ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿರುವ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರ ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.
ಸೆಪ್ಟೆಂಬರ್ 7ರಿಂದ ಅಮೆಜಾನ್ ಪ್ರೈಮ್‌ನಲ್ಲಿ ಚಿತ್ರ ವೀಕ್ಷಿಸಬಹುದಾಗಿದೆ. ಬೆಂಗಳೂರು ಸೇರಿದಂತೆ ದೇಶದ ಎಲ್ಲ ಚಿತ್ರಮಂದಿರಗಳಲ್ಲಿಯೂ ಅಗಸ್ಟ್ 11ರಂದು ‘ಜೈಲರ್’ ಚಿತ್ರ ಬಿಡುಗಡೆಗೊಂಡಿತ್ತು. 2 ವರ್ಷದ ನಂತರ ರಜನಿ ಮಾಸ್ ಚಿತ್ರದ ಮೂಲಕ ಬೆಳ್ಳಿತರ ಮೇಲೆ ಕಾಣಿಸಿದ್ದರು.
ಜೈಲರ್ ಚಿತ್ರ ಒಂದು ಕೌಟುಂಬಿಕ ಕಥಾಹಂದರವನ್ನು ಹೊಂದಿದೆ. ತನ್ನ ಮಗನ ಕೊಲೆ ಮಾಡಿದವರನ್ನು ಹುಡುಕುತ್ತಾ ಹೋಗುವ ನಿವೃತ್ತ ಜೈಲರ್ ಟೈಗರ್ ಮುಡುವೇಲ್ ಪಾಂಡಿಯನ್ ಮೇಲೆ ಕಥೆ ಕೇಂದ್ರಿತವಾಗಿದೆ. ನರಸಿಂಹನ ಪಾತ್ರದಲ್ಲಿ ನಟ ಶಿವರಾಜ್ ಕುಮಾರ್ ಅದ್ಭುತವಾಗಿ ನಟಿಸಿದ್ದಾರೆ.
ಈ ಹಿಂದೆ ನೆಟ್‌ಫ್ಲಿಕ್ಸ್ ಮತ್ತು ಸನ್ ನೆಕ್ಸ್ಟ್ ಒಟಿಟಿಯಲ್ಲಿ ಜೈಲರ್ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಬಹುದು ಎಂಬ ಸುದ್ದಿ ಹರಿದಾಡಿತ್ತು. ಇದೀಗ ಜೈಲರ್ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ ಎಂದು ಸ್ವತಃ ಪ್ರೈಂ ಅಧಿಕೃತ ಘೋಷಣೆ ಮಾಡಿದೆ. ಸೆಪ್ಟೆಂಬರ್ 7ರಂದು ಅಮೆಜಾನ್ ಪ್ರೈಂನಲ್ಲಿ ತಮಿಳು, ತೆಲುಗು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಸ್ಟ್ರೀಮ್ ಆಗಲಿದೆ.
Advertisement