ಬಾಲಿವುಡ್ ನಲ್ಲಿ ಎಥಿಕ್ಸ್​, ಶಿಸ್ತು, ಮೌಲ್ಯದ ಕೊರತೆ; ಉರಿವ ಬೆಂಕಿಗೆ ತುಪ್ಪ ಸುರಿದರಾ ಕಾಜಲ್ ಅಗರ್​ವಾಲ್?

ನಟಿ ಕಾಜಲ್ ಅಗರ್​ವಾಲ್ ಅವರು ಸದಾ ವಿವಾದದಿಂದ ದೂರ ಉಳಿಯೋಕೆ ಪ್ರಯತ್ನಿಸುತ್ತಾರೆ. ಟ್ರೋಲ್​ಗಳ ಬಗ್ಗೆ ಅವರು ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಈಗ ಕಾಜಲ್ ಅಗರ್​ವಾಲ್ ಅವರು ನೀಡಿರೋ ಹೇಳಿಕೆ ಸಾಕಷ್ಟು ಚರ್ಚೆಹುಟ್ಟು ಹಾಕಿದೆ.
ಕಾಜಲ್ ಅಗರ್ ವಾಲ್
ಕಾಜಲ್ ಅಗರ್ ವಾಲ್

ಮುಂಬಯಿ: ನಟಿ ಕಾಜಲ್ ಅಗರ್​ವಾಲ್ ಅವರು ಸದಾ ವಿವಾದದಿಂದ ದೂರ ಉಳಿಯೋಕೆ ಪ್ರಯತ್ನಿಸುತ್ತಾರೆ. ಟ್ರೋಲ್​ಗಳ ಬಗ್ಗೆ ಅವರು ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಈಗ ಕಾಜಲ್ ಅಗರ್​ವಾಲ್ ಅವರು ನೀಡಿರೋ ಹೇಳಿಕೆ ಸಾಕಷ್ಟು ಚರ್ಚೆಹುಟ್ಟು ಹಾಕಿದೆ.

ಬಾಲಿವುಡ್  ಚಿತ್ರರಂಗದಲ್ಲಿ ಕಾಜಲ್ ಗುರುತಿಸಿಕೊಂಡಿದ್ದಾರೆ. ಹೀಗಿದ್ದರೂ ಅಲ್ಲಿನವರಿಗೆ ಎಥಿಕ್ಸ್​ನ ಕೊರತೆ ಇದೆ ಎಂದು ನೇರ ಮಾತುಗಳಲ್ಲಿ ಹೇಳಿದ್ದಾರೆ. ಇದಕ್ಕೆ ಬಾಲಿವುಡ್​ನ ಕೆಲವರು ಅಪಸ್ವರ ತೆಗೆದಿದ್ದಾರೆ.

ಖಾಸಗಿ ಚಾನೆಲ್ ನ ಸಂದರ್ಶನವೊಂದರಲ್ಲಿ ಮಾತನಾಡಿದ  ಕಾಜಲ್, ದಕ್ಷಿಣ ಸಿನಿಮಾ ಇಂಡಸ್ಟ್ರಿಯ ನೈತಿಕತೆ, ಶಿಸ್ತು ನನಗೆ ಇಷ್ಟವಾಗುತ್ತದೆ. ಹಿಂದಿ ಚಿತ್ರರಂಗದಲ್ಲಿ ಅದರ ಕೊರತೆಯಿದೆ ಎಂದು ನನಗೆ ಅನಿಸುತ್ತದೆ’ ಎಂದಿದ್ದಾರೆ. ಬಾಲಿವುಡ್​-ದಕ್ಷಿಣ ಭಾರತ ಎಂಬ ಚರ್ಚೆ ಜೋರಾಗಿರುವಾಗಲೇ ಕಾಜಲ್ ನೀಡಿದ ಈ ಹೇಳಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಕಾಜಲ್​ ಅಗರ್​ವಾಲ್​ ಸಹ ಒಬ್ಬರು. ಬಾಲಿವುಡ್​ನಲ್ಲಿ ‘ಸಿಂಗಂ’ ಮತ್ತು ‘ಸ್ಪೆಷಲ್​ 26’ ಚಿತ್ರಗಳಲ್ಲಿ ನಟಿಸಿದ ಕಾಜಲ್​, ಆ ನಂತರ ಬಾಲಿವುಡ್​ನಿಂದ ದೂರವಾಗಿ, ದಕ್ಷಿಣದ ಚಿತ್ರಗಳಲ್ಲೇ ಹೆಚ್ಚಾಗಿ ನಟಿಸಿದರು.

ಬಹಳಷ್ಟು ನಟ-ನಟಿಯರಿಗೆ ಬಾಲಿವುಡ್​ನಿಂದ ತಮ್ಮ ಚಿತ್ರಜೀವನ ಪ್ರಾರಂಭಿಸಬೇಕು ಎಂಬ ಆಸೆ ಇರುತ್ತದೆ. ಏಕೆಂದರೆ, ಹಿಂದಿ ಭಾಷೆಯ ಚಿತ್ರಗಳು ದೇಶಾದ್ಯಂತ ಬಿಡುಗಡೆಯಾಗುತ್ತವೆ. ಆದರೆ, ಅದಕ್ಕೆ ಹೋಲಿಸಿದರೆ, ದಕ್ಷಿಣದ ಚಿತ್ರರಂಗ ಬಹಳ ಫ್ರೆಂಡ್ಲಿ. ಅಲ್ಲಿ ಕೆಲವು ಅದ್ಭುತ ತಂತ್ರಜ್ಞರು, ನಿರ್ದೇಶಕರು ಕೆಲಸ ಮಾಡುತ್ತಿದ್ದಾರೆ. ಅದ್ಭುತವಾದ ಚಿತ್ರಗಳು ಬರುತ್ತಿವೆ. ಬರೀ ಒಂದು ಭಾಷೆಯಲ್ಲಷ್ಟೇ ಅಲ್ಲ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಹೀಗೆ ನಾಲ್ಕೂ ಭಾಷೆಗಳಲ್ಲಿ ಬರುತ್ತಿವೆ’ ಎಂದಿದ್ದಾರೆ.

‘ಹಿಂದಿ ನನ್ನ ಮಾತೃಭಾಷೆ ಮತ್ತು ನಾನು ಹಿಂದಿ ಸಿನಿಮಾಗಳನ್ನು ನೋಡುತ್ತಾ ಬೆಳೆದವಳು. ಹಿಂದಿ ಚಿತ್ರರಂಗದಲ್ಲಿ ನನಗೆ ಬಹಳ ಒಳ್ಳೆಯ ಅವಕಾಗಳು ಸಿಕ್ಕಿವೆ. ಆದರೆ, ನನಗೆ ದಕ್ಷಿಣದ ಪರಿಸರ, ಅಲ್ಲಿನ ಮೌಲ್ಯಗಳು ಮತ್ತು ಶಿಸ್ತು ಬಹಳ ಇಷ್ಟ. ಅವೆಲ್ಲ ಬಾಲಿವುಡ್​ನಲ್ಲಿ ಮಿಸ್​ ಆಗುತ್ತಿದೆ ಎಂಬುದು ನನ್ನ ಅಭಿಪ್ರಾಯ’ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ತಾನು ಮುಂಬೈ ಹುಡುಗಿ ಆದರೂ, ಹೈದರಾಬಾದ್​ ಮತ್ತು ಚೆನ್ನೈ ಮನೆ ಇದ್ದಂತೆ ಎಂದಿರುವ ಅವರು, ‘ನಾನು ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಮುಂಬೈನಲ್ಲಿ. ಆದರೆ, ನನ್ನ ವೃತ್ತಿಜೀವನ ಶುರುವಾಗಿದ್ದು ತೆಲುಗಿನಲ್ಲಿ. ಹಿಂದಿಯಲ್ಲಿ ಎರಡು ಚಿತ್ರಗಳನ್ನು ಮಾಡಿದ್ದರೂ, ನಾನು ಹೆಚ್ಚು ಕೆಲಸ ಮಾಡಿದ್ದು ತಮಿಳು ಮತ್ತು ತೆಲುಗಿನಲ್ಲೇ. ಹಾಗಾಗಿ, ಚೆನ್ನೈ ಮತ್ತು ಹೈದರಾಬಾದ್​ ನನ್ನ ಮನೆ ಇದ್ದಂತೆ’ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com