ನಟಿ ತ್ರಿಷಾಗೆ ಕೊನೆಗೂ ಕ್ಷಮೆ ಕೇಳಿದ ಮನ್ಸೂರ್ ಅಲಿ ಖಾನ್ ಹೇಳಿದ್ದೇನು?

'ಲಿಯೋ' ಚಿತ್ರದ ನಟಿ ತ್ರಿಶಾ ಕೃಷ್ಣನ್ ವಿರುದ್ಧ ಸ್ತ್ರೀದ್ವೇಷ ಮತ್ತು ಅಸಹ್ಯಕರ ರೀತಿಯ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿರುವ ನಟ ಮನ್ಸೂರ್ ಅಲಿ ಖಾನ್ ಕೊನೆಗೂ ಕ್ಷಮೆಯಾಚಿಸಿದ್ದಾರೆ.
ಮನ್ಸೂರ್ ಆಲಿ ಖಾನ್
ಮನ್ಸೂರ್ ಆಲಿ ಖಾನ್
Updated on

ಚೆನ್ನೈ: 'ಲಿಯೋ' ಚಿತ್ರದ ನಟಿ ತ್ರಿಶಾ ಕೃಷ್ಣನ್ ವಿರುದ್ಧ ಸ್ತ್ರೀದ್ವೇಷ ಮತ್ತು ಅಸಹ್ಯಕರ ರೀತಿಯ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿರುವ ನಟ ಮನ್ಸೂರ್ ಅಲಿ ಖಾನ್ ಕೊನೆಗೂ ಕ್ಷಮೆಯಾಚಿಸಿದ್ದಾರೆ.

ನಟ ಮನ್ಸೂರ್ ಖಾನ್ ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆ ವೈರಲ್ ಆದ ನಂತರ ಇದೀಗ ರಾಷ್ಟ್ರೀಯ ಮಹಿಳಾ ಆಯೋಗ (NCW) ಪೊಲೀಸ್ ದೂರು ದಾಖಲಿಸಿದೆ. 

ಕ್ಷಮೆಯಾಚಿಸಿದ ಮನ್ಸೂರ್ ಖಾನ್: ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಮನ್ಸೂರ್ ಅಲಿ ಖಾನ್ ಕ್ಷಮೆ ಕೇಳಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಆದರೆ ಕ್ಷಮಾಪಣೆ ವೇಳೆ ನೀಡಿರುವ ಹೇಳಿಕೆ ಮತ್ತೆ ಸುದ್ದಿಯಾಗಿದೆ, ನನ್ನ ಸಹನಟಿ ತ್ರಿಷಾ, ನನ್ನನ್ನು ಕ್ಷಮಿಸಿ. ನಿಮ್ಮ ಮದುವೆಯ ನಾನು ಬಂದು ನಿಮಗೆ ಆಶೀರ್ವದಿಸುವಂತೆ ದೇವರು ನನಗೆ ಕರುಣಿಸಲಿ ಎಂದು ಬರೆದುಕೊಂಡಿದ್ದಾರೆ. 

ಅವರ ಕ್ಷಮಾಪಣ ಹೇಳಿಕೆ ಹೀಗಿದೆ: 

ತಮಿಳು ಚಿತ್ರಗಳಲ್ಲಿ ನೆಗೆಟಿವ್ ಪಾತ್ರಗಳಿಗೆ ಹೆಸರುವಾಸಿಯಾಗಿರುವ ನಟ, ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿನ್ನೆ ಚೆನ್ನೈಯಲ್ಲಿ ಪೊಲೀಸರ ಮುಂದೆ ಹಾಜರಾಗಿದ್ದರು. ಪೊಲೀಸರು ಸಮನ್ಸ್ ನೀಡಿದ ಬಳಿಕ ತಾನು ತಲೆಮರೆಸಿಕೊಂಡಿಲ್ಲ ಎಂದು ಮನ್ಸೂರ್ ವಿಡಿಯೋವೊಂದನ್ನು ಇದಕ್ಕೆ ಮುನ್ನ ಹಾಕಿಕೊಂಡಿದ್ದರು. ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ನಿನ್ನೆ ಸಂಜೆ ಮಹಿಳಾ ಪೊಲೀಸ್ ಠಾಣೆಗೆ ಹಾಜರಾಗಿದ್ದರು.

ನಟ ವಿಜಯ್ ಮತ್ತು ತ್ರಿಷಾ ಸಹನಟಿಯಾಗಿ ಲೋಕೇಶ್ ಕನಕರಾಜ್ ನಿರ್ದೇಶನದ ಯಶಸ್ವಿ ಚಿತ್ರ 'ಲಿಯೋ' ನಲ್ಲಿ ತ್ರಿಷಾ ಜೊತೆಗಿನ ಬೆಡ್‌ರೂಮ್ ದೃಶ್ಯಗಳ ಬಗ್ಗೆ ಮನ್ಸೂರ್ ಅಸಮಾಧಾನ ವ್ಯಕ್ತಪಡಿಸಿದ್ದರು. ನಾನು ತ್ರಿಷಾ ಜೊತೆ ನಟಿಸುತ್ತಿದ್ದೇನೆ ಎಂದು ತಿಳಿದಾಗ, ಚಿತ್ರದಲ್ಲಿ ಬೆಡ್ ರೂಮ್ ದೃಶ್ಯವಿದೆ ಎಂದು ಭಾವಿಸಿದೆ. ನಾನು ನನ್ನ ಹಿಂದಿನ ಚಲನಚಿತ್ರಗಳಲ್ಲಿ ಇತರ ನಟಿಯರನ್ನು ಮಾಡಿದಂತೆಯೇ ನಾನು ಅವಳನ್ನು ಮಲಗುವ ಕೋಣೆಗೆ ಕರೆದೊಯ್ಯುತ್ತೇನೆ ಎಂದು ಭಾವಿಸಿದೆ. ನಾನು ಈ ಹಿಂದೆ ಹಲವಾರು ಅತ್ಯಾಚಾರದ ದೃಶ್ಯಗಳನ್ನು ಮಾಡಿದ್ದೇನೆ, ಅದು ನನಗೆ ಹೊಸದಿರಲಿಲ್ಲ. ಆದರೆ ಈ ಹುಡುಗರು ಕಾಶ್ಮೀರದಲ್ಲಿ ಚಿತ್ರೀಕರಣದ ಸಮಯದಲ್ಲಿ ಸೆಟ್‌ಗಳಲ್ಲಿ ತ್ರಿಷಾ ಅವರನ್ನು ನನಗೆ ತೋರಿಸಲಿಲ್ಲ ಎಂದು ಸಂದರ್ಶನದಲ್ಲಿ ಹೇಳಿದ್ದರು. 

ಅವರ ಹೇಳಿಕೆಗಳ ವೀಡಿಯೊ ವೈರಲ್ ಆದ ನಂತರ, ನಟಿ ತ್ರಿಶಾ ಮನ್ಸೂರ್ ಅವರ ಟೀಕೆಗಳನ್ನು ತೀವ್ರವಾಗಿ ಖಂಡಿಸಿದ್ದರು. ಮನ್ಸೂರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗ ತಮಿಳುನಾಡು ಪೊಲೀಸರನ್ನು ಕೇಳಿದೆ. 

ಎನ್‌ಸಿಡಬ್ಲ್ಯೂ ಸದಸ್ಯೆ ಮತ್ತು ಬಿಜೆಪಿ ನಾಯಕಿ ಖುಷ್ಬು ಸುಂದರ್ ಸಹ ನಟನ ಕಾಮೆಂಟ್‌ಗಳ ಬಗ್ಗೆ ಟ್ವೀಟ್ ಮಾಡಿ, ಇಂತಹ ಕೊಳಕು ಮನಸ್ಸಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾನು ತ್ರಿಶಾ ಕೃಷ್ಣನ್ ಮತ್ತು ನನ್ನ ಇತರ ಮಹಿಳಾ ಸಹೋದ್ಯೋಗಿಗಳೊಂದಿಗೆ ನಿಲ್ಲುತ್ತೇನೆ, ನಾವು ಮಹಿಳೆಯರನ್ನು ರಕ್ಷಿಸಲು ಮತ್ತು ಅವರಿಗೆ ಘನತೆ ತರಲು ಹೋರಾಡುತ್ತಿರುವಾಗ ಇಂತಹ ಪುರುಷರು ಸಮಾಜಕ್ಕೆ ಕಳಂಕ ಎಂದಿದ್ದಾರೆ. 

ನಟ ಮನ್ಸೂರ್ ವಿರುದ್ಧ ಸೆಕ್ಷನ್ 354 ಮತ್ತು ಸೆಕ್ಷನ್ 509 ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.ಮೊನ್ನೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮನ್ಸೂರ್, ಕ್ಷಮೆ ಯಾಚಿಸಲು ನಿರಾಕರಿಸಿದ್ದರು. ಸಾರ್ವಜನಿಕ ಕ್ಷಮೆಯಾಚಿಸಬೇಕೆಂದು ಒತ್ತಡ ಹೇರುವ ಮೂಲಕ ದಕ್ಷಿಣ ಭಾರತೀಯ ಕಲಾವಿದರ ಸಂಘವು ಘೋರ ತಪ್ಪು ಮಾಡಿದೆ ಎಂದು ಹೇಳಿದ್ದರು. ಸಿನಿಮಾದಲ್ಲಿನ ಅತ್ಯಾಚಾರದ ದೃಶ್ಯವನ್ನು ನಿಜ ಜೀವನಕ್ಕೆ ಹೋಲಿಸಬಾರದು ಎಂದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com