ವಿಷಯ ಆಧಾರಿತ ಕಥೆಗಳೇ ಸಿನಿಮಾದ ಜೀವ: 'ಮಿಥ್ಯ' ಬಗ್ಗೆ ರಕ್ಷಿತ್ ಶೆಟ್ಟಿ

'ವಿಷಯ ಆಧಾರಿತ ಕಥೆಗಳೇ ಸಿನಿಮಾದ ಜೀವ ಎಂದು  ಖ್ಯಾತ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ. 
ನಟ ರಕ್ಷಿತ್ ಶೆಟ್ಟಿ
ನಟ ರಕ್ಷಿತ್ ಶೆಟ್ಟಿ

ಮುಂಬೈ: 'ವಿಷಯ ಆಧಾರಿತ ಕಥೆಗಳೇ ಸಿನಿಮಾದ ಜೀವ ಎಂದು  ಖ್ಯಾತ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ. 

ಮಿಥ್ಯಾ ಎಂಬ ಕನ್ನಡದ ಫೀಚರ್ ಸಿನಿಮಾ ರಕ್ಷಿತ್ ಶೆಟ್ಟಿ ಅವರ ಪರಂವಾಹ್ ಸ್ಟುಡಿಯೋಸ್ ಬ್ಯಾನರ್ ನಡಿ ನಿರ್ಮಾಣವಾಗಿದ್ದು. ಈ ಸಿನಿಮಾ ಕುರಿತು ಮಾತನಾಡಿರುವ ರಕ್ಷಿತ್ ಶೆಟ್ಟಿ,  ದೊಡ್ಡ ಬಜೆಟ್ ಸಿನಿಮಾ ಹಾಗೂ ವಿಷಯಾಧಾರಿತ ಕಥೆ ಇರುವ ಸಿನಿಮಾಗಳೆರಡಕ್ಕೂ ಭಾರತೀಯ ಸಿನಿಮಾದಲ್ಲಿ ಅವಕಾಶಗಳಿವೆ ಎಂದು ಹೇಳಿದ್ದಾರೆ. 

ಮಿಥ್ಯ ಎಂದು ಪ್ರೀತಿಯಿಂದ ಕರೆಸಿಕೊಳ್ಳುವ, ತಂದೆ-ತಾಯಿಯನ್ನು ಕಳೆದುಕೊಳ್ಳುವ ಸಂದರ್ಭವನ್ನು ಎದುರಿಸುವ 11 ವರ್ಷದ ಮಿಥುನ್ ಎಂಬ ಬಾಲಕನ ಕಥೆಯನ್ನು ಈ ಮಿಥ್ಯಾ ಫೀಚರ್ ಸಿನಿಮಾ ಒಳಗೊಂಡಿದೆ.

ದೊಡ್ಡ ಬಜೆಟ್ ಸಿನಿಮಾಗಳು ಇಂಡಸ್ಟ್ರಿಯನ್ನು ಉತ್ಸಾಹಭರಿತವಾಗಿರಿಸಿದರೆ, ವಿಷಯಾಧಾರಿತ ಶ್ರೀಮಂತ ಕಥೆಗಳು ಸಿನಿಮಾಗಳ ಜೀವವಾಗಿರುತ್ತವೆ. ಇತ್ತೀಚಿನ ದಿನಗಳಲ್ಲಿ ಇಂತಹ ಕಥೆಗಳಿಗೆ ವೀಕ್ಷಕರು ಹೆಚ್ಚುತ್ತಿದ್ದಾರೆ ಎನ್ನುತಾರೆ ರಕ್ಷಿತ್ ಶೆಟ್ಟಿ.

"ಇಂತಹ ಕಥೆಗಳು ಇತ್ತೀಚಿನ ದಿನಗಳಲ್ಲಿ ಗಣನೀಯ ಪ್ರೇಕ್ಷಕರನ್ನು ಕರೆತರುವುದಷ್ಟೇ ಅಲ್ಲದೇ, ದೂರ ಸರಿಯಬಹುದಾಗಿದ್ದ ಪ್ರೇಕ್ಷಕರನ್ನು ಹಿಡಿದಿಟ್ಟಿದೆ" ಎಂಬುದು ರಕ್ಷಿತ್ ಶೆಟ್ಟಿ ಅಭಿಪ್ರಾಯ. 

ವಸ್ತುನಿಷ್ಠ ಮತ್ತು ಆಳವನ್ನು ಹೊಂದಿರುವ ಚಲನಚಿತ್ರಗಳನ್ನು ಬೆಂಬಲಿಸುವುದು ಮುಖ್ಯವಾಗಿದೆ ಎಂದು ನಾನು ನಂಬುವುದರಿಂದ" ಮಿಥ್ಯಾ ಕಥೆಯನ್ನು ಬೆಂಬಲಿಸಿದ್ದೇನೆ ಎಂದು ರಕ್ಷಿತ್ ಶೆಟ್ಟಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 

ಇತ್ತೀಚೆಗೆ ಜಿಯೋ ಮಾಮಿ ಮುಂಬೈ ಫಿಲ್ಮ್ ಫೆಸ್ಟಿವಲ್ 2023 ರಲ್ಲಿ ತನ್ನ ವಿಶ್ವ ಪ್ರಥಮ ಪ್ರದರ್ಶನವನ್ನು ಹೊಂದಿದ್ದ "ಮಿತ್ಯ", ನಿರ್ದೇಶಕ ಸುಮಂತ್ ಭಟ್ ಅವರ ಚೊಚ್ಚಲ ಚಲನಚಿತ್ರವಾಗಿದೆ. 

ನಾನು ಮಕ್ಕಳನ್ನು ಅಂತ್ಯಕ್ರಿಯೆಯ ಸನ್ನಿವೇಶದಲ್ಲಿ ನೋಡಿದೆ. ಆ ಪೈಕಿ ಕಿರಿಯ ಮಗು, ಏನಾಗುತ್ತಿದೆ ಎಂಬುದೂ ತಿಳಿಯದೇ ಎಲ್ಲೋ ಕಳೆದುಹೋದಂತೆ ಅನ್ನಿಸುತ್ತಿತ್ತು. ಆ ಪರಿಸ್ಥಿತಿಯ ಗಂಭೀರತೆ ಬಗ್ಗೆ ಆ ಮಗುವಿಗೆ ತಿಳಿದಂತೆ ಕಾಣಲಿಲ್ಲ. ಈ ಬಳಿಕ ನಾನು ನನ್ನ ಮೊದಲ ಫೀಚರ್ ಸಿನಿಮಾವನ್ನು ಮಾಡಲು ನಿರ್ಧರಿಸಿದಾಗ, ಈ ದುಃಖ ಭಾವವನ್ನು ಅನ್ವೇಷಿಸಬೇಕೆಂದುಕೊಂಡಿದ್ದೆ. ಪೋಷಕರ ಅಂತ್ಯಕ್ರಿಯೆಯಲ್ಲಿ ಪುಟ್ಟ ಮಕ್ಕಳ ಚಿತ್ರಣ ನನ್ನನ್ನು ಹಲವು ದಿನಗಳವರೆಗೆ ಕಾಡುತ್ತಿತ್ತು. ಆ ವಾಸ್ತವವನ್ನು ಮಕ್ಕಳು ಹೇಗೆ ಜೀರ್ಣಿಸಿಕೊಳ್ಳುತ್ತಾರೆ? ಆ ನೋವು ಎಂದಿಗಾದರೂ ಕಮ್ಮಿಯಾಗುತ್ತಾ? ಮಕ್ಕಳ ದುಃಖ ಹೇಗಿರುತ್ತದೆ? ಎಂಬೆಲ್ಲಾ ಅಂಶಗಳನ್ನು ಅನ್ವೇಷಿಸಿ, ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವೇ ಈ ಮಿಥ್ಯಾ ಸಿನಿಮಾ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com