
ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ 10ನೇ ಆವೃತ್ತಿ ಐದನೇ ವಾರ ಮುಗಿಯುತ್ತಾ ಬಂದಿರುವಂತೆಯೇ ಕುತೂಹಲಕಾರಿ ಪ್ರಸಂಗವೊಂದು ನಡೆದಿದೆ. ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಸ್ಪರ್ಧಿ ವರ್ತೂರ್ ಸಂತೋಷ್ ಸೇಫ್ ಆಗಿದ್ದರೂ ಮನೆಯಿಂದ ಹೋರ ಹೋಗಲು ನಿರ್ಧರಿಸಿದ್ದಾರೆ. ಅಂದಹಾಗೆ, ಈ ವಾರ ನೀತು ವನಜಾಕ್ಷಿ ಎಲಿಮಿನೇಷನ್ ಆಗಿದ್ದಾರೆ.
ಹೌದು. ಇಂದು ಬಿಡುಗಡೆಯಾದ ಪ್ರೋಮೊದಲ್ಲಿ, 'ಹೊರಗಡೆ ಒಂದು ಘಟನೆ ನಡೆಯಿತು. (ಹುಲಿ ಉಗುರು ಪ್ರಕರಣ) ಆ ಘಟನೆಯನ್ನು ಮರೆತು ಇಲ್ಲಿ ಆಟವಾಡಬೇಕೆಂದುಕೊಂಡರೂ ನನ್ನಿಂದ ಆಗುತ್ತಿಲ್ಲ. ನಾನು ಹೊರಗಡೆನೇ ಇರಬೇಕು ಎಂದು ಇಷ್ಟಪಡುತ್ತೇನೆ' ಎಂದು ಕೈ ಮುಗಿದು ಕಿಚ್ಚ ಸುದೀಪ್ ಬಳಿ ಕೈ ಮುಗಿದು ಬೇಡಿಕೊಂಡಿದ್ದಾರೆ.
ವರ್ತೂರ್ ಸಂತೋಷ್ ಮಾತಿನಿಂದ ಬೇಸರಗೊಂಡ ಸುದೀಪ್, ನೀವು 34, 15,472 ವೋಟ್ ಗಳನ್ನು ಪಡೆದು ಎಲಿಮಿನೇಷನ್ ನಿಂದ ಪಾರಾಗಿದ್ದು, ನಿಮಗೆ ವೋಟ್ ನೀಡಿದ ಜನರ ವಿರುದ್ಧ ಹೋಗುವುದಕ್ಕೆ ಅಗಲ್ಲ ಎಂದು ಹೇಳಿ ವೇದಿಕೆಯಿಂದ ತೆರಳಿದ್ದಾರೆ.
ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ವರ್ತೂರ್ ಸಂತೋಷ್ ಗೆ ಸಹ ಸ್ಪರ್ಧಿಗಳು ಒತ್ತಾಯಿಸಿದ್ದಾರೆ. ವರ್ತೂರ್ ಸಂತೋಷ್ ಬಿಗ್ ಬಾಸ್ ಮನೆಯಲ್ಲಿ ಉಳಿಯುತ್ತಾರಾ? ಅಥವಾ ಮನೆಯಿಂದ ಹೊರ ಹೋಗುತ್ತಾರಾ? ಅಥವಾ ನೀತು ವನಜಾಕ್ಷಿ ಮನೆಯಿಂದ ಹೊರಗೆ ಬರುತ್ತಾರಾ? ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
Advertisement