
ನಾವಿಕ, ಅತಿರಥ, ನುಗ್ಗಿಕಾಯಿ, ಲೋಕಲ್ ಟ್ರೇನ್ ಮತ್ತು ಲಂಕೆಯಂತಹ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಎಸ್ಟರ್ ನೊರೊನ್ಹಾ ಇದೀಗ ದಿ ವೆಕೆಂಟ್ ಹೌಸ್ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.
ಇಬ್ಬರು ಯುವಕರ ಸುತ್ತ ಸುತ್ತುವ ಪ್ರೇಮಕಥೆ ಎಂದು ಹೇಳಲಾದ ಈ ಚಿತ್ರವು ಯೋಗರಾಜ್ ಭಟ್ ಅವರ ಗರಡಿ ಜೊತೆಗೆ ನವೆಂಬರ್ 10ರಂದು ಬಿಡುಗಡೆಯಾಗಲಿದೆ. ನಿರ್ದೇಶನದ ಜೊತೆಗೆ, ಎಸ್ಟರ್ ನಟನೆ ಜೊತೆಗೆ ನಿರ್ಮಾಣ ಮತ್ತು ಸಂಗೀತ ನಿರ್ದೇಶನದ ಜವಾಬ್ದಾರಿಗಳನ್ನು ಸಹ ವಹಿಸಿಕೊಂಡಿದ್ದಾರೆ.
ಕನ್ನಡ ಮತ್ತು ಕೊಂಕಣಿ ಎರಡರಲ್ಲೂ ಚಿತ್ರೀಕರಿಸಲಾದ ಜಾನೆಟ್ ನೊರೊನ್ಹಾ ಪ್ರೊಡಕ್ಷನ್ಸ್ ಚಿತ್ರ ನಿರ್ಮಿಸಿದೆ. ಮಂಗಳೂರಿನಲ್ಲಿ ಸಂಪೂರ್ಣ ಚಿತ್ರೀಕರಣವಾಗಿದೆ. ಚಿತ್ರ ಖಾಲಿ ಮನೆಯಲ್ಲಿ ನಡೆಯುವ ಘಟನೆಗಳ ಸುತ್ತ ಸುತ್ತುತ್ತದೆ.
ಮೂಲತಃ ಕರಾವಳಿ ಪ್ರದೇಶದವರಾದ ಎಸ್ಟರ್, ತಮ್ಮ ಜೀವನದ ಬಹುಪಾಲು ಮುಂಬೈನಲ್ಲಿ ಕಳೆದಿದ್ದರು. ಅನುಪಮ್ ಖೇರ್ ಅವರ ನಟನಾ ಶಾಲೆಯಲ್ಲಿ ತರಬೇತಿ ಪಡೆದರು. ತೆಲುಗು ಮತ್ತು ತುಳು ಸಿನಿಮಾಗಳಲ್ಲೂ ನಟಿಸಿರುವ ಅವರು ಈಗ ತಮ್ಮ ವರ್ಷಗಳ ಅನುಭವವನ್ನು ತಮ್ಮ ನಿರ್ದೇಶನದ ಚೊಚ್ಚಲ ಚಿತ್ರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ದಿ ವೆಕೆಂಟ್ ಹೌಸ್ ಗೆ ನರೇಂದ್ರ ಗೌಡ್ ಅವರ ಛಾಯಾಗ್ರಹಣ ಮತ್ತು ವಿಜಯ್ ರಾಜ್ ಸಂಕಲನವಿದೆ.
Advertisement