ಸಾನ್ಯಾ- ಸಮರ್ಜಿತ್ ಸಿನಿಮಾ ಟೈಟಲ್ ಫಿಕ್ಸ್: 'ಗೌರಿ' ತಂಡ ಸೇರಿದ ಮಿಸ್ ಟೀನ್ ಯೂನಿವರ್ಸ್ ಸ್ವೀಝಲ್ ಫುರ್ಟಾಡೊ!

ಗೌರಿ ಸಿನಿಮಾಗೆ ಮತ್ತೊರ್ವ ಯುವ ಪ್ರತಿಭೆ ಸೇರ್ಪಡೆಯಾಗಿದ್ದಾರೆ. ಮಿಸ್ ಟೀನ್ ಯೂನಿವರ್ಸ್ ಆಗಿ ಮೆಚ್ಚುಗೆ ಗಳಿಸಿರುವ ಉಡುಪಿಯ ಬಾರ್ಕೂರಿನ 19 ವರ್ಷದ ಸ್ವೀಝಲ್ ಫುರ್ಟಾಡೊ ಕನ್ನಡ ಸಿನಿಮಾರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಸಜ್ಜಾಗಿದ್ದಾರೆ
ಸ್ವೀಝಲ್ ಫುರ್ಟಾಡೊ
ಸ್ವೀಝಲ್ ಫುರ್ಟಾಡೊ

ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಅವರ ಪುತ್ರ ಸಮರ್ಜಿತ್ ಲಂಕೇಶ್ ಚಿತ್ರರಂಗಕ್ಕೆ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದು ಚಿತ್ರದ ಟೈಟಲ್ ರಿವೀಲ್ ಆಗಿದೆ.

ಇತ್ತೀಚೆಗಷ್ಟೆ ಚಿತ್ರದ ಮುಹೂರ್ತವೂ ನೆರವೇರಿದೆ. ಚಿತ್ರಕ್ಕೆ ‘ಗೌರಿ’ ಎಂದು ಶೀರ್ಷಿಕೆ ಇಡಲಾಗಿದ್ದು, ಸಮರ್ಜಿತ್‌ಗೆ ಚಿತ್ರದಲ್ಲಿ ಬಿಗ್‌ಬಾಸ್ ಮತ್ತು ‘ಪುಟ್ಟಗೌರಿ’ ಧಾರಾವಾಹಿ ಖ್ಯಾತಿಯ ಸಾನ್ಯಾ ಐಯರ್ ನಾಯಕಿಯಾಗಿದ್ದಾರೆ.

ಗೌರಿ ಎಂಬ ಟೈಟಲ್ ಇಂದ್ರಜಿತ್ ಸಹೋದರಿಯ ಹೆಸರಿನಿಂದ ಸ್ಫೂರ್ತಿ ಪಡೆದಿದೆ. ನೈಜ ಘಟನೆಯನ್ನು ಆಧರಿಸಿದ ಚಿತ್ರ ಎಂದು ನಿರ್ದೇಶಕರು ಸುಳಿವು ನೀಡಿದ್ದರೂ, ಕಥಾಹಂದರದ ಬಗ್ಗೆ  ತುಟಿ ಬಿಚ್ಚಿಲ್ಲ.

ಗೌರಿ ಸಿನಿಮಾ ಇಂದ್ರಜಿತ್ ಪುತ್ರ ಸಮರ್ಜಿತ್ ಮತ್ತು ಸಾನ್ಯಾ ಅಯ್ಯರ್‌ಗೆ ಲಾಂಚ್‌ಪ್ಯಾಡ್ ಆಗಿ ಕಾರ್ಯನಿರ್ವಹಿಸಿಲಿದೆ. ಇಬ್ಬರು ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.

ಗೌರಿ ಸಿನಿಮಾಗೆ ಮತ್ತೊರ್ವ ಯುವ ಪ್ರತಿಭೆ ಸೇರ್ಪಡೆಯಾಗಿದ್ದಾರೆ. ಮಿಸ್ ಟೀನ್ ಯೂನಿವರ್ಸ್ ಆಗಿ ಮೆಚ್ಚುಗೆ ಗಳಿಸಿರುವ ಉಡುಪಿಯ ಬಾರ್ಕೂರಿನ 19 ವರ್ಷದ ಸ್ವೀಝಲ್ ಫುರ್ಟಾಡೊ ಕನ್ನಡ ಸಿನಿಮಾರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಸಜ್ಜಾಗಿದ್ದಾರೆ.

ಸ್ವೀಝಲ್ ಹೆಸರು, ಐರಿಶ್ ಮೂಲದಿಂದ ಬಂದಿದೆ, ಅಂದರೆ ಸಿಹಿ ಎಂದು ಇಂದ್ರಜಿತ್ ಲಂಕೇಶ್ ವ್ಯಾಖ್ಯಾನಿಸಿದ್ದಾರೆ. ನಿರ್ದೇಶಕರು ಚಿತ್ರೀಕರಣ ಪ್ರಾರಂಭಿಸಿದ್ದಾರೆ, ಸದ್ಯ ಸಮರ್ಜಿತ್ ಮತ್ತು ಸಾನ್ಯಾ ಅಯ್ಯರ್ ಜೊತೆ ಗೌರಿ ಸೆಟ್‌ನಲ್ಲಿದ್ದ ಸ್ವೀಝಲ್ ಸಿನಿಮಾ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದಾರೆ.

ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಕೆಲಸ ಮಾಡುತ್ತಿರುವುದು ಅದ್ಭುತ ಅನುಭವ, ಇಂಡಸ್ಟ್ರಿಯಲ್ಲಿರುವ ಹಲವರಂತೆ, ಫ್ಯಾಷನ್ ಅಥವಾ ಸಿನಿಮಾ ಜಗತ್ತಿನಲ್ಲಿ ನನಗೆ ಯಾವುದೇ ಸ್ನೇಹಿತರು ಅಥವಾ ಕುಟುಂಬದ ಸಂಪರ್ಕವಿಲ್ಲ. ಆದ್ದರಿಂದ, ಈ ಪ್ರಯಾಣವು ನನಗೆ ಒಂದು ಸ್ಮಾರಣೀಯ ಮುನ್ನಡೆಯನ್ನು ಸೂಚಿಸುತ್ತದೆ. ನನ್ನ ಸ್ವಂತ ಶ್ರಮ ಮತ್ತು ಸಮರ್ಪಣೆಯಿಂದ ಕೆಲಸ ಮಾಡಲು ಪ್ರೇರೇಪಿಸಿದೆ.

ಮಾಡೆಲಿಂಗ್‌ನಿಂದ ನಟನಾ ವೃತ್ತಿಗೆ ಬದಲಾಗುತ್ತಿರುವ ಸ್ವೀಝಲ್, "ನಾನು ಯಾವಾಗಲೂ ನಟನೆಯನ್ನು ಮುಂದುವರಿಸಲು ಯೋಚಿಸುತ್ತಿದ್ದೆ, ಆದರೆ ಅಂತಹ ಆರಂಭಿಕ ಅವಕಾಶವನ್ನು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ತಯಾರಿಗೆ ಇನ್ನಷ್ಟು ಸಮಯ ಬೇಕು ಎಂದುಕೊಂಡೆ. ಇದೊಂದು ಸುವರ್ಣಾವಕಾಶ ಎಂಬ ಭಾವನೆ ಮೂಡಿದೆ. ಆದರೆ ನಾನು ನಿರೀಕ್ಷೆ ಮಾಡದ್ದಕ್ಕಿಂತ ಬೇಗ ಅವಕಾಶ ಬಂದಿತು ಎಂದು ಸ್ಪೀಝಲ್ ಹೇಳಿದ್ದಾರೆ.

<strong>ಗೌರಿ ಚಿತ್ರದ ಪೋಸ್ಟರ್</strong>
ಗೌರಿ ಚಿತ್ರದ ಪೋಸ್ಟರ್

ತನ್ನ ಮಾಡೆಲಿಂಗ್ ದಿನಗಳಲ್ಲಿ ತನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದ ತನ್ನ ಅನುಭವವನ್ನು ನೆನಪಿಸಿಕೊಳ್ಳುತ್ತಾ, ಮೂರನೇ ತರಗತಿಯಲ್ಲಿದ್ದಾಗ ನಾನು ಮಾಡೆಲ್ ಆಗಿ ನನ್ನ ಮೊದಲ ಪ್ರದರ್ಶನ ಮಾಡಿದೆ. ಹತ್ತನೇ ತರಗತಿಯ ನಂತರ ಮಾಡೆಲಿಂಗ್ ಬಗ್ಗೆ ನನ್ನ ಉತ್ಸಾಹವು ಬೆಳೆಯಿತು. ನನ್ನ ಆಕಾಂಕ್ಷೆಗಳನ್ನು ನನ್ನ ತಾಯಿ ಬೆಂಬಲಿಸಿದರು, ಇದರಿಂದಾಗಿ ಚಲನಚಿತ್ರೋದ್ಯಮಕ್ಕೆ ಬರಲು ಸಹಾಯವಾಯಿತು ಎಂದಿದ್ದಾರೆ.

ಗೌರಿ ಚಿತ್ರದಲ್ಲಿನ ತನ್ನ ಪಾತ್ರದ ಬಗ್ಗೆ ಮಾತನಾಡಿದ ಸ್ವೀಜಲ್, ಪಾತ್ರವು ಕುತೂಹಲಕಾರಿಯಾಗಿರುವ ಬಗ್ಗೆ ಸುಳಿವು ನೀಡಿದರು, ಚಿತ್ರದಲ್ಲಿ ನನ್ನ ಆಕರ್ಷಕ ಪಾತ್ರವನ್ನು ಪ್ರೇಕ್ಷಕರು ಎದುರುನೋಡಬಹುದು. ಆದರೆ ಈ ಸಮಯದಲ್ಲಿ ನಾನು ಹೆಚ್ಚಿನ ವಿಷಯ ಬಹಿರಂಗಪಡಿಸಲು ಸಾಧ್ಯವಿಲ್ಲ.

ಈಗಾಗಲೇ ಸಾನ್ಯಾ ಅಯ್ಯರ್ ನಾಯಕಿ ಎಂದು ಘೋಷಿಸಲಾಗಿದೆ. ಹೀಗಿರುವಾಗ ನನ್ನ ಪಾತ್ರವೇನು ಎಂಬ ಪ್ರಶ್ನೆ ಉದ್ಭವಿಸುತ್ತದೆ, ಆದರೆ ಚಿತ್ರದಲ್ಲಿ ನನ್ನ ಪಾತ್ರಕ್ಕೆ ಸಾಕಷ್ಟು ಅವಕಾಶವಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com