ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿರುವ ಪಿ ಲಂಕೇಶ್ ಕುಟುಂಬದ ಕುಡಿ ಇದೀಗ ಬೆಳ್ಳಿತೆರೆ ಮೇಲೆ ವಿಜೃಂಭಿಸಲು ಸಿದ್ಧರಾಗಿದ್ದಾರೆ. ತಂದೆ ಇಂದ್ರಜಿತ್ ಲಂಕೇಶ್ ನಿರ್ದೇಶನದ ಚಿತ್ರದಲ್ಲಿ ಪುತ್ರ ಸಮರ್ಜಿತ್ ಲಂಕೇಶ್ ನಟಿಸುತ್ತಿದ್ದು, ಇವರೊಂದಿಗೆ ನಟಿ ಸಾನ್ಯಾ ಅಯ್ಯರ್ ಕೂಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
'ಪುಟ್ಟಗೌರಿ ಮದುವೆ' ಎಂಬ ಕಿರುತೆರೆ ಧಾರಾವಾಹಿಯಲ್ಲಿ ಬಾಲ ಕಲಾವಿದೆಯಾಗಿ ಗುರುತಿಸಿಕೊಂಡಿದ್ದ ನಟಿ, ನಂತರ ವಿವಿಧ ರಂಗಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.
ಬಿಗ್ ಬಾಸ್ ಒಟಿಟಿ ಕನ್ನಡದಲ್ಲಿ ಕಂಟೆಸ್ಟೆಂಟ್ ಮತ್ತು ಸೀಸನ್ 9 ರಲ್ಲಿ ಭಾಗವಹಿಸಿದ್ದ ಅವರು ಜನಪ್ರಿಯ ಸ್ಪರ್ಧಿಯಾಗಿ ಹೊರಹೊಮ್ಮಿದರು. ಅಲ್ಲದೆ, ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಚಿತ್ರರಂಗಕ್ಕೆ ಸಾನ್ಯಾ ಅವರ ಪ್ರವೇಶದಿಂದ ನಿರೀಕ್ಷೆಗಳು ಹೆಚ್ಚುತ್ತಿದ್ದು, ಒಳ್ಳೆಯ ಚಿತ್ರತಂಡದೊಂದಿಗೆ ಅವರು ಲಾಂಚ್ ಆಗುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಸೆಪ್ಟೆಂಬರ್ 4ರಂದು ಅಧಿಕೃತವಾಗಿ ಬಿಡುಗಡೆ ಮಾಡಲು ಕಾಯಲಾಗುತ್ತಿದೆ. ಅಂದೇ ಚಿತ್ರದ ಬಗ್ಗೆಯೂ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
Advertisement