ಮಾರ್ಚ್ 25ರಿಂದ 'ವೀಕೆಂಡ್ ವಿತ್ ರಮೇಶ್ ಸೀಸನ್ 5': ಈ ಬಾರಿ ಸಾಧಕರ ಸೀಟಿನಲ್ಲಿ ಕೂರುವ ಅತಿಥಿಗಳು ಇವರೇ...

ಕರ್ನಾಟಕದ ವಿವಿಧ ಕ್ಷೇತ್ರಗಳ ಸಾಧಕರ ಜೀವನಗಾಥೆಯನ್ನು ತೋರಿಸುವ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್'. ಈಗಾಗಲೇ 4 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿ 5ನೇ ಸೀಸನ್ ಗೆ ಕಾಲಿಟ್ಟಿದೆ. ವೀಕ್ಷಕರು ಕಾತರದಿಂದ ಕಾಯುತ್ತಿರುವ ದಿನ ಬಂದೇ ಬಿಟ್ಟಿದೆ.
ವೀಕೆಂಡ್ ವಿತ್ ರಮೇಶ್ ಸೀಸನ್ ನ ಪ್ರೋಮೋ ಸಂಗ್ರಹ ಚಿತ್ರ
ವೀಕೆಂಡ್ ವಿತ್ ರಮೇಶ್ ಸೀಸನ್ ನ ಪ್ರೋಮೋ ಸಂಗ್ರಹ ಚಿತ್ರ

ಕರ್ನಾಟಕದ ವಿವಿಧ ಕ್ಷೇತ್ರಗಳ ಸಾಧಕರ ಜೀವನಗಾಥೆಯನ್ನು ತೋರಿಸುವ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್'. ಈಗಾಗಲೇ 4 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿ 5ನೇ ಸೀಸನ್ ಗೆ ಕಾಲಿಟ್ಟಿದೆ. ಕಳೆದ ಮೂರೂವರೆ ವರ್ಷಗಳಿಂದ ವೀಕ್ಷಕರು ಕಾತರದಿಂದ ಕಾಯುತ್ತಿರುವ ದಿನ ಬಂದೇ ಬಿಟ್ಟಿದೆ.

ಮಾರ್ಚ್ 25ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ನಟ, ನಿರೂಪಕ, ವಾಗ್ಮಿ ರಮೇಶ್ ಅರವಿಂದ್ ಅವರ ಸಾರಥ್ಯದಲ್ಲಿ ಪ್ರಸಾರ ಕಾಣಲಿದೆ. ಶೋನ ಪ್ರೋಮೋಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. 

ಈ ಬಾರಿಯ ಸಾಧಕರ ಸೀಟಿನಲ್ಲಿ ಯಾರ್ಯಾರು ಕೂರಲಿದ್ದಾರೆ?: ವೀಕೆಂಡ್ ವಿತ್ ರಮೇಶ್ ಸೀಸನ್ 5ನ ಕುರಿತು ನಿನ್ನೆ ವಾಹಿನಿಯ ಚೀಫ್ ಕಂಟೆಂಟ್ ಆಫೀಸರ್ ರಾಘವೇಂದ್ರ ಹುಣಸೂರು ಮತ್ತು ನಿರೂಪಕ ನಟ ರಮೇಶ್ ಅರವಿಂದ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅದರಲ್ಲಿ ಈ ಬಾರಿಯ ಸೀಸನ್ ನಲ್ಲಿ ಬರುವ ಅತಿಥಿಗಳ ಹೆಸರನ್ನು ಬಹಿರಂಗಪಿಸಿದರು. 

ಮೊದಲ ಎಪಿಸೋಡ್ ನಲ್ಲಿ ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಕಾಣಿಸಿಕೊಳ್ಳಲಿದ್ದಾರೆ. ಅವರ ಭಾಗದ ಚಿತ್ರೀಕರಣ ಇಂದು ಆರಂಭವಾಗಲಿದೆ ಎಂದು ರಾಘವೇಂದ್ರ ಹುಣಸೂರು ಮಾಹಿತಿ ನೀಡಿದರು. 

<strong>ನಟಿ, ಮಾಜಿ ಸಂಸದೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ </strong>
ನಟಿ, ಮಾಜಿ ಸಂಸದೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ 

ಎರಡನೇ ಎಪಿಸೋಡ್ ನಲ್ಲಿ ಕನ್ನಡ ಸೇರಿದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ, ಅದ್ಭುತ ನೃತ್ಯಗಾರ ಪ್ರಭುದೇವ ಸಾಧಕರ ಕುರ್ಚಿಯ ಮೇಲೆ ಕೂರಲಿದ್ದಾರೆ.

<strong>ನಟ, ನಿರ್ದೇಶಕ ಪ್ರಭುದೇವ</strong> 
ನಟ, ನಿರ್ದೇಶಕ ಪ್ರಭುದೇವ 

ಈ ಸೀಸನ್​ನಲ್ಲಿ ನಟ ಧ್ರುವ ಸರ್ಜಾ, ನಟಿ ರಚಿತಾ ರಾಮ್, ನಟಿ ಮಾಲಾಶ್ರೀ, ಇಶಾ ಫೌಂಡೇಶನ್​ನ ಜಗ್ಗಿ ವಾಸುದೇವ್ , ಖ್ಯಾತ ಹೃದ್ರೋಗ ತಜ್ಞ ಮಂಜುನಾಥ್ ಸೇರಿದಂತೆ ಇನ್ನೂ ಹಲವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

<strong>ಸದ್ಗುರು ಜಗ್ಗಿ ವಾಸುದೇವ </strong>
ಸದ್ಗುರು ಜಗ್ಗಿ ವಾಸುದೇವ 

ವಿಶೇಷವೆಂದರೆ ಇನ್ನು 16 ಸಾಧಕರ ಬಳಿಕ ನೂರನೇ ಸಾಧಕರು ಬರಲಿದ್ದು, ಆ ಎಪಿಸೋಡ್​ಗೆ ಬಹಳ ವಿಶೇಷ ಅತಿಥಿಯೊಬ್ಬರು ಸಾಧಕರ ಕುರ್ಚಿ ಏರಲಿದ್ದಾರೆ. ನೂರನೇ ಎಪಿಸೋಡ್​ಗೆ ಬರುವ ಅತಿಥಿ ಆ ಚೇರ್​ಗೆ ನ್ಯಾಯ ಕೊಡಲಿದ್ದಾರೆ ಎಂದರು ನಟ ರಮೇಶ್ ಅರವಿಂದ್.

ಇಲ್ಲಿಯವರೆಗೂ 84 ಸಾಧಕರು ಕುರ್ಚಿಯ ಮೇಲೆ ಕೂತಿದ್ದು 110 ಸಂಚಿಕೆಗಳು ಪ್ರಸಾರವಾಗಿವೆ. ಇನ್ನು 16 ಸಾಧಕರು ಅದ ಬಳಿಕ ಸೆಂಚುರಿ ಬಾರಿಸುತ್ತೇವೆ. ಸಿನಿಮಾದಲ್ಲಿಯೂ ಸೆಂಚುರಿ ಹೊಡಿದಿದ್ದೇನೆ ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com