ಜನಪ್ರಿಯತೆಯ ಅಮಲಿನಲ್ಲಿ ತೇಲದೆ ನನ್ನ ವೃತ್ತಿ ಜೀವನದ ಬಗ್ಗೆ ಎಚ್ಚರ ವಹಿಸಿದ್ದೇನೆ: ಶ್ರೀನಿಧಿ ಶೆಟ್ಟಿ

ಕೆಜಿಎಫ್‌ ಬ್ಲಾಕ್ ಬಸ್ಟರ್ ಸಿನಿಮಾದಲ್ಲಿ ತಮ್ಮ ಛಾಪು ಮೂಡಿಸಿದ್ದ ಶ್ರೀನಿಧಿ ಶೆಟ್ಟಿ, ತಮ್ಮ ಸಿನಿಮಾಗಳನ್ನು ಆಯ್ಕೆಮಾಡುವಲ್ಲಿ ತಾಳ್ಮೆ ಮತ್ತು ವಿವೇಚನೆ ಅನುಸರಿಸಿದ್ದಾರೆ.
ಶ್ರೀನಿಧಿ ಶೆಟ್ಟಿ
ಶ್ರೀನಿಧಿ ಶೆಟ್ಟಿ

ಬೆಂಗಳೂರು: ಕೆಜಿಎಫ್‌ ಬ್ಲಾಕ್ ಬಸ್ಟರ್ ಸಿನಿಮಾದಲ್ಲಿ ತಮ್ಮ ಛಾಪು ಮೂಡಿಸಿದ್ದ ಶ್ರೀನಿಧಿ ಶೆಟ್ಟಿ, ತಮ್ಮ ಸಿನಿಮಾಗಳನ್ನು ಆಯ್ಕೆಮಾಡುವಲ್ಲಿ ತಾಳ್ಮೆ ಮತ್ತು ವಿವೇಚನೆ ಅನುಸರಿಸಿದ್ದಾರೆ.

ಶ್ರೀನಿಧಿ ಶೆಟ್ಟಿ, ಕೋಬ್ರಾ ಚಿತ್ರದ ಮೂಲಕ ತಮಿಳು ಸಿನಿಮಾಗೆ ಪಾದಾರ್ಪಣೆ ಮಾಡಿದ್ದರು, ಒಂದೂವರೆ ವರ್ಷಗಳ ನಂತರ, ಅವರು ತೆಲುಸು ಕಾದ ಎಂಬ ಚಿತ್ರದ ಮೂಲಕ ತೆಲುಗು ಪ್ರಯಾಣ ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ಈ ಸಿನಿಮಾವನ್ನು ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಆಗಿ ನಂತರ ಚಿತ್ರನಿರ್ಮಾಣಕ್ಕೆ ಇಳಿದಿರುವ ನೀರಜಾ ಕೋನಾ ಚೊಚ್ಚಲ ಬಾರಿಗೆ ನಿರ್ದೇಶಿಸುತ್ತಿದ್ದಾರೆ.

ತೆಲುಸು ಕಾದ ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣ ಮಾಡುತ್ತಿದ್ದು ತಮನ್ ಎಸ್ ಸಂಗೀತ ನೀಡಿದ್ದಾರೆ,  ಛಾಯಾಗ್ರಾಹಕರಾಗಿ ಯುವರಾಜ್ ಮತ್ತು ಶ್ರೀಕರ್ ಪ್ರಸಾದ್ ಸಂಕಲನ ನಿರ್ವಹಿಸುತ್ತಿದ್ದಾರೆ. ನಿರ್ಮಾಪಕರು ಸೋಮವಾರ ಅಧಿಕೃತವಾಗಿ ಸಿನಿಮಾ ಘೋಷಿಸಿದರು, ಕೆಲವೇ ದಿನಗಳಲ್ಲಿ ಮುಹೂರ್ತ ನಡೆಯಲಿದ್ದು, ನವೆಂಬರ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.

ಶ್ರೀನಿಧಿ ಶೆಟ್ಟಿ, ತಮ್ಮ ವೃತ್ತಿಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸುವ ಬಗ್ಗೆ ತಮ್ಮ ಸಂತೋಷ, ಉತ್ಸಾಹ ಹಂಚಿಕೊಂಡಿದ್ದಾರೆ, ಸಿನಿಮಾ ಕಥೆ ಆಯ್ದುಕೊಳ್ಳುವ ಅವರ ಬದ್ಧತೆಯ ಬಗ್ಗೆ ತಿಳಿಸಿದ್ದಾರೆ. ನನ್ನ ವೃತ್ತಿಜೀವನವು ಉತ್ತಮವಾಗಿ ಪ್ರಾರಂಭವಾದರೂ, ನಾನು ಯಾವಾಗಲೂ ಯಾವುದೇ ವಿಷಯಗಳಿಗೆ ಆತುರಪಡದಂತೆ ಜಾಗರೂಕಳಾಗಿರುತ್ತೇನೆ. ಜನಪ್ರಿಯತೆಯೂ ನಮ್ಮನ್ನು ಅಮಲಿಗೆ ತಳ್ಳಬಹುದು, ಆದರೆ ಅದು ನನ್ನ ವಿಧಾನವಲ್ಲ. ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿಂದ ಬಂದವರಿಗೆ ಆರ್ಥಿಕ ಭದ್ರತೆ ಪ್ರಮುಖವಾಗಿರುತ್ತದೆ, ಆದರೆ ನಾನು ಚಿಂತನಶೀಲ ಆಯ್ಕೆಗಳನ್ನು ಮಾಡಲು ಬಯಸುತ್ತೇನೆ.

ಅವಕಾಶಗಳು ಬಂದವು, ಆದರೆ ಯೋಜನೆಗಳಿಗೆ ಸಂಪೂರ್ಣವಾಗಿ ಕಮಿಟ್ ಆಗಲು ನನಗೆ ಧೈರ್ಯವಿರಲಿಲ್ಲ. ನಾನು ಸರಿಯಾದ ಕಥೆಗಾಗಿ ಕಾಯುತ್ತಿದ್ದೆ, ಮತ್ತು ಅಂತಿಮವಾಗಿ, ನೀರಜಾ ಕೋನ ಅವರ ಕಥೆ ಕೇಳಿದಾಗ, ಇದು ಸರಿಯಾದ ಸಮಯ ಎಂದು ನಾನು ಭಾವಿಸಿದೆ. ನನ್ನ ನಾಲ್ಕನೇ ಪ್ರಾಜೆಕ್ಟ್ ಮತ್ತು ತೆಲುಗಿನಲ್ಲಿ ನಾನು ಮೊದಲ ಸಿನಿಮಾ ಮಾಡುತ್ತಿದ್ದೇನೆ ಎಂದು ಶ್ರೀನಿಧಿ ಶೆಟ್ಟಿ ತಿಳಿಸಿದರು.

ಕೆಜಿಎಫ್‌ ನಂತರ ಶ್ರೀನಿಧಿ ಶೆಟ್ಟಿ ವಿವಿಧ ಭಾಷೆಗಳಲ್ಲಿ ನಟಿಸುತ್ತಿದ್ದಾರೆ. ಅವರು ಕೋಬ್ರಾ ಚಿತ್ರದ ಮೂಲಕ ತಮಿಳಿನಲ್ಲಿ ನಟಿಸಿದ್ದರು, ಈಗ ತೆಲುಗು ಪ್ರವೇಶಿಸುವ ಬಗ್ಗೆ ಉತ್ಸುಕರಾಗಿದ್ದಾರೆ. “ತಮಿಳಿನಲ್ಲಿ ಕೆಲಸದ ವಾತಾವರಣವು ವಿಭಿನ್ನ ರೀತಿಯ ಉತ್ಸಾಹ ನೀಡಿತು. ಕನ್ನಡ ಇಂಡಸ್ಟ್ರಿ ಹೇಗೆ ಕಾರ್ಯನಿರ್ವಹಿಸುತ್ತದೆಯೋ ಅದೇ ರೀತಿ ತೆಲುಗು ಕೂಡ, ನಾನು ಒಂದೂವರೆ ವರ್ಷದ ನಂತರ ಮತ್ತೊಂದು ಚಲನಚಿತ್ರ ಪ್ರಾರಂಭಿಸಿದಾಗ, ನಾನು ಶಿಶುವಿಹಾರದ ವಿದ್ಯಾರ್ಥಿಯಂತೆ ಮೊದಲಿನಿಂದ ಪ್ರಾರಂಭಿಸಿದಂತೆ ಭಾಸವಾಗುತ್ತದೆ. ನಾನು ಕನಿಷ್ಠ ಒಂದು ಅಥವಾ ಎರಡು ಶೆಡ್ಯೂಲ್ ಪೂರ್ಣಗೊಳಿಸಿದಾಗ, ನಾನು ಅದರ ಬಗ್ಗೆ ಹೆಚ್ಚಿನದನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಸಿನಿಮಾ ಬಗ್ಗೆ ಹೆಚ್ಚಿನ ವಿಷಯ ಬಹಿರಂಗ ಪಡಿಸದ ಶ್ರೀನಿಧಿ, ಇದೊಂದು ಪ್ರೇಮಕಥೆ ಎಂದು ಉಲ್ಲೇಖಿಸಿದ್ದಾರೆ. ಇದು ಸಾಕಷ್ಟು ತಿರುವುಗಳು ಮತ್ತು  ಏರಿಳಿತಗಳನ್ನು ಹೊಂದಿರುವ ಒಂದು ಉತ್ತಮ ಚಿತ್ರ ಎಂದರು. ಕಲಾವಿದೆಯಾಗಿ, ನನಗೆ ಪ್ರತಿಭೆ ತೋರಿಸಲು ನೀಡಲು ಸಾಕಷ್ಟು ಅವಕಾಶವಿರುತ್ತದೆ ಎಂದು ಅವರು ಹೇಳಿದರು.

ಮೊದಲ ಬಾರಿಗೆ ನಿರ್ದೇಶಕರಾಗಿರುವ ನೀರಜಾ ಕೋನಾ ಬಗ್ಗೆ ಕೆಲವು ವಿಷಯ ತಿಳಿಸಿದ ಶೆಟ್ಟಿ, ನಾಲ್ಕೈದು ವರ್ಷಗಳ ಹಿಂದೆ ಸ್ಕ್ರಿಪ್ಟ್ ಬರೆದ ನೀರಜಾ ಕೋನಾ ಅವರು ಕಥೆಯನ್ನು ವಿವರಿಸಿದಾಗ, ನಾನು ಅವರ ಸ್ಪಷ್ಟತೆ ಮತ್ತು ದೃಷ್ಟಿಕೋನ ಅರ್ಥಮಾಡಿಕೊಂಡೆ, ಅವರ ಬಳಿ ಉತ್ತಮ ಕಥೆಯಿದೆ ಎಂಬುದು ನನಗೆ ತಿಳಿದಿತ್ತು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com