'ಸುಳ್ಳು ಬಾಕ್ಸಾಫಿಸಿನ ಲೆಕ್ಕದ ಮೇಲೆ ಮುಂದುವರೆಯುವುದು ನೀರಿನ ಮೇಲಿನ ಗುಳ್ಳೆಗಿರುವ ಆಯಸ್ಸಿಗೆ ಸಮ'

ನಿರ್ದೇಶಕ ಮಂಸೋರೆ ಕನ್ನಡ ಸಿನಿಮಾಗಳ ಬಾಕ್ಸಾಫೀಸ್ ಗಳಿಕೆಯ ಲೆಕ್ಕದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುಳ್ಳಿಗೆ ಆಯಸ್ಸು ಕಡಿಮೆ ಎಂದು ಹೇಳಿದ್ದಾರೆ.
ಮಂಸೋರೆ
ಮಂಸೋರೆ

ನಿರ್ದೇಶಕ ಮಂಸೋರೆ ಕನ್ನಡ ಸಿನಿಮಾಗಳ ಬಾಕ್ಸಾಫೀಸ್ ಗಳಿಕೆಯ ಲೆಕ್ಕದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುಳ್ಳಿಗೆ ಆಯಸ್ಸು ಕಡಿಮೆ ಎಂದು ಹೇಳಿದ್ದಾರೆ.

ಈ ಸಂಬಂದ ಟ್ವೀಟ್ ಮಾಡಿರುವ ಅವರು, ಕನ್ನಡ ಚಿತ್ರರಂಗ ವಾಸ್ತವವನ್ನು ಎದುರಿಸಿ ಸಮಸ್ಯೆಗಳಿಗೆ ಪರಿಹಾರ ಹುಡುಕದೇ ಕೇವಲ ಸುಳ್ಳು ಬಾಕ್ಸಾಫಿಸಿನ ಲೆಕ್ಕದ ಮೇಲೆ ಮುಂದುವರೆಯುವುದು ನೀರಿನ ಮೇಲಿನ ಗುಳ್ಳೆಗಿರುವ ಆಯಸ್ಸಿಗೆ ಸಮ. ವಾಸ್ತವವನ್ನು ಎದುರಿಸಲೇಬೇಕು. (ಇದು ಒಂದು ಸಿನೆಮಾದ ಬಗ್ಗೆ ಅಲ್ಲಾ, ಒಟ್ಟಾರೆ ಚಿತ್ರರಂಗಕ್ಕೆ ಸಂಬಂಧಿಸಿದ್ದು)" ಎಂದು ಬರೆದುಕೊಂಡಿದ್ದಾರೆ.

ಮಂಸೋರೆ ತಮ್ಮ ಪೋಸ್ಟ್‌ನಲ್ಲಿ 'ಘೋಸ್ಟ್' ಸಿನಿಮಾ ಹೆಸರು ಪ್ರಸ್ತಾಪ ಮಾಡಿಲ್ಲ. ಆದರೆ ಸದ್ಯಕ್ಕೆ ಕನ್ನಡದಲ್ಲಿ ಶಿವಣ್ಣನ 'ಘೋಸ್ಟ್' ಸಿನಿಮಾ ಮಾತ್ರ ಬಿಡುಗಡೆಯಾಗಿದೆ. ಸಿನಿಮಾ ಕಲೆಕ್ಷನ್ ಬಗ್ಗೆಯೇ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.

ಹಾಗಾಗಿ ಮಂಸೋರೆ 'ಘೋಸ್ಟ್' ಚಿತ್ರದ ಕಲೆಕ್ಷನ್ ಬಗ್ಗೆಯೇ ಮಾತನಾಡಿದ್ದಾರೆ ಎನ್ನಲಾಗ್ತಿದೆ. ಪರೋಕ್ಷವಾಗಿ ಕನ್ನಡ ಸಿನಿಮಾಗಳು ಆಹಾ ಓಹೋ ಎಂದು ಕಲೆಕ್ಷನ್ ಮಾಡುತ್ತಿಲ್ಲ.

ಬಾಕ್ಸಾಫೀಸ್ ಲೆಕ್ಕ ಎಲ್ಲಾ ಬರೀ ಸುಳ್ಳು ಎಂದು ನಿರ್ದೇಶಕರು ಹೇಳುತ್ತಿದ್ದಾರೆ. ಕನ್ನಡ ಸಿನಿಮಾಗಳು ಗೆಲ್ಲುತ್ತಿಲ್ಲ. ಕನ್ನಡ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಥಿಯೇಟರ್‌ಗೆ ಬರ್ತಿಲ್ಲ ಎನ್ನುವ ವಾದ ಬಹಳ ದಿನಗಳಿಂದ ಇದೆ. ಸಿನಿಮಾ ಸಕ್ಸಸ್ ಸೂತ್ರ ಯಾರಿಗೂ ಗೊತ್ತಿಲ್ಲ. ಅದರಲ್ಲೂ ಕನ್ನಡ ಸಿನಿಮಾಗಳ ಸಕ್ಸಸ್ ಸೂತ್ರ ಆ ದೇವರೇ ಬಲ್ಲ. ಯಾವಾಗ ಯಾವ ಸಿನಿಮಾ ಗೆಲ್ಲುತ್ತದೆ ಅನ್ನೋದು ಗೊತ್ತಾಗಲ್ಲ. ಇದೇ ಕಾರಣಕ್ಕೆ ಸಾಲು ಸಾಲು ಸಿನಿಮಾಗಳು ಸೋಲುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com