‘ಬ್ಯಾಡ್ ಮ್ಯಾನರ್ಸ್’ ಚಿತ್ರದಲ್ಲಿ ಸೂರಿ ವಿಭಿನ್ನ ಪ್ರಯೋಗ!

ಪಾಪ್‌ಕಾರ್ನ್ ಮಂಕಿ ಟೈಗರ್ ಸಿನಿಮಾಕ್ಕೆ ಬರಹಗಾರ ಮತ್ತು ಚಿತ್ರಕಥೆಗಾರ ಎಂದು ಸೂರಿ ಪರಿಚಯಿಸಿದ್ದ ಅಮ್ರಿ, ಮುಂಬರುವ ಚಿತ್ರ 'ಬ್ಯಾಡ್ ಮ್ಯಾನರ್ಸ್‌'ನಲ್ಲಿ ಬಹು ದೊಡ್ಡ ಪಾತ್ರವನ್ನು ವಹಿಸಿಕೊಂಡಿದ್ದಾರೆ.
ಅಮ್ರಿಯೊಂದಿಗೆ ಸೂರಿ
ಅಮ್ರಿಯೊಂದಿಗೆ ಸೂರಿ

ಪಾಪ್‌ಕಾರ್ನ್ ಮಂಕಿ ಟೈಗರ್ ಸಿನಿಮಾಕ್ಕೆ ಬರಹಗಾರ ಮತ್ತು ಚಿತ್ರಕಥೆಗಾರ ಎಂದು ಸೂರಿ ಪರಿಚಯಿಸಿದ್ದ ಅಮ್ರಿ, ಮುಂಬರುವ ಚಿತ್ರ 'ಬ್ಯಾಡ್ ಮ್ಯಾನರ್ಸ್‌'ನಲ್ಲಿ ಬಹು ದೊಡ್ಡ ಪಾತ್ರವನ್ನು ವಹಿಸಿಕೊಂಡಿದ್ದಾರೆ.

ಅಭಿಷೇಕ್ ಅಂಬರೀಶ್, ರಚಿತಾ ರಾಮ್ ಮತ್ತು ಪ್ರಿಯಾಂಕರ್ ಕುಮಾರ್ ಅಭಿನಯದ ಈ ಚಿತ್ರದಲ್ಲಿ ಅಮ್ರಿ, ಸುರೇಂದ್ರ ನಾಥ್ ಮತ್ತು ಸೂರಿ ಅವರೊಂದಿಗೆ ಕಥೆ, ಚಿತ್ರಕಥೆ ಹಾಗೂ ಮಾಸ್ತಿಯೊಂದಿಗೆ ಸಂಭಾಷಣೆ ರಚಿಸುವಲ್ಲಿಯೂ ತೊಡಗಿಸಿಕೊಳ್ಳುವ ಮೂಲಕ ಬಹು ಪಾತ್ರ ನಿರ್ವಹಿಸಿದ್ದಾರೆ.

'ನೆಮ್ಮದಿ ಬಯಸಿ ಸಿನಿಮಾ ಜಗತ್ತಿಗೆ ಬಂದೆ. ಬರವಣಿಗೆ ಮತ್ತು ಛಾಯಾಗ್ರಹಣದ ಮೇಲಿನ ಉತ್ಸಾಹ ಶಿಕ್ಷಣದಿಂದ ನನ್ನನ್ನು ದೂರ ಮಾಡಿತು. ಹೆಚ್ಚಿನ ಪ್ರಯತ್ನದ ನಂತರ, ಸೂರಿ ನನ್ನ ಮಾರ್ಗದರ್ಶಕರಾದರು'' ಎಂದು ಹೇಳುವ ಮೂಲಕ ಚಿತ್ರರಂಗ ಪ್ರವೇಶ ಕುರಿತು ಮಾಹಿತಿ ಹಂಚಿಕೊಂಡರು.

ಪಾಪ್‌ಕಾರ್ನ್ ಮಂಕಿ ಟೈಗರ್ ನಂತರ, ಬ್ಯಾಡ್ ಮ್ಯಾನರ್ಸ್ ಸ್ಕ್ರಿಪ್ಟ್ ರೈಟಿಂಗ್‌ನಲ್ಲಿ ಗುರುತಿಸಿತು. ನನಗೆ ಹೆಚ್ಚಿನ ಜವಾಬ್ದಾರಿ ನೀಡಿತು ಮತ್ತು ನನ್ನ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಿತು. ಕ್ರಮೇಣ ನಿರ್ಮಾಣದಲ್ಲೂ ತೊಡಗಿಸಿಕೊಂಡೆ' ಎನ್ನುತ್ತಾರೆ ಅಮ್ರಿ. ಕೆ ಎಂ ಸುಧೀರ್ ನಿರ್ಮಾಣದ ಈ ಚಿತ್ರಕ್ಕೆ ಶೇಖರ್ ಛಾಯಾಗ್ರಾಹಕರಾಗಿದ್ದಾರೆ. ಇದು ನವೆಂಬರ್ 24 ರಂದು ಬಿಡುಗಡೆಯಾಗಲಿದೆ.

ಮಹಿಳಾ ಬರಹಗಾರ್ತಿಯಾಗಿ ಸೂರಿ ಶೈಲಿಯಲ್ಲಿ ಸಾಹಸಮಯ ಚಿತ್ರಗಳಲ್ಲಿ ತೊಡಗಿರುವ ಅಮ್ರಿ, ಕಾಲೇಜು ದಿನಗಳಲ್ಲಿ ಬೆಂಗಳೂರಿನ ಬೀದಿಗಳಲ್ಲಿ ಅಲೆದಾಡುತ್ತಾ, ಬೀದಿ ಕಥೆಗಳೊಂದಿಗೆ ಸಂಪರ್ಕ ಹೊಂದುವ ಅಸಂಖ್ಯಾತ ಛಾಯಾಗ್ರಾಹಕರು ಮತ್ತು ಜನರನ್ನು ಭೇಟಿಯಾಗಿದ್ದು, ಸೂರಿ ಅವರ ಶೈಲಿಯೊಂದಿಗೆ ಹೊಂದಿಕೆಯಾಗುವ ಜನರು ಮತ್ತು ಕಥೆಗಳ ಬಗ್ಗೆ ತಿಳಿಯಲು ನೆರವಾಯಿತು ಎಂದು ತಿಳಿಸಿದರು.

ಸಿನಿಮಾ ತಯಾರಿಕೆ ಕರಗತ ಮಾಡಿಕೊಳ್ಳುವುದು ಒಂದು ಸವಾಲು. “ನಾನು ಉಪ್ಪಿ ಅವರ ಎ ಮತ್ತು ಉಪೇಂದ್ರ ದಂತಹ ಚಿತ್ರಗಳನ್ನು ನೋಡಿ ಕಥೆ ಹೇಗೆ ನಡೆಯುತ್ತದೆ ಎಂಬುದನ್ನು ಬರೆಯುವುದನ್ನು ಕಲಿತೆ. ನಾನು ಈ ವಿಧಾನದ ಬಗ್ಗೆ ಸೂರಿಗೆ ಹೇಳಿದೆ ಮತ್ತು ಅವರು ಪ್ರಭಾವಿತರಾದರು ಎಂದರು 

ಸ್ಕ್ರಿಪ್ಟ್ ರೈಟಿಂಗ್ ಸಮಯದಲ್ಲಿ ಸೂರಿ ಅವರ ತಿದ್ದುಪಡಿಗಳಿಗೆ ಹೊಂದಿಕೊಳ್ಳುವುದು ನಿರ್ಣಾಯಕವಾಗಿತ್ತು. ಸೂರಿ ಅವರ ಹಿಂದಿನ ಕೆಲಸಗಳು, ಬ್ಯಾಡ್ ಮ್ಯಾನರ್ಸ್ ಶೂಟಿಂಗ್ ನಡುವಿನ ವಿಧಾನಗಳಲ್ಲಿ ಗಮನಾರ್ಹ ಬದಲಾವಣೆ ಒಪ್ಪಿಕೊಂಡಿದ್ದೇನೆ. ಆ್ಯಕ್ಷನ್ ನಲ್ಲಿ ವಿಭಿನ್ನ ವಿಧಾನ ಪ್ರಯೋಗಿಸಿದ್ದಾರೆ ಎಂದು ಹೇಳುವ ಅಮ್ರಿ, ಜಂಗ್ಲಿಯಲ್ಲಿ ಸೂರಿ ಅವರ ಕೆಲಸ ಮೆಚ್ಚುತ್ತೇನೆ. ಆದೇ ರೀತಿಯ ಚಿತ್ರಗಳಲ್ಲಿ ತನನ್ನು ತೊಡಗಿಸಿಕೊಳ್ಳಬೇಕೆಂದು ಬಯಸುತ್ತಾರೆ. 

'ಇನ್ನೂ ನಿರ್ದೇಶನ ಕುರಿತು ಮಾತನಾಡಿದ ಅಮ್ರಿ, ಹಲವಾರು ಸ್ಕ್ರಿಪ್ಟ್‌  ಬರೆದಿದ್ದು,  ಸೂರಿ ಅವರಿಂದ ಮಾರ್ಗದರ್ಶನ ಕೇಳಿದ್ದೇನೆ. ನಿರ್ದೇಶನ ತಕ್ಷಣವೇ ಆಗದಿದ್ದರೂ, ನಾನು ತಂತ್ರಜ್ಞನಾಗಿ ಕೆಲಸ ಮಾಡುವ ಗುರಿ ಹೊಂದಿದ್ದೇನೆ ಮತ್ತು ಕ್ಯಾಮೆರಾದ ಹಿಂದೆ ಕೆಲಸ ಮಾಡುವುದಾಗಿ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com