ಮಲಯಾಳಂ ನಟಿ ಡಾ. ಪ್ರಿಯಾ ಕಳೆದ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಾವನ್ನಪ್ಪಿದ ಸಮಯದಲ್ಲಿ 35 ವರ್ಷದ ಪ್ರಿಯಾ ಅವರು 8 ತಿಂಗಳ ತುಂಬು ಗರ್ಭೀಣಿಯಾಗಿದ್ದರು.
ಚಿಕಿತ್ಸೆಗಾಗಿ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿಯೇ ಆಕೆಗೆ ಹೃದಯಾಘಾತವಾಗಿತ್ತು. ಸದ್ಯ ಅವರ ಮಗು ಐಸಿಯುನಲ್ಲಿದೆ. ಪ್ರಿಯಾ ಅವರ ಹಠಾತ್ ಸಾವು ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಶೋಕದ ಅಲೆಯನ್ನು ಸೃಷ್ಟಿಸಿದೆ.
ಪ್ರಿಯಾ ಸಾವಿನ ಸುದ್ದಿಯನ್ನು ನಟ ಕಿಶೋರ್ ಸತ್ಯ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಡಾ.ಪ್ರಿಯಾ ಎಂಟು ತಿಂಗಳ ಗರ್ಭಿಣಿಯಾಗಿದ್ದು, ಕಳೆದ ರಾತ್ರಿ ನಿಧನರಾದರು ಎಂದು ಅವರು ಹೇಳಿದರು. ಮಗು ಐಸಿಯುನಲ್ಲಿದೆ, ಯಾವುದೇ ತೊಂದರೆ ಇಲ್ಲ. ನಿನ್ನೆ ಮಂಗಳವಾರ ಸಾಮಾನ್ಯ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಿದ್ದರು. ಇದ್ದಕ್ಕಿದ್ದಂತೆ ಹೃದಯ ಸ್ತಂಭನ ಸಂಭವಿಸಿತ್ತು.
ಮಲಯಾಳಂ ಟಿವಿ ಇಂಡಸ್ಟ್ರಿಯಲ್ಲಿ ಪ್ರಿಯಾ ಅವರದ್ದು ದೊಡ್ಡ ಹೆಸರು. ಕರುತಮುತ್ತು ಚಿತ್ರದಲ್ಲಿನ ಪಾತ್ರಕ್ಕಾಗಿ ಅವರು ಮನ್ನಣೆ ಗಳಿಸಿದರು. ವೃತ್ತಿಯಲ್ಲಿ ವೈದ್ಯೆಯಾಗಿದ್ದ ಪ್ರಿಯಾ ನಂತರ ನಟನೆಗೆ ಕಾಲಿಟ್ಟರು. ಆದರೆ ಮದುವೆಯ ನಂತರ ಅವರು ನಟನೆಯಿಂದ ವಿರಾಮ ತೆಗೆದುಕೊಂಡರು. ಆಕೆ ತಿರುವನಂತಪುರಂನ ಪಿಆರ್‌ಎಸ್ ಆಸ್ಪತ್ರೆಯಲ್ಲಿ ಎಂಡಿ ಮಾಡುತ್ತಿದ್ದಳು ಎಂದು ಹೇಳಲಾಗುತ್ತಿದೆ.
ಇತ್ತೀಚೆಗಷ್ಟೇ ನಟಿ ರಂಜೂಷಾ ಮೆನನ್ ನಿಧನ
ಮಲಯಾಳಂ ನಟಿ ರಂಜುಷಾ ಮೆನನ್ ಡಾ.ಪ್ರಿಯಾ ಸಾವಿಗೂ ಒಂದು ದಿನ ಮೊದಲು ಸಾವನ್ನಪ್ಪಿದ್ದರು. ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ರಂಜುಷಾ ಮೆನನ್ ಹಠಾತ್ ಸಾವಿನ ಆಘಾತದಿಂದ ಇಂಡಸ್ಟ್ರಿ ಇನ್ನೂ ಹೊರಬಂದಿರಲಿಲ್ಲ. ಅಷ್ಟರಲ್ಲಾಗಲೇ ಡಾ.ಪ್ರಿಯಾ ಸಾವು ದೊಡ್ಡ ಹೊಡೆತ ನೀಡಿದೆ.
Advertisement