37 ವರ್ಷಗಳ ನಂತರ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

ಖ್ಯಾತ ಚಲನಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಗುಂಟೂರಿನ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದಲ್ಲಿ ಬಿ ಟೆಕ್ ಮುಗಿಸಿದ 37 ವರ್ಷಗಳ ನಂತರ ತಮ್ಮ ಎಂಜಿನಿಯರಿಂಗ್ ಪದವಿ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ.
ರಾಮ್ ಗೋಪಾಲ್ ವರ್ಮಾ
ರಾಮ್ ಗೋಪಾಲ್ ವರ್ಮಾ
Updated on

ವಿಜಯವಾಡ: ಖ್ಯಾತ ಚಲನಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಗುಂಟೂರಿನ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದಲ್ಲಿ ಬಿ ಟೆಕ್ ಮುಗಿಸಿದ 37 ವರ್ಷಗಳ ನಂತರ ತಮ್ಮ ಎಂಜಿನಿಯರಿಂಗ್ ಪದವಿ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ.

ಜನಪ್ರಿಯ ಚಲನಚಿತ್ರ ನಿರ್ದೇಶಕರಾಗಿರುವ ಆರ್‌ಜಿವಿ, ತಮ್ಮ ಪದವಿ ಪ್ರಮಾಣಪತ್ರದ ಚಿತ್ರವನ್ನು ಮತ್ತು ತಮ್ಮ ಉತ್ಸಾಹವನ್ನೂ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 

'ನಾನು ಉತ್ತೀರ್ಣರಾದ 37 ವರ್ಷಗಳ ನಂತರ ಇಂದು ನನ್ನ ಬಿ ಟೆಕ್ ಪದವಿಯನ್ನು ಸ್ವೀಕರಿಸಲು ತುಂಬಾ ಥ್ರಿಲ್ ಆಗಿದ್ದೇನೆ. 1985ರಲ್ಲಿ ನಾನು ಸಿವಿಲ್ ಇಂಜಿನಿಯರಿಂಗ್ ಅನ್ನು ಅಭ್ಯಾಸ ಮಾಡಲು ಆಸಕ್ತಿ ಹೊಂದಿಲ್ಲದ ಕಾರಣ ಅದನ್ನು ಎಂದಿಗೂ ತೆಗೆದುಕೊಂಡಿರಲಿಲ್ಲ. ವಿಶ್ವವಿದ್ಯಾನಿಲಯಕ್ಕೆ ಧನ್ಯವಾದಗಳು' ಎಂದು ಅವರು ಟ್ವೀಟ್ ಮಾಡಿದ್ದಾರೆ.

ನಿರ್ದೇಶಕರು 1985ರ  ಜುಲೈನಲ್ಲಿ ನಡೆದ ಬಿ ಟೆಕ್ (ಸಿವಿಲ್ ಇಂಜಿನಿಯರಿಂಗ್) ಪರೀಕ್ಷೆಯಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರು.

ಆರ್‌ಜಿವಿ ಅವರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಂದಿಗಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. 'ಅಶಿಕ್ಷಿತನಾದ ನಾನು ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದ ಉನ್ನತ ಶಿಕ್ಷಣ ಪಡೆದ ಪ್ರಾಧ್ಯಾಪಕರೊಂದಿಗೆ. 'ನಾನು ಗೌರವಾನ್ವಿತ ಉಪಕುಲಪತಿ ಪ್ರೊ. ರಾಜಶೇಖರ್ ಅವರಿಗೆ ನಾನು ಈ ಗೌರವಕ್ಕೆ ಅರ್ಹನಲ್ಲ ಎಂದು ಹೇಳಿದ್ದೇನೆ. ಆದರೆ ಅವರು ನನ್ನನ್ನು ಒತ್ತಾಯಿಸಿದರು' ಎಂದು ಬರೆದಿದ್ದಾರೆ.

'ಪ್ರೊ. ರಾಜಶೇಖರ್ ಅವರೇ.. ನಾನು ಸಾಮಾನ್ಯವಾಗಿ ಗೌರವಕ್ಕೆ ಪಾತ್ರನಾಗಲು ಭಯಪಡುತ್ತೇನೆ. ಆದರೆ, ಈ ಬಾರಿ ಅಂತಹ ಗೌರವಾನ್ವಿತ ಜನರೊಂದಿಗೆ ಗೌರವ ತುಂಬಿದ ಸಂದರ್ಭದಲ್ಲಿ ನಾನು ನಿಜವಾಗಿಯೂ ಗೌರವವನ್ನು ಅನುಭವಿಸುತ್ತೇನೆ' ಎಂದು ಬರೆದಿದ್ದಾರೆ.

60 ವರ್ಷ ವಯಸ್ಸಿನ ಅವರು 1989 ರಲ್ಲಿ ಕ್ರೈಮ್ ಥ್ರಿಲ್ಲರ್ ಶಿವನೊಂದಿಗೆ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com