'ಗೋಲ್ಡನ್ ಸ್ಟಾರ್' ಗಣೇಶ್ ನಟನೆಯ 'ಬಾನದಾರಿಯಲ್ಲಿ' ಚಿತ್ರ ಸೆಪ್ಟೆಂಬರ್ 28ಕ್ಕೆ ಬಿಡುಗಡೆ

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಜೋಡಿ ‘ಬಾನದಾರಿಯಲ್ಲಿ’ ಚಿತ್ರ ಸೆಪ್ಟೆಂಬರ್ 28ಕ್ಕೆ ಬಿಡುಗಡೆಯಾಗಲಿದೆ.
ಚಿತ್ರದ ಪೋಸ್ಟರ್.
ಚಿತ್ರದ ಪೋಸ್ಟರ್.

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಜೋಡಿ ‘ಬಾನದಾರಿಯಲ್ಲಿ’ ಚಿತ್ರ ಸೆಪ್ಟೆಂಬರ್ 28ಕ್ಕೆ ಬಿಡುಗಡೆಯಾಗಲಿದೆ.

ಸೆಪ್ಟೆಂಬರ್ 28 ರಂದು ಟಾಲಿವುಡ್ ನಡ ಪ್ರಭಾಸ್ ಅಭಿನಯದ ಸಲಾರ್ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರದ ದಿನಾಂಕ ಮುಂದೂಡಿಕೆಯಾಗಿದೆ. ಇದರ ಲಾಭವನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿರುವ ಬಾನದಾರಿಯಲ್ಲಿ ಚಿತ್ರತಂಡ ಅದೇ ದಿನದಂದು (ಸೆ.28) ಚಿತ್ರ ಬಿಡುಗಡೆಗೆ ನಿರ್ಧರಿಸಿದೆ.

ಬಾನದಾರಿಯಲ್ಲಿ ಚಿತ್ರದಲ್ಲಿ ಗಣೇಶ್ ಕ್ರಿಕೆಟಿಗನಾಗಿ ಕಾಣಿಸಿಕೊಂಡಿದ್ದಾರೆ. ರುಕ್ಮಿಣಿ ವಸಂತ್ ಮತ್ತು ರೀಷ್ಮಾ ನಾಣಯ್ಯ ಗೋಲ್ಡನ್‌ಸ್ಟಾರ್ ಜೊತೆಗೆ ನಟಿಸಿದ್ದಾರೆ. ಈ ಚಿತ್ರವು ಪ್ರೀತಂ ಜೊತೆ ಗಣೇಶ್ ಅವರ ನಾಲ್ಕನೇ ಚಿತ್ರವಾಗಿದೆ. ಪ್ರೀತಂ ಈ ಹಿಂದೆ ಮುಂಗಾರು ಮಳೆ ಸಿನಿಮಾದಲ್ಲಿ ಸಹ-ಬರಹಗಾರರಾಗಿ ಕೆಲಸ ಮಾಡಿದ್ದರು. ಬಳಿಕ ಅವರು ಗಣೇಶ್ ಅವರೊಂದಿಗೆ ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ, ಮತ್ತು 99 ಚಿತ್ರಗಳನ್ನು ನಿರ್ದೇಶಿಸಿದರು. ಈ ಜೋಡಿ ಇದೀಗ ಬಾನದಾರಿಯಲ್ಲಿ ಮೂಲಕ ಮತ್ತೊಮ್ಮೆ ಮೋಡಿ ಮಾಡಲು ಪ್ರೇಕ್ಷಕರ ಮುಂದೆ ಬರುತ್ತಿದೆ.

ರೊಮ್ಯಾಂಟಿಕ್ ಚಿತ್ರವಾದ ಬಾನದಾರಿಯಲ್ಲಿ ಸಿನಿಮಾದ ಕಥೆಯನ್ನು ಸಿನಿಮಾಟೋಗ್ರಾಫರ್ ಪ್ರೀತಾ ಜಯರಾಮನ್ ಬರೆದಿದ್ದು, ಪ್ರೀತಂ ಚಿತ್ರಕಥೆ ಬರೆದಿದ್ದಾರೆ.ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಅಭಿಲಾಷ್ ಕಲತಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com