ರೆಬೆಲ್ ಸ್ಟಾರ್ ಅಭಿಮಾನಿಗಳಿಗೆ ಗುಡ್ ನ್ಯೂಸ್: 42 ವರ್ಷಗಳ ನಂತರ 'ಅಂತ' ಸಿನಿಮಾ ಮತ್ತೆ ರಿಲೀಸ್!

ರೆಬೆಲ್ ಸ್ಟಾರ್‌' ಅಂಬರೀಷ್ ಅವರ ಸಿನಿಮಾ ಜೀವನಕ್ಕೆ ಮಹತ್ವದ  ತಿರುವು ನೀಡಿದ ಸಿನಿಮಾ 'ಅಂತ'. 1981ರಲ್ಲಿ ತೆರೆಕಂಡಿದ್ದ ಈ ಸಿನಿಮಾವು ಆ ಕಾಲಕ್ಕೆ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿತ್ತು.
ಅಂತ ಸಿನಿಮಾ ಸ್ಟಿಲ್
ಅಂತ ಸಿನಿಮಾ ಸ್ಟಿಲ್

ಬೆಂಗಳೂರು:  ರೆಬೆಲ್ ಸ್ಟಾರ್‌' ಅಂಬರೀಷ್ ಅವರ ಸಿನಿಮಾ ಜೀವನಕ್ಕೆ ಮಹತ್ವದ  ತಿರುವು ನೀಡಿದ ಸಿನಿಮಾ 'ಅಂತ'. 1981ರಲ್ಲಿ ತೆರೆಕಂಡಿದ್ದ ಈ ಸಿನಿಮಾವು ಆ ಕಾಲಕ್ಕೆ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿತ್ತು.

ರೆಬೆಲ್ ಸ್ಟಾರ್' ಅಂಬರೀಷ್ ಅವರ ಹುಟ್ಟುಹಬ್ಬದ ಪ್ರಯುಕ್ತ,  42 ವರ್ಷಗಳ ಬಳಿಕ ಮತ್ತೆ ಅಂತ ಸಿನಿಮಾವನ್ನು ಮರುಬಿಡುಗಡೆ ಮಾಡಲಾಗುತ್ತಿದೆ.  ಮೇ 29ರಂದು ಅಂಬರೀಷ್ ಜನ್ಮದಿನ. ಆ ಸಲುವಾಗಿ ಮೇ 26ರಂದು 'ಅಂತ' ಸಿನಿಮಾವನ್ನು ಹೊಸರೂಪದಲ್ಲಿ, ಹೊಸ ತಂತ್ರಜ್ಞಾನ ಅಳವಡಿಸಿ ಮರುಬಿಡುಗಡೆ ಮಾಡಲಾಗುತ್ತಿದೆ.

ಎಸ್‌ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಿದ್ದ 'ಅಂತ' ಸಿನಿಮಾವು 1981ರಲ್ಲಿ ತೆರೆಗೆ ಬಂತು. ವಿಶೇಷವೆಂದರೆ, ಇದು ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದ ಐದನೇ ಸಿನಿಮಾವಾಗಿತ್ತು. ಅಂಬರೀಷ್ ಜತೆಗೆ 4ನೇ ಸಿನಿಮಾವಾಗಿತ್ತು. ಎಚ್ ಕೆ ಅನಂತ ರಾವ್ ಬರೆದ 'ಅಂತ' ಕಾದಂಬರಿಯನ್ನು, ಅದೇ ಹೆಸರಿನಲ್ಲಿ ಸಿನಿಮಾ ಮಾಡಿ ಸಿಂಗ್ ಬಾಬು ಗೆಲುವು ಕಂಡಿದ್ದರು.

ಈ ಸಿನಿಮಾವನ್ನು ಆಗ ಮತ್ತೊಬ್ಬರು ನಿರ್ದೇಶನ ಮಾಡಬೇಕಿತ್ತು. ಆದರೆ ಪತ್ರಕರ್ತ ಎಂ ಬಿ ಸಿಂಗ್ ಅವರ ಮೂಲಕ ನನಗೆ ಈ ಕಥೆ ಸಿಕ್ಕಿತ್ತು. 'ಅಂತ' ಚಿತ್ರದ ಚಿತ್ರೀಕರಣವು ಮೈಸೂರಿನಲ್ಲೇ ನಡೆದಿದೆ. 18 ಸೆಟ್ ಹಾಕಿ ಶೂಟಿಂಗ್ ಮಾಡಲಾಗಿತ್ತು. ಆ ಕಾಲಕ್ಕೆ ನಿರೀಕ್ಷೆಗೂ ಮೀರಿದ ಯಶಸ್ಸನ್ನು 'ಅಂತ' ಸಿನಿಮಾ ಗಳಿಸಿತ್ತು. 'ಅಂತ' ಸಿನಿಮಾಗೆ ಬೇರೆ ಬೇರೆ ಭಾಷೆಗಳಲ್ಲಿ ತುಂಬಾ ಬೇಡಿಕೆ ಇತ್ತು. ಇಲ್ಲಿ ಕಥೆಯೇ ನಿಜವಾದ ಹೀರೋ. ಈ ಸಿನಿಮಾ ಮರುಬಿಡುಗಡೆ ಆಗುತ್ತಿದೆ, ಒಳ್ಳೆಯದಾಗಲಿ' ಎಂದು ನಿರ್ದೇಶಕ ಎಸ್‌ ವಿ ರಾಜೇಂದ್ರ ಸಿಂಗ್ ಬಾಬು ಹಾರೈಸಿದರು. ಜಿ ಕೆ ವೆಂಕಟೇಶ್ ಅವರ ಸಂಗೀತ, ಪ್ರಕಾಶ್ ಅವರ ಛಾಯಾಗ್ರಹಣ ಈ ಸಿನಿಮಾಕ್ಕಿದೆ. ಮಾರುತಿ, ವೇಣು ಹಾಗೂ ಕೆ.ಸಿ.ಎನ್ ಚಂದ್ರಶೇಖರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು.

ಚಿತ್ರವು ಎಲ್ಲಾ ನಿರೀಕ್ಷೆಗಳನ್ನು ಮೀರಿ ಅದ್ಭುತ ಯಶಸ್ಸನ್ನು ಗಳಿಸಿತು. ನನ್ನ ಜ್ಞಾನದ ಪ್ರಕಾರ, ಲೆಕ್ಕವಿಲ್ಲದಷ್ಟು ಚಲನಚಿತ್ರಗಳು ಈ ಸಿನಿಮಾ ಕಥೆಯಿಂದ ಸ್ಫೂರ್ತಿ ಪಡೆದಿವೆ. ಇದು ಪ್ಯಾನ್-ಇಂಡಿಯಾ ಚಲನಚಿತ್ರವಾಗಿ ಜನಪ್ರಿಯತೆಯನ್ನು ಗಳಿಸಿತು, ವಿವಿಧ ಭಾಷೆಗಳಲ್ಲಿ ಹೆಚ್ಚಿನ ಬೇಡಿಕೆಯೊಂದಿಗೆ ತಯಾರಾಯಿತು.  ನನ್ನ ಅಭಿಪ್ರಾಯದಲ್ಲಿ, ಕಥೆಯೇ ಚಿತ್ರದ ನಿಜವಾದ ನಾಯಕ, ಕಥೆಯೇ. ಒಳ್ಳೆಯ ಕಥೆ ಯಾವಾಗಲೂ ಯಶಸ್ಸನ್ನು ತಂದುಕೊಡುತ್ತದೆ ಎಂದು ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.

'ಅಂತ' ಚಿತ್ರವನ್ನು ಸುಮಾರು 70ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಮರುಬಿಡುಗಡೆ ಮಾಡಲಾಗುತ್ತಿದೆ. 35 ಎಂಎಂ ನಿಂದ 70 ಎಂಎಂಗೆ ಅಪ್‌ಡೇಟ್ ಮಾಡಲಾಗಿದೆ. ಸೌಂಡ್, ಕಲರಿಂಗ್ ಎಲ್ಲವನ್ನೂ ಈಗಿನ ರೀತಿಗೆ ಬದಲಿಸಲಾಗಿದೆಯಂತೆ. ಅಂಬರೀಷ್ ಎದುರು ಲಕ್ಷ್ಮೀ ನಾಯಕಿಯಾಗಿ ಕಾಣಿಸಿಕೊಂಡರೆ, ವಜ್ರಮುನಿ, ಸುಂದರಕೃಷ್ಣ ಅರಸ್, ಮುಸುರಿ ಕೃಷ್ಣಮೂರ್ತಿ, ಪ್ರಭಾಕರ್, ಜಯಮಾಲಾ, ಪಂಡರೀಬಾಯಿ ಮುಂತಾದವರು ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com