ಖ್ಯಾತ ಮಲಯಾಳಂ ನಟ ಕಲಾಭವನ್ ಹನೀಫ್ ವಿಧಿವಶ

ಹಲವಾರು ಮಲಯಾಳಂ ಚಲನಚಿತ್ರಗಳು ಹಾಗೂ ಟಿವಿ ಧಾರಾವಾಹಿಗಳಲ್ಲಿ ಹಾಸ್ಯ ಪಾತ್ರ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸಿದ್ದ ಜನಪ್ರಿಯ ನಟ ಹಾಗೂ ಮಿಮಿಕ್ರಿ ಕಲಾವಿದ ಕಲಾಭವನ್ ಹನೀಫ್ ಗುರುವಾರ ನಿಧನರಾಗಿದ್ದಾರೆ.
ಕಲಾಭವನ್ ಹನೀಫ್ 
ಕಲಾಭವನ್ ಹನೀಫ್ 

ತಿರುವನಂತಪುರಂ: ಹಲವಾರು ಮಲಯಾಳಂ ಚಲನಚಿತ್ರಗಳು ಹಾಗೂ ಟಿವಿ ಧಾರಾವಾಹಿಗಳಲ್ಲಿ ಹಾಸ್ಯ ಪಾತ್ರ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸಿದ್ದ ಜನಪ್ರಿಯ ನಟ ಹಾಗೂ ಮಿಮಿಕ್ರಿ ಕಲಾವಿದ ಕಲಾಭವನ್ ಹನೀಫ್ ಗುರುವಾರ ನಿಧನರಾಗಿದ್ದಾರೆ.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು, ಕಳೆದ ಎರಡು ದಿನಗಳಿಂದ ಕೊಚ್ಚಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ. .

ಎರ್ನಾಕುಲಂ ಜಿಲ್ಲೆಯ ಮತ್ತಂಚೇರಿಯ ಹಮ್ಜಾ ಮತ್ತು ಜುಬೈದಾ ದಂಪತಿಯ ಪುತ್ರನಾಗಿದ್ದ ಮುಹಮ್ಮದ್ ಹನೀಫ್ ಮೂಕಾಭಿನಯ ನಟರಾಗಿದ್ದರು. ನಾಟಕದ ಮೂಲಕ ತಮ್ಮ ನಟನಾ ವೃತ್ತಿಯನ್ನು ಆರಂಭಿಸಿದ ಅವರು ನಂತರ ಮಲಯಾಳಂ ಚಿತ್ರರಂಗದಲ್ಲಿ ಸಣ್ಣ ಪಾತ್ರಗಳೊಂದಿಗೆ ಸಕ್ರಿಯರಾದರು. ಕೇರಳದಲ್ಲಿ ಮಿಮಿಕ್ರಿ ಕಲೆಯನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಸಿದ್ಧ ಪ್ರದರ್ಶನ ತಂಡದ ಕಲಾಭವನದ ಸದಸ್ಯರಾಗಿದ್ದರು.

ಕಲಾಭವನದಲ್ಲಿ ಅವರ ಅನೇಕ ಸಹ ಕಲಾವಿದರಂತೆ, ಹನೀಫಾ ಕೂಡ ಹಾಸ್ಯ ಪಾತ್ರದ ಮೂಲಕ ಸಿನಿಮಾ ಜಗತ್ತಿಗೆ ಪ್ರವೇಶಿಸಿದರು. ಚೆಪ್ಪುಕಿಲುಕ್ಕನ ಚಂಗತಿ ಅವರ ಮೊದಲ ಚಿತ್ರ. ನಂತರ ಅವರು 300 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ, ಅವುಗಳಲ್ಲಿ ಬಹುಪಾಲು ಹಾಸ್ಯಮಯ ಪಾತ್ರಗಳೇ ಆಗಿತ್ತು. ಕಲಾಭವನ್ ಅವರು ಪತ್ನಿ ವಹಿದಾ ಮತ್ತು ಮಕ್ಕಳಾದ ಸಿತಾರಾ ಹನೀಫ್ ಮತ್ತು ಶಾರುಖ್ ಹನೀಫ್ ಅವರನ್ನು ಅಗಲಿದ್ದಾರೆ.

ಛೋಟಾ ಮುಂಬೈ (2007), ಉಸ್ತಾದ್ ಹೋಟೆಲ್ (2012), ದೃಶ್ಯಂ (2013), ಅಮರ್ ಅಕ್ಬರ್ ಅಂಟೋನಿ (2015) ಹಾಗೂ ಕಟ್ಟಪ್ಪನಯಿಲೆ ರಿತ್ವಿಕ್ ರೋಷನ್ (2016)ನಂತಹ ಜನಪ್ರಿಯ ಚಿತ್ರಗಳಲ್ಲೂ ಅವರು ಪುಟ್ಟ ಪಾತ್ರಗಳನ್ನು ನಿರ್ವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com