'ಘೋಸ್ಟ್' ಮೂಲಕ ಪ್ಯಾನ್ ಇಂಡಿಯಾ ಸಿನಿಮಾಗಳತ್ತ ಸಂದೇಶ್ ಪ್ರೊಡಕ್ಷನ್ ಪ್ರಯಾಣ!

ಘೋಸ್ಟ್ ಸಿನಿಮಾ ಮೂಲಕ ಶಿವರಾಜಕುಮಾರ್ ಮತ್ತು ಸಂದೇಶ್ ಪ್ರೊಡಕ್ಷನ್ ಮೂರನೇ ಬಾರಿಗೆ ಒಂದಾಗಿ ಕೆಲಸ ಮಾಡಿದ್ದಾರೆ. ಘೋಸ್ಟ್ ಮೂಲಕ ಸಂದೇಶ್ ಪ್ರೊಡಕ್ಷನೇ ಇದೇ ಮೊದಲ ಬಾರಿಗೆ ಬೇರೆ ಬೇರೆ ಭಾಷೆಯಲ್ಲೂ ಸಿನಿಮಾ ರಿಲೀಸ್ ಮಾಡುತ್ತಿದೆ.
ಘೋಸ್ಟ್ ಸಿನಿಮಾ ಸ್ಟಿಲ್
ಘೋಸ್ಟ್ ಸಿನಿಮಾ ಸ್ಟಿಲ್

ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ 34ನೇ ಚಿತ್ರ 'ಘೋಸ್ಟ್' ತಯಾರಾಗಿದ್ದು ಈ ವಾರ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಸೇರಿದಂತೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ, ಮುಂಬರುವ ವಾರದಲ್ಲಿ ತೆಲುಗು ಭಾಷೆಯಲ್ಲಿ ರಿಲೀಸ್ ಮಾಡಲು ನಿರ್ಧರಿಸಲಾಗಿದೆ.

ಘೋಸ್ಟ್ ಸಿನಿಮಾ ಮೂಲಕ ಶಿವರಾಜಕುಮಾರ್ ಮತ್ತು ಸಂದೇಶ್ ಪ್ರೊಡಕ್ಷನ್ ಮೂರನೇ  ಬಾರಿಗೆ ಒಂದಾಗಿ ಕೆಲಸ ಮಾಡಿದ್ದಾರೆ. ಘೋಸ್ಟ್ ಮೂಲಕ ಸಂದೇಶ್ ಪ್ರೊಡಕ್ಷನೇ ಇದೇ ಮೊದಲ ಬಾರಿಗೆ ಬೇರೆ ಬೇರೆ ಭಾಷೆಯಲ್ಲೂ ಸಿನಿಮಾ ರಿಲೀಸ್ ಮಾಡುತ್ತಿದೆ.

<strong>ಸಂದೇಶ್ ಎನ್</strong>
ಸಂದೇಶ್ ಎನ್

ನಿರ್ಮಾಪಕ ಸಂದೇಶ್ ಎನ್, ಅವರ ನಿರ್ಮಾಣ ಸಂಸ್ಥೆಯ ಪ್ರಯಾಣದ ಅನುಭವಗಳನ್ನು ಹಂಚಿಕೊಂಡಿದ್ದಾರೆ, “ನಾವು ಅಂಬರೀಶ್, ರವಿಚಂದ್ರನ್, ಶಿವರಾಜಕುಮಾರ್, ರಮೇಶ್ ಅರವಿಂದ್, ದರ್ಶನ್ ಅವರಂತಹ ಸ್ಟಾರ್‌ಗಳ ಸಿನಿಮಾಗಳಿಗೆ  ಚಿತ್ರ ನಿರ್ಮಾಣ ಮಾಡಿದ್ದೇವೆ, ಅಭಿಷೇಕ್ ಅಂಬರೀಶ್ ಅವರನ್ನು ನಮ್ಮ ಸಂಸ್ಥೆಯ ನಿರ್ಮಾಣದ ಮೂಲಕ ಸಿನಿಮಾಗೆ ಪರಿಚಯಿಸಿದ್ದೇವೆ. ಪ್ರಭುದೇವ ಅಭಿನಯದ ವುಲ್ಫ್ ಚಿತ್ರದ ಮೂಲಕ ತಮಿಳು ಭಾಷೆಯಲ್ಲಿ ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮಾಡುತ್ತಿದ್ದೇವೆ, ಇದರ ಜೊತೆಗೆ ಘೋಸ್ಟ್ ಮೂಲಕ ಹಲವು ಭಾಷೆಯ ಸಿನಿಮಾ ರಂಗಗಳಲ್ಲಿ ಗುರುತಿಸಿಕೊಳ್ಳಲು ನಾವು ಸಂತೋಷಪಡುತ್ತೇವೆ ಎಂದು ಸಂದೇಶ್ ತಿಳಿಸಿದ್ದಾರೆ.

ಸಂದೇಶ್ ಪ್ರೊಡಕ್ಷನ್ಸ್’ ಲಾಂಛನದಲ್ಲಿ ಅದ್ದೂರಿಯಾಗಿ ಮೂಡಿಬಂದಿರುವ `ಘೋಸ್ಟ್’ಗೆ ಬೇಡಿಕೆ ಹೆಚ್ಚಿದೆ. ಭಾರತದಾದ್ಯಂತ 'ಘೋಸ್ಟ್' ರಿಲೀಸ್ ಮಾಡಿ ಭಾಷೆಯ ಅಡೆತಡೆಗಳನ್ನು ಮೀರಲು ನಮಗೆ ಅವಕಾಶ ಮಾಡಿಕೊಟ್ಟಿದೆ  ಎಂದಿದ್ದಾರೆ.

ಭಾಷೆಯ ಹೊರತಾಗಿ, ನಮ್ಮ ಸಂಸ್ಕೃತಿಗಳಲ್ಲಿ ಸಾಮಾನತೆಯಿದೆ, ವ್ಯವಹಾರದ ಕ್ಷೇತ್ರದಲ್ಲಿ ಕೊಡು-ತೆಗೆದುಕೊಳ್ಳುವ ನೀತಿಯನ್ನು ಅಳವಡಿಸಿಕೊಂಡಿವೆ.  ತಮಿಳು ಅಥವಾ ಹಿಂದಿಯಂತಹ ಹೊಸ ಭಾಷೆಯಲ್ಲಿ ಚಲನಚಿತ್ರವನ್ನು ಪ್ರಸ್ತುತಪಡಿಸುವಾಗ, ಅದು ಸಂಪೂರ್ಣವಾಗಿ ಹೊಸ ಅನುಭವದಂತೆ ಭಾಸವಾಗುತ್ತದೆ.

ಹಲವಾರು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ ಹೊರತಾಗಿಯೂ, ಬೇರೆ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಹೊಸ ಅನುಭವ ತರುತ್ತದೆ. ಮುಂದಿನ ದಿನಗಳಲ್ಲಿ ಉತ್ತಮ ಮತ್ತು ಆಕರ್ಷಕ ಕಥೆ ಸಿಕ್ಕಿದರೆ ಹೆಚ್ಚೆಚ್ಚು ಬಹುಭಾಷಾ ಸಿನಿಮಾ ನಿರ್ಮಾಣ ಮಾಡಲು ನಾವು ಉತ್ಸುಕರಾಗಿದ್ದೇವೆ ಎಂದು ಸಂದೇಶ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com