ಮಲಯಾಳಂ ಚಿತ್ರರಂಗಕ್ಕೆ ಸ್ವೀಟಿ ಎಂಟ್ರಿ; ಜಯಸೂರ್ಯ ನಟನೆಯ ಕಥನಾರ್ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ

ಸ್ವೀಟಿ ಎಂದೇ ಖ್ಯಾತಿ ಗಳಿಸಿರುವ ನಟಿ ಅನುಷ್ಕಾ ಶೆಟ್ಟಿ 'ಕಥನಾರ್- The Wild Sorcerer' ಚಿತ್ರದ ಮೂಲಕ ಮಲಯಾಳಂಗೆ ಪದಾರ್ಪಣೆ ಮಾಡಲಿದ್ದಾರೆ. ಚಿತ್ರದಲ್ಲಿ ಜಯಸೂರ್ಯ ನಟಿಸಿದ್ದಾರೆ. '#ಹೋಂ' ಸಿನಿಮಾ ಖ್ಯಾತಿಯ ರೋಜಿನ್ ಥಾಮಸ್ ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. 
ಅನುಷ್ಕಾ ಶೆಟ್ಟಿ
ಅನುಷ್ಕಾ ಶೆಟ್ಟಿ
Updated on

ಸ್ವೀಟಿ ಎಂದೇ ಖ್ಯಾತಿ ಗಳಿಸಿರುವ ನಟಿ ಅನುಷ್ಕಾ ಶೆಟ್ಟಿ 'ಕಥನಾರ್- The Wild Sorcerer' ಚಿತ್ರದ ಮೂಲಕ ಮಲಯಾಳಂಗೆ ಪದಾರ್ಪಣೆ ಮಾಡಲಿದ್ದಾರೆ. ಚಿತ್ರದಲ್ಲಿ ಜಯಸೂರ್ಯ ನಟಿಸಿದ್ದಾರೆ. '#ಹೋಂ' ಸಿನಿಮಾ ಖ್ಯಾತಿಯ ರೋಜಿನ್ ಥಾಮಸ್ ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇದು ಅತೀಂದ್ರಿಯ ಶಕ್ತಿಗಳು ಹೊಂದಿರುವ ಕೇರಳದ ಪಾದ್ರಿ ಕಡಮತ್ತತ್ತು ಕಥನಾರ್ ಎಂಬುವವರ ಕಥೆಗಳನ್ನು ಆಧರಿಸಿದೆ.

ಶುಕ್ರವಾರ, ಜಯಸೂರ್ಯ ತಮ್ಮ 45ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಚಿತ್ರತಂಡ ಎರಡು ನಿಮಿಷಗಳ ವಿಡಿಯೋವನ್ನು ಹಂಚಿಕೊಂಡಿದೆ. ಇದು ಸಿನಿಮಾದಲ್ಲಿನ ಪ್ರಪಂಚದ ಒಂದು ಲುಕ್ ಅನ್ನು ನೀಡಿದೆ. ಕತ್ತಲೆಯ ಲೋಕದಲ್ಲಿ ವಾಮಾಚಾರ ಮತ್ತು ಅತೀಂದ್ರಿಯ ಅಂಶಗಳ ಜಗತ್ತಿಗೆ ರೋಮಾಂಚಕ ಪ್ರಯಾಣ ಒದಗಿಸುವ ಭರವಸೆ ನೀಡುತ್ತವೆ.

ಕಥನಾರ್ ಅನ್ನು ವರ್ಚುವಲ್ ಪ್ರೊಡಕ್ಷನ್ ತಂತ್ರಜ್ಞಾನವನ್ನು ಬಳಸಿಕೊಂಡು ಚಿತ್ರೀಕರಿಸಲಾಗುತ್ತಿದೆ. ಚಿತ್ರತಂಡದ ಪ್ರಕಾರ, ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗ ಈ ತಂತ್ರಜ್ಞಾನವನ್ನು ಬಳಸಿ ಚಿತ್ರೀಕರಿಸಲಾಗುತ್ತಿದೆ. ಚಿತ್ರದ ಪ್ರಮುಖ ಭಾಗಗಳನ್ನು 45,000 ಚದರ ಅಡಿಗಳ ಮಾಡ್ಯುಲರ್ ಶೂಟಿಂಗ್ ಸೆಟ್‌ನಲ್ಲಿ ಚಿತ್ರೀಕರಿಸಲು ಯೋಜಿಸಲಾಗಿದೆ. ಚಿತ್ರತಂಡ ಈಗಾಗಲೇ ಶೇ 50 ರಷ್ಟು ಚಿತ್ರೀಕರಣವನ್ನು ಪೂರ್ಣಗೊಳಿಸಿದೆ.

ಚಿತ್ರಕ್ಕೆ ಆರ್ ರಮಾನಂದ್ ಅವರ ಚಿತ್ರಕಥೆ, ನೀಲ್ ಡಿ ಕುನ್ಹಾ ಅವರ ಛಾಯಾಗ್ರಹಣ, ಜಂಗ್ಜಿನ್ ಪಾರ್ಕ್ ಅವರ ಸಾಹಸ ಮತ್ತು ರಾಹುಲ್ ಸುಬ್ರಹ್ಮಣ್ಯನ್ ಉನ್ನಿ ಅವರ ಸಂಗೀತ ನಿರ್ದೇಶನವಿದೆ. ಶ್ರೀ ಗೋಕುಲಂ ಮೂವೀಸ್ ಚಿತ್ರಕ್ಕೆ ಬೆಂಬಲ ನೀಡುತ್ತಿದೆ. ಚಿತ್ರವನ್ನು ಹಲವಾರು ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಚಿತ್ರತಂಡ ಹೊಂದಿದೆ.

ಈಮಧ್ಯೆ,  ಅನುಷ್ಕಾ ಶೆಟ್ಟಿ ಅವರ ಕಮ್ ಬ್ಯಾಕ್ ಚಿತ್ರ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಮುಂದಿನ ವಾರ (ಸೆಪ್ಟೆಂಬರ್ 7) ಬಿಡುಗಡೆಯಾಗುತ್ತಿದೆ. ನಟಿ ಶೀಘ್ರದಲ್ಲೇ ಕಥನಾರ್ ಸೆಟ್‌ಗೆ ಸೇರುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com