ದುನಿಯಾ ವಿಜಯ್ ಮುಂದಿನ ಚಿತ್ರಕ್ಕಾಗಿ ತಮಿಳಿನ ಎಸ್‌ಜೆ ಸೂರ್ಯ ಜೊತೆ ನಿರ್ದೇಶಕ ಜಡೇಶಾ ಚರ್ಚೆ

ನಟ ದುನಿಯಾ ವಿಜಯ್ ನಿರ್ದೇಶನದ ಎರಡನೇ ಸಿನಿಮಾ 'ಭೀಮ' ಬಿಡುಗಡೆಗೆ ಸಜ್ಜಾಗುತ್ತಿದ್ದು, ನವೆಂಬರ್‌ನಲ್ಲಿ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅದೇ ಸಮಯದಲ್ಲಿ, ಅವರು ತಮ್ಮ ಮುಂಬರುವ ಚಿತ್ರಕ್ಕಾಗಿ ನಿರ್ದೇಶಕ ಜಡೇಶಾ ಕೆ ಹಂಪಿ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. 
ದುನಿಯಾ ವಿಜಯ್ - ಎಸ್‌ಜೆ ಸೂರ್ಯ
ದುನಿಯಾ ವಿಜಯ್ - ಎಸ್‌ಜೆ ಸೂರ್ಯ

ನಟ ದುನಿಯಾ ವಿಜಯ್ ನಿರ್ದೇಶನದ ಎರಡನೇ ಸಿನಿಮಾ 'ಭೀಮ' ಬಿಡುಗಡೆಗೆ ಸಜ್ಜಾಗುತ್ತಿದ್ದು, ನವೆಂಬರ್‌ನಲ್ಲಿ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅದೇ ಸಮಯದಲ್ಲಿ, ಅವರು ತಮ್ಮ ಮುಂಬರುವ ಚಿತ್ರಕ್ಕಾಗಿ ನಿರ್ದೇಶಕ ಜಡೇಶಾ ಕೆ ಹಂಪಿ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಚಿತ್ರಕ್ಕೆ ಈ ವರ್ಷದ ಕೊನೆಯಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ಇತ್ತೀಚಿನ ವರದಿಗಳ ಪ್ರಕಾರ, ಚಿತ್ರದ ಸಂಭಾವ್ಯ ಪಾತ್ರಕ್ಕಾಗಿ ಚಿತ್ರತಂಡ ಹೆಸರಾಂತ ತಮಿಳು ನಟ ಎಸ್‌ಜೆ ಸೂರ್ಯ ಅವರೊಂದಿಗೆ ಚರ್ಚೆಯಲ್ಲಿ ತೊಡಗಿದೆ ಎನ್ನಲಾಗಿದೆ.

ಜಡೇಶಾ ಕೆ ಹಂಪಿ ಮಾತನಾಡಿ, 'ಹೌದು, ನಮ್ಮ ಇನ್ನೂ ಹೆಸರಿಸದ ಚಿತ್ರದಲ್ಲಿ ಎಸ್‌ಜೆ ಸೂರ್ಯ ಅವರನ್ನು ಮನಸ್ಸಿನಲ್ಲಿಟ್ಟುಕೊಂಡಿರುವ ಆಸಕ್ತಿದಾಯಕ ಪಾತ್ರವಿದೆ ಮತ್ತು ನಾವು ಅವರೊಂದಿಗೆ ನಮ್ಮ ಆರಂಭಿಕ ಮಾತುಕತೆಯನ್ನು ನಡೆಸಿದ್ದೇವೆ. ಸದ್ಯ, ಅವರು ಮತ್ತೊಂದು ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ ಮತ್ತು ಅವರ ಈಗಿನ ಶೆಡ್ಯೂಲ್ ಮುಗಿದ ನಂತರ ಮತ್ತೆ ಅವರನ್ನು ಸಂಪರ್ಕಿಸುವಂತೆ ನಮ್ಮನ್ನು ಕೇಳಿಕೊಂಡಿದ್ದಾರೆ. ಆ ಸಮಯದಲ್ಲಿ ನಾವು ನಮ್ಮ ಚರ್ಚೆಯನ್ನು ಪುನರಾರಂಭಿಸುತ್ತೇವೆ ಎನ್ನುತ್ತಾರೆ. ಅಲ್ಲದೆ, ತಾವು ಸದ್ಯ ನಾಯಕಿ ಸೇರಿದಂತೆ ಚಿತ್ರದ ಇತರ ಪಾತ್ರವರ್ಗವನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಬ್ಯುಸಿಯಾಗಿರುವುದಾಗಿ ತಿಳಿಸಿದ್ದಾರೆ.

ದುನಿಯಾ ವಿಜಯ್ ಅವರು ಈ ಮೊದಲು ಸಲಗ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರ ಮೆಚ್ಚುಗೆಗೆ ಪಾತ್ರವಾಗಿತ್ತು.

ನಿರ್ದೇಶಕರು ಕಥಾಹಂದರವನ್ನು ಬಹಿರಂಗಪಡಿಸದಿದ್ದರೂ, ಭಾರತ ಸ್ವಾತಂತ್ರ್ಯದ ನಂತರದ ಕಥೆಯನ್ನು ಒಳಗೊಂಡಿದೆ. ನಮ್ಮ ದೃಷ್ಟಿಕೋನಕ್ಕೆ ಜೀವ ತುಂಬಲೆಂದು ಸೂಕ್ತವಾಗಿ ಹೊಂದಿಕೊಳ್ಳುವ ನಟರನ್ನು ನಾವು ಸಕ್ರಿಯವಾಗಿ ಹುಡುಕುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ. 

ಈಮಧ್ಯೆ, ಭೀಮ ಚಿತ್ರ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ನಿರ್ಮಾಣದ ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದು, ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಶಿವ ಸೇನಾ ಛಾಯಾಗ್ರಹಣ ಚಿತ್ರಕ್ಕಿದ್ದು, ದೀಪು ಎಸ್ ಕುಮಾರ್ ಸಂಕಲನವನ್ನು ನಿರ್ವಹಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com