ಪರಸ್ಪರರ ಕೆಲಸದ ಮೇಲಿನ ಅಭಿಮಾನದಿಂದ ನಮ್ಮ ಸ್ನೇಹ ಪ್ರಾರಂಭವಾಯಿತು: ವಸಿಷ್ಠ ಸಿಂಹ- ಹರಿಪ್ರಿಯಾ!

'ಪರಸ್ಪರರ ಕೆಲಸದ ಬಗ್ಗೆ ಪರಸ್ಪರ ಅಭಿಮಾನದಿಂದ  ಸ್ನೇಹ ಪ್ರಾರಂಭವಾಯಿತು ಎಂದು ಈಗ ದಂಪತಿಯಾಗಿರುವ ವಶಿಷ್ಠ  ಸಿಂಹ ಮತ್ತು ಹರಿಪ್ರಿಯಾ ಹೇಳಿಕೊಂಡಿದ್ದಾರೆ.
ವಸಿಷ್ಠ ಸಿಂಹ- ಹರಿಪ್ರಿಯಾ
ವಸಿಷ್ಠ ಸಿಂಹ- ಹರಿಪ್ರಿಯಾ

'ಪರಸ್ಪರರ ಕೆಲಸದ ಬಗ್ಗೆ ಪರಸ್ಪರ ಅಭಿಮಾನದಿಂದ  ಸ್ನೇಹ ಪ್ರಾರಂಭವಾಯಿತು ಎಂದು ಈಗ ದಂಪತಿಯಾಗಿರುವ ವಶಿಷ್ಠ ಸಿಂಹ ಮತ್ತು ಹರಿಪ್ರಿಯಾ ಹೇಳಿಕೊಂಡಿದ್ದಾರೆ. ಅಶೋಕ್ ತೇಜಾ ನಿರ್ದೇಶನದ 'ಯದಾ ಯದಾ ಹಿ' ಚಿತ್ರದಲ್ಲಿ ಇವರಿಬ್ಬರು ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ. ಸ್ಕ್ರಿಪ್ಟ್‌ನಿಂದ ಮಾತ್ರ ಈ ಚಿತ್ರ ಒಪ್ಪಿಕೊಂಡಿದ್ದಾಗಿ ಹರಿಪ್ರಿಯಾ ಬಹಿರಂಗಪಡಿಸಿದರೆ, ತನ್ನ ಪತ್ನಿ ಹರಿಪ್ರಿಯಾ ಮೇಲಿನ ಪ್ರೀತಿಯಿಂದ ಈ ಚಿತ್ರದಲ್ಲಿ ಅಭಿನಯಿಸಿರುವುದಾಗಿ ವಶಿಷ್ಠ ಸಿಂಹ ಹೇಳಿದ್ದಾರೆ.

ಉತ್ತಮ ನಟ ಹಾಗೂ ಗಾಯಕರಾಗಿರುವ ವಶಿಷ್ಠ ಸಿಂಹ, ಹರಿಪ್ರಿಯಾಗೆ ಹಾಡನ್ನು ಕಲಿಸಿದರೆ, ಪ್ರತಿಯಾಗಿ ಆಕೆಯಿಂದ ಅವರು ನೃತ್ಯ ಕಲಿತಾರಂತೆ. ಹೀಗೆ ಅವರಿಬ್ಬರೂ ಒಬ್ಬರನ್ನೊಬ್ಬರು ಅಭಿನಂದಿಸಿಕೊಂಡಿದ್ದಾರೆ. ಸಿನಿ ಎಕ್ಸ್ ಪ್ರೆಸ್ ಜೊತೆಗೆ ಯದಾ ಯದಾ ಹಿ' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ ಅನುಭವ, ಭವಿಷ್ಯದ ಯೋಜನೆಗಳು ಮತ್ತು ಅವರ ಮುಂದಿನ ಹಾದಿಯನ್ನು ಹಂಚಿಕೊಂಡಿದ್ದಾರೆ. 

ಆರಂಭದಲ್ಲಿ “ಕೆಲವು ದೃಶ್ಯಗಳು ತುಂಬಾ ಅನ್ಯೋನ್ಯತೆ ಬಯಸುತ್ತಿದ್ದರಿಂದ ಚಿತ್ರದಲ್ಲಿ ನಟಿಸಬೇಕೋ ಅಥವಾ ಬೇಡವೋ ಎಂದು ಹಿಂಜರಿಯುತ್ತಿದ್ದೆ. ಒಂದು ವೇಳೆ ವಸಿಷ್ಠ  ಒಪ್ಪದಿದ್ದರೆ ಈ ಚಿತ್ರದಿಂದ ಹಿಂದೆ ಸರಿಯುತ್ತಿದೆ. ಅವರು ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು ಎಂದರು. ಹರಿಪ್ರಿಯಾ ಕಲಾವಿದೆಯಾಗಿ ತೊಡಗಿಸಿಕೊಂಡಾಗ ಅವರಿಗೆ ಸಂಪೂರ್ಣ ಬೆಂಬಲ ಬೇಕಾಗುತ್ತದೆ. ಚಿತ್ರ ಮಾಡಲು ಪ್ರಜ್ಞಾಪೂರ್ವಕ ನಿರ್ಧಾರ ತೆಗೆದುಕೊಂಡೆವು. ಪ್ರೀತಿಯಲ್ಲಿದ್ದಾಗ ರೋಮ್ಯಾನ್ಸ್ ಸನ್ನಿವೇಶ ತುಂಬಾ ಹಾಸ್ಯಕರವಾಗಿತ್ತು ಎಂದು ವಸಿಷ್ಠ ಸಿಂಹ ಹೇಳಿದರು. 

'ಯದಾ ಯದಾ ಹಿ' ತೆಲುಗಿನ ಯವಾರು ಚಿತ್ರದ ರೀಮೇಕ್ ಆಗಿದೆ, ಇದು ಸ್ಪ್ಯಾನಿಷ್ ಚಿತ್ರ ಕಾಂಟ್ರಾಟೈಂಪೋದಿಂದ ಸ್ಫೂರ್ತಿ ಪಡೆದ ಬಾಲಿವುಡ್ ನ ಬದ್ಲಾ ದ ರಿಮೇಕ್ ಆಗಿದೆ. ಸೀನ್ ಬೈ ಸೀನ್ ರಿಮೇಕ್‌ಗಳಲ್ಲಿ ನಂಬಿಕೆಯಿಲ್ಲ ಎಂದು ಎನ್ನುವ ವಸಿಷ್ಠ ರಿಮೇಕ್ ಚಿತ್ರ ಸ್ಥಳೀಯ ಸಂಸ್ಕೃತಿ ಮತ್ತು ನೇಟಿವಿಟಿಯೊಂದಿಗೆ ಬೆರೆಯಬೇಕು ಎಂದು ಹೇಳುತ್ತಾರೆ.

ಚಿತ್ರದಲ್ಲಿನ ಪ್ರತಿಯೊಂದು ಪಾತ್ರವು ನೈಜವೆಂದು ಅನಿಸುತ್ತವೆ ಮತ್ತು ಪ್ರತಿ ಕಲಾವಿದರೂ ಉತ್ತಮವಾಗಿ ನಟಿಸಿರುವುದಾಗಿ ಹರಿಪ್ರಿಯಾ ಹೇಳಿದರೆ, ಪ್ರಮುಖ ಪಾತ್ರಗಳು ಋಣಾತ್ಮಕ ಅಂಶ ಹೊಂದಿದ್ದು,  ಭಾವನೆಗಳು ಮತ್ತು ಸಂತಸದಾಯಕ ಪಾತ್ರಗಳ ಮಿಶ್ರಣವಾಗಿದೆ ಎಂದು ವಸಿಷ್ಠ ಸಿಂಹ ತಿಳಿಸಿದರು. 

'ಗೋದಿ ಬಣ್ಣ ಸಾಧಾರಾಣ ಮೈಕಟ್ಟು'' ಚಿತ್ರದಲ್ಲಿನ ಉತ್ತಮ ಪಾತ್ರದೊಂದಿಗೆ ವಸಿಷ್ಠ ಸಿಂಹ ಅವರ ಮೇಲೆ ಲವ್ ಆಯಿತು ಎಂದು ಹರಿಪ್ರಿಯಾ ತಿಳಿಸಿದರು. ರಿಕಿಯಲ್ಲಿನ ಆಕೆಯ ಪಾತ್ರವನ್ನು ಆನಂದಿಸಿದ್ದಾಗಿ ವಸಿಷ್ಠ ತಿಳಿಸಿದರು. ರಿಕಿ ಚಿತ್ರದಲ್ಲಿ ಎರಡು ಶೆಡ್ ಗಳಲ್ಲಿ ಹರಿಪ್ರಿಯಾ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com