  ವೀರಪ್ಪನ್ ಕುರಿತು 'ದಿ ಹಂಟ್ ಫಾರ್ ವೀರಪ್ಪನ್' ನೆಟ್‌ಫ್ಲಿಕ್ಸ್ ಡಾಕ್ಯು-ಸೀರಿಸ್ ಟೀಸರ್ ಬಿಡುಗಡೆ

Netflix ತನ್ನ ಮುಂಬರುವ ಸರಣಿ, 'ದಿ ಹಂಟ್ ಫಾರ್ ವೀರಪ್ಪನ್‌' ಟೀಸರ್ ಅನ್ನು ಬಿಡುಗಡೆ ಮಾಡಿದೆ. ಇದು ತಮಿಳುನಾಡು, ಕರ್ನಾಟಕ ಮತ್ತು ಕೇರಳದ ಕಾಡುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕುಖ್ಯಾತ ಡಕಾಯಿತ ವೀರಪ್ಪನ್ ಕುರಿತದ್ದಾಗಿದೆ. ಈ ಸರಣಿ ಆಗಸ್ಟ್ 4ರಂದು ಪ್ರಸಾರವಾಗಲಿದೆ.

Netflix ತನ್ನ ಮುಂಬರುವ ಡಾಕ್ಯು-ಸರಣಿ 'ದಿ ಹಂಟ್ ಫಾರ್ ವೀರಪ್ಪನ್‌' ಟೀಸರ್ ಅನ್ನು ಬಿಡುಗಡೆ ಮಾಡಿದೆ. ಇದು ತಮಿಳುನಾಡು, ಕರ್ನಾಟಕ ಮತ್ತು ಕೇರಳದ ಕಾಡುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕುಖ್ಯಾತ ಕಾಡುಗಳ್ಳ ವೀರಪ್ಪನ್ ಕುರಿತದ್ದಾಗಿದೆ. ಈ ಸರಣಿ ಆಗಸ್ಟ್ 4ರಂದು ಪ್ರಸಾರವಾಗಲಿದೆ.

'ಪತಿ, ತಂದೆ, ನಾಯಕ ಮತ್ತು ವಾಟೆಂಡ್ ಕ್ರಿಮಿನಲ್ ಅಲ್ಲದೆ, ಉದ್ದ ಮತ್ತು ದಪ್ಪ ಮೀಸೆ ಮತ್ತು ಮುಖದ ತುಂಬ ಮೂಳೆಗಳೇ ಕಾಣಿಸುವಂತ ವ್ಯಕ್ತಿಯ ಚಿತ್ರಣವು ಪ್ರಸಿದ್ಧವಾಗಿದ್ದರೂ, ವೀರಪ್ಪನ್‌ ಜೀವನದ ಇತರ ಹಲವು ಅಂಶಗಳು ದಕ್ಷಿಣ ಭಾರತದ ಕರಾಳ ಕಾಡುಗಳಲ್ಲಿ ಮರೆಯಾಗಿವೆ. ಡಾಕ್ಯು-ಸರಣಿಯು ಈ ಸಾಹಸಗಾಥೆಯನ್ನು ಅವರಿಗೆ ಹತ್ತಿರವಿರುವವರಿಂದ ಹೊರತಿಳಿಸಲಾಗುತ್ತದೆ' ಎಂದು ಕಾರ್ಯಕ್ರಮದ ಸಾರಾಂಶದಲ್ಲಿ ತಿಳಿಸಲಾಗಿದೆ.

'ದಿ ಹಂಟ್ ಫಾರ್ ವೀರಪ್ಪನ್' ಅನ್ನು ಸೆಲ್ವಮಣಿ ಸೆಲ್ವರಾಜ್ ನಿರ್ದೇಶಿಸಿದ್ದಾರೆ ಮತ್ತು ಅವೇಡಸಿಯಸ್ ಒರಿಜಿನಲ್ಸ್‌ನ ಅಪೂರ್ವ ಬಕ್ಷಿ ಮತ್ತು ಮೋನಿಶಾ ತ್ಯಾಗರಾಜನ್ ನಿರ್ಮಿಸಿದ್ದಾರೆ.

ವೀರಪ್ಪನ್ ಸೆರೆ ಕಾರ್ಯಾಚರಣೆ ಭಾರತದ ಅತ್ಯಂತ ದೀರ್ಘಾವಧಿಯ ಮತ್ತು ದುಬಾರಿ ಮಾನವ ಬೇಟೆಗಳಲ್ಲಿ ಒಂದಾಗಿದೆ ಎಂಬುದನ್ನು ಗಮನಿಸಬೇಕು. ಈ ಮುಂಬರುವ ಸರಣಿಯು ಈ ಬೇಟೆಯ ಹಿಂದಿನ ಕಾಣದ ಮುಖಗಳನ್ನು ಪರಿಶೀಲಿಸುತ್ತದೆ. ಜೊತೆಗೆ ಇವರಿಗೆ ಹತ್ತಿರದಲ್ಲಿದ್ದವರ ಪ್ರತ್ಯಕ್ಷ ಮಾಹಿತಿಗಳನ್ನು ನೀಡುತ್ತದೆ. ಈ ಸರಣಿಯು ನಾಲ್ಕು ಭಾಗಗಳಾಗಿದ್ದು, ತಮಿಳು, ಇಂಗ್ಲಿಷ್, ಹಿಂದಿ, ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯವಿರುತ್ತದೆ.

Related Stories

No stories found.

Advertisement

X
Kannada Prabha
www.kannadaprabha.com