ವಿಶ್ವದಾದ್ಯಂತ ರಿಲೀಸ್ ಆದ ಮೊದಲ ದಿನ 54 ಕೋಟಿ ರೂ.ಕಲೆಕ್ಷನ್ ಮಾಡಿದ ಕಬ್ಜ, 2ನೇ ದಿನಕ್ಕೆ 100 ಕೋಟಿ!

ಕಳೆದ ಶುಕ್ರವಾರ ಬಿಡುಗಡೆಯಾದ ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶಿವಣ್ಣ ಅಭಿನಯದ ಮಲ್ಟಿ ಸ್ಟಾರರ್ ಸಿನಿಮಾ ಕಬ್ಜ ವಿಶ್ವದಾದ್ಯಂತ ಬಿಡುಗಡೆಯಾದ ಮೊದಲ ದಿನವೇ 54 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಎರಡನೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದೆ.
ಕಬ್ಜ ಸಿನಿಮಾ

ಫೋಸ್ಟರ್ ಬಿಡುಗಡೆ ಮೂಲಕ ಈ ವಿಷಯವನ್ನು ಚಿತ್ರ ತಂಡ ಅಧಿಕೃತವಾಗಿ ತಿಳಿಸಿದೆ. ನಟ ಉಪೇಂದ್ರ, ನಿರ್ದೇಶಕರ ಆರ್. ಚಂದ್ರು ಹಾಗೂ ಕೆಪಿ ಶ್ರೀಕಾಂತ್ ಮತ್ತಿತರರು ಕೇಕ್ ಕತ್ತರಿಸುವ ಮೂಲಕ ಕಬ್ಜ ಚಿತ್ರದ ಯಶಸ್ಸನ್ನು ಆಚರಿಸಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರ ಜನ್ಮ ದಿನವಾದ ಮಾರ್ಚ್ 17 ರಂದು ಕನ್ನಡ, ತೆಲುಗು, ತಮಿಳು,ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆ ಕಂಡಿರುವ ಈ ಚಿತ್ರ ವಿಶ್ವದಾದ್ಯಂತ ಸುಮಾರು 4,000 ಪರದೆಗಳಲ್ಲಿ ತೆರೆಗೆ ಬಂದಿತ್ತು.

ಸದ್ಯದ ಲೆಕ್ಕಾಚಾರದ ಪ್ರಕಾರ, ಕಬ್ಜ ಮೊದಲ ದಿನ ಕರ್ನಾಟಕದಲ್ಲಿ ರೂ. 20 ಕೋಟಿ, ಹಿಂದಿ ಆವೃತ್ತಿಯಿಂದ 12 ಕೋಟಿ, ತೆಲುಗು ರಾಜ್ಯಗಳಿಂದ 7 ಕೋಟಿ , ತಮಿಳು ಭಾಗದಲ್ಲಿ ರೂ. 5 ಕೋಟಿ , ಮಲಯಾಳಂನಿಂದ 3 ಕೋಟಿ ಹಾಗೂ ವಿದೇಶಗಳಿಂದ 7 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com