ವಿಶ್ವೇಶ್ವರಯ್ಯ ಭೂಮಿ ಬಗೆದು ಕಾವೇರಿ ನದಿ ಕಂಡುಹಿಡಿದ್ರಾ; ಸಿದ್ದಾರ್ಥ್ ಅಲ್ಲೇ ಪೌರುಷ ತೋರಿಸಬೇಕಿತ್ತು: ನಾಲಗೆ ಹರಿಬಿಟ್ಟ ಕಸ್ತೂರಿ

ನಟ ಸಿದ್ದಾರ್ಥ್‌ ಅವ್ರು ಕೂಡ ಮೋದಿಗೆ ವಿರುದ್ಧವಾಗಿ ಕಾಂಗ್ರೆಸ್‌ ಪರ ನಿಲ್ಲುವ ವ್ಯಕ್ತಿ ಅಲ್ಲವೇ? ಈಗಲಾದರೂ ಅದು ಅವ್ರಿಗೆ ಗೊತ್ತಾಗಿರಬಹುದು ಅನ್ನಿಸುತ್ತದೆ. ಟ್ವಿಟ್ಟರ್‌ನಲ್ಲಿ ಇಷ್ಟಿಷ್ಟು ಉದ್ದ ಬರೆಯುತ್ತಾರೆ. ಅವ್ರ ಪೌರುಷ ಆಗ ಎಲ್ಲಿ ಹೋಗಿತ್ತು.
ಕಸ್ತೂರಿ ಮತ್ತು ಸಿದ್ದಾರ್ಥ್
ಕಸ್ತೂರಿ ಮತ್ತು ಸಿದ್ದಾರ್ಥ್

ತಮಿಳುನಾಡಿನವರು ಕಾವೇರಿ ನೀರಿನ ಸಮಸ್ಯೆಯನ್ನು ಇನ್ನು ಶಾಂತವಾಗಿ ಡೀಲ್ ಮಾಡುತ್ತಿದ್ದೇವೆ ಎಂದು ನನಗೆ ಅನ್ನಿಸುತ್ತಿದೆ. ರಾಜ್ಯದಲ್ಲಿ ಆಡಳಿತ ಪಕ್ಷ ಈ ಬಗ್ಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಕಾವೇರಿ ಒಪ್ಪಂದವನ್ನು ಎಲ್ಲರೂ ತಿಳಿದುಕೊಳ್ಳಬೇಕು.

ಕಾವೇರಿ ಎಲ್ಲಿ ಹುಟ್ಟಿ ಹರಿಯುತ್ತದೋ ಅವರಿಗೆ ಸ್ವಂತ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ನದಿ ಎಲ್ಲಿ ಬಂದು ಸಮುದ್ರ ಸೇರುತ್ತದೋ ಅವರಿಗೆ ಸ್ವಂತ ಅನ್ನೋದು ಅರ್ಥವಾಗ್ತಿಲ್ಲ ಎಂದು ನಟಿ ಕಸ್ತೂರಿ ಹೇಳಿದ್ದಾರೆ.

ಇನ್ನು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟಿ ತಮಿಳು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ''ಕಾವೇರಿ ನದಿ ಬಗ್ಗೆ ಎಲ್ಲರೂ ತಿಳಿಯಬೇಕಿರುವುದು ಅತ್ಯವಶ್ಯಕ. ಕಾವೇರಿ ನೀರಿನ ಒಪ್ಪಂದದ ಬಗ್ಗೆ ಕೂಡಾ ಎಲ್ಲರೂ ತಿಳಿದುಕೊಳ್ಳಬೇಕು. ಕಾವೇರಿ ನೀರು ಹುಟ್ಟಿದ ಸ್ಥಳದವರು ಅದನ್ನು ತಮ್ಮ ಸ್ವಂತ ಎಂದು ತಿಳಿದುಕೊಂಡಿದ್ದಾರೆ.

ಆದರೆ ಅದು ಎಲ್ಲಿಗೆ ಸೇರುವುದೋ ಅವರಿಗೆ ಸ್ವಂತ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಒಪ್ಪಂದದ ಪ್ರಕಾರ ಕಾವೇರಿ ನೀರು ತಮಿಳುನಾಡು, ಕರ್ನಾಟಕ, ಪಾಂಡಿಚೆರಿ, ಕೇರಳ ರಾಜ್ಯಗಳಿಗೆ ಸೇರಬೇಕು. 4 ರಾಜ್ಯಗಳಿಗೂ ಇದರಲ್ಲಿ ಹಕ್ಕಿದೆ. ಅದರಲ್ಲಿ ಶೇ 75ರಷ್ಟು ನೀರು ತಮಿಳುನಾಡಿಗೆ ಸೇರಬೇಕು ಎಂದಿದ್ದಾರೆ.

ಕಾವೇರಿ ನೀರಿನ ವಿಚಾರವಾಗಿ ಪದೇ ಪದೆ ಕೋರ್ಟ್‌ ಮೆಟ್ಟಿಲೇರುವಂತೆ ಆಗಿದೆ. ಹೀಗೆ ಆದರೆ ನಮ್ಮ ನಡುವೆಯೇ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ನ್ಯಾಯಾಲಯ ಹೇಳುತ್ತದೆ. ಕಾವೇರಿ ನದಿಗೆ ಸರ್‌ಎಂ ವಿಶ್ವೇಶ್ವರಯ್ಯ ಅಣೆಕಟ್ಟು ಕಟ್ಟಿದ್ದು, ಆದರೆ ಕರ್ನಾಟಕದಲ್ಲಿ ವಿದ್ಯಾವಂತರು, ಸರ್‌ಎಂ ವಿಶ್ವೇಶ್ವರಯ್ಯ ಅವರೇ ಭೂಮಿಯನ್ನು ಬಗೆದು ಕಾವೇರಿ ನೀರನ್ನು ಕಂಡುಹಿಡಿದಿರುವಂತೆ ನಂಬಿದ್ದಾರೆ. ಕರ್ನಾಟಕ ರಾಜಕೀಯ ಪಕ್ಷಗಳು ಕೂಡಾ ಕಾವೇರಿ ನಮ್ಮದೇ ಆಸ್ತಿ ಎನ್ನುವಂತೆ ಜನರನ್ನು ನಂಬಿಸಿದ್ದಾರೆ. ಕಾವೇರಿ ಕರ್ನಾಟಕದವರಿಗೆ ಮಗು, ನಮಗೆ ಅವಳು ತಾಯಿ ಎಂದು ಕಸ್ತೂರಿ  ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ನಟ ಸಿದ್ದಾರ್ಥ್ ತಮಿಳು ಸಿನಿಮಾ ಸುದ್ದಿಗೋಷ್ಠಿಗೆ ತಡೆದ ವಿಚಾರದ ಬಗ್ಗೆಯೂ ನಟಿ ಕಸ್ತೂರಿ ಮಾತನಾಡಿದ್ದಾರೆ. ನಟ ಸಿದ್ದಾರ್ಥ್‌ ಅವ್ರು ಕೂಡ ಮೋದಿಗೆ ವಿರುದ್ಧವಾಗಿ ಕಾಂಗ್ರೆಸ್‌ ಪರ ನಿಲ್ಲುವ ವ್ಯಕ್ತಿ ಅಲ್ಲವೇ? ಈಗಲಾದರೂ ಅದು ಅವ್ರಿಗೆ ಗೊತ್ತಾಗಿರಬಹುದು ಅನ್ನಿಸುತ್ತದೆ. ಅವ್ರು ನನಗೆ ಸ್ನೇಹಿತರು. ಒಳ್ಳೆ ವ್ಯಕ್ತಿ. ಅವ್ರು ಅಲ್ಲಿರುವ ಕಾಂಗ್ರೆಸ್, ಇಲ್ಲಿರುವ ಆಡಳಿತ ಪಕ್ಷಕ್ಕೆ ಆಪ್ತರು ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಘಟನೆ ನಡೆದಾಗ ಒಬ್ಬ ಪೊಲೀಸ್ ಇರಲಿಲ್ಲ. ಅಲ್ಲಿ ಅಷ್ಟು ದೊಡ್ಡ ಗುಂಪು ಬಂದು ಸಿದ್ದಾರ್ಥ್ ಅವರನ್ನು ಬೆದರಿಸಿತು. ಅವರು ಸುಮ್ಮನೆ ಕುಳಿತ್ತಿದ್ದರು. ನನಗೆ ಅದರಲ್ಲಿ ಎರಡು ವಿಚಾರಕ್ಕೆ ಬೇಸರ ಇದೆ. ಒಬ್ಬ ಪೊಲೀಸ್ ಇಲ್ಲದೇ ಒಂದು ಗುಂಪು ಬಂದು ಬೆದರಿಸುತ್ತದೆ ಅಂದ್ರೆ ರಾಜ್ಯದ ಬೆಂಬಲ ಇಲ್ಲದೇ ಮಾಡೋಕೆ ಸಾಧ್ಯವಿಲ್ಲ.

ಒಂದು ಫೋನ್ ಮಾಡಿದರೂ ಪೊಲೀಸ್ ಬರಬೇಕಿತ್ತು. ಇವರು ಸುಮ್ಮನೆ ಕುಳಿತ್ತಿದ್ದು ಯಾಕೆ ಗೊತ್ತಾಗಲಿಲ್ಲ. ಟ್ವಿಟ್ಟರ್‌ನಲ್ಲಿ ಇಷ್ಟಿಷ್ಟು ಉದ್ದ ಬರೆಯುತ್ತಾರೆ. ಅವ್ರ ಪೌರುಷ ಆಗ ಎಲ್ಲಿ ಹೋಗಿತ್ತು. ಹೋಗು ಅಂತ ತಕ್ಷಣ ಎದ್ದು ಹೊರಟುಬಿಟ್ಟರು. ಆ ಜಾಗದಲ್ಲೇ ಅವರು ತಮಿಳುನಾಡಿಗಾಗಿ ಕಾವೇರಿಗಾಗಿ ಮಾತನಾಡಿದ್ದರೆ ಎಲ್ಲರೂ ಸಿದ್ದಾರ್ಥ್‌ನ ಕೊಂಡಾಡುತ್ತಿದ್ದರು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com