ಅಕ್ಟೋಬರ್ 13 ರಂದು ರಾಷ್ಟ್ರೀಯ ಸಿನಿಮಾ ದಿನ ಆಚರಣೆ; ಅಂದು ಟಿಕೆಟ್ ಬೆಲೆ 99 ರೂ.

ಈ ವರ್ಷ ಅಕ್ಟೋಬರ್ 13 ರಂದು ರಾಷ್ಟ್ರೀಯ ಸಿನಿಮಾ ದಿನವನ್ನು ಆಚರಿಸಲಾಗುವುದು ಎಂದು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ(MAI) ಗುರುವಾರ ಘೋಷಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಈ ವರ್ಷ ಅಕ್ಟೋಬರ್ 13 ರಂದು ರಾಷ್ಟ್ರೀಯ ಸಿನಿಮಾ ದಿನವನ್ನು ಆಚರಿಸಲಾಗುವುದು ಎಂದು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ(MAI) ಗುರುವಾರ ಘೋಷಿಸಿದೆ.
  
ರಾಷ್ಟ್ರೀಯ ಸಿನಿಮಾ ದಿನಕ್ಕೆ ಪ್ರೇಕ್ಷಕರಿಗೆ ಸಿಹಿ ಸುದ್ದಿಯನ್ನು ನೀಡಿದ ಎಂಎಐ, ದೇಶದಾದ್ಯಂತದ ಚಿತ್ರಮಂದಿರಗಳಲ್ಲಿ ಟಿಕೆಟ್ ಬೆಲೆ ಕೇವಲ 99 ರೂಪಾಯಿ ನಿಗದಿಪಡಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

PVR INOX, Cinepolis, Miraj ಮತ್ತು Delite ಸೇರಿದಂತೆ ಭಾರತದ ಮಲ್ಟಿಪ್ಲೆಕ್ಸ್‌ಗಳಲ್ಲಿ 4,000 ಕ್ಕೂ ಹೆಚ್ಚು ಸ್ಕ್ರೀನ್‌ಗಳು ರಾಷ್ಟ್ರೀಯ ಸಿನಿಮಾ ದಿನಾಚರಣೆಯಲ್ಲಿ ಭಾಗವಹಿಸಲು ನಿರ್ಧರಿಸಿವೆ ಎಂದು ಪ್ರಕಟಣೆ ಹೇಳಿದೆ.

"ಈ ವಿಶೇಷ ಸಂದರ್ಭವು ಎಲ್ಲಾ ವಯಸ್ಸಿನ ಪ್ರೇಕ್ಷಕರನ್ನು ಒಂದು ದಿನದ ಸಿನಿಮೀಯ ಆನಂದಕ್ಕಾಗಿ ಒಟ್ಟುಗೂಡಿಸುತ್ತದೆ. ಈ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಹಲವು ಚಿತ್ರಗಳು ಯಶಸ್ವಿ ಪ್ರದರ್ಶನ ಕಾಣುತ್ತಿವೆ.

"ಈ ಯಶಸ್ಸಿಗೆ ಕಾರಣರಾದ ಎಲ್ಲಾ ಚಿತ್ರಪ್ರೇಮಿಗಳಿಗೆ ಇದು ಹೃತ್ಪೂರ್ವಕ 'ಧನ್ಯವಾದಗಳು' ಮತ್ತು ಇನ್ನೂ ತಮ್ಮ ಸ್ಥಳೀಯ ಚಿತ್ರರಂಗಕ್ಕೆ ಹಿಂತಿರುಗದವರಿಗೆ ಮುಕ್ತ ಆಹ್ವಾನ" ಎಂದು ಅಸೋಸಿಯೇಷನ್ ಹೇಳಿದೆ.

MAI ಪ್ರಕಾರ, ರೆಕ್ಲೈನರ್ ಮತ್ತು ಪ್ರೀಮಿಯಂ ಫಾರ್ಮ್ಯಾಟ್‌ಗಳನ್ನು ಹೊರತುಪಡಿಸಿ, ಸಿನಿ ಪ್ರೇಕ್ಷಕರು ಅಕ್ಟೋಬರ್ 13 ರಂದು ಯಾವುದೇ ಚಿತ್ರವನ್ನು ಮತ್ತು ಯಾವುದೇ ಪ್ರದರ್ಶನವನ್ನು 99 ರೂ.ಗೆ ವೀಕ್ಷಿಸಬಹುದು.

ಕಳೆದ ವರ್ಷ, ಅಸೋಸಿಯೇಷನ್ ಸೆಪ್ಟೆಂಬರ್ 23 ರಂದು ರಾಷ್ಟ್ರೀಯ ಸಿನಿಮಾ ದಿನವನ್ನು ಆಚರಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com