ಐಪಿಎಲ್ 2023: ಉದ್ಘಾಟನಾ ಸಮಾರಂಭದಲ್ಲಿ 'ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ ರಶ್ಮಿಕಾ! ವಿಡಿಯೋ
ಗುಜರಾತಿನ ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ಆರಂಭವಾದ ಐಪಿಎಲ್ 2023 ಉದ್ಘಾಟನಾ ಸಮಾರಂಭದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮಸ್ತ್ ಸ್ಟೆಪ್ ಹಾಕುವ ಮೂಲಕ ನೆರೆದಿದ್ದ ಕ್ರೀಡಾಭಿಮಾನಿಗಳನ್ನು ರಂಜಿಸಿದ್ದಾರೆ.
Published: 01st April 2023 12:48 AM | Last Updated: 01st April 2023 01:16 AM | A+A A-

ರಶ್ಮಿಕಾ ಮಂದಣ್ಣ
ಅಹಮದಾಬಾದ್: ಗುಜರಾತಿನ ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ಆರಂಭವಾದ ಐಪಿಎಲ್-2023 ಉದ್ಘಾಟನಾ ಸಮಾರಂಭದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮಸ್ತ್ ಸ್ಟೆಪ್ ಹಾಕುವ ಮೂಲಕ ನೆರೆದಿದ್ದ ಕ್ರೀಡಾಭಿಮಾನಿಗಳನ್ನು ರಂಜಿಸಿದ್ದಾರೆ.
ಇತ್ತೀಚಿಗೆ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡ ತೆಲುಗಿನ ಬ್ಲಾಕ್ ಬಸ್ಟರ್ ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಗೂ ಪುಷ್ಪಾ ಸಿನಿಮಾದ 'ಸಾಮಿ ಸಾಮಿ' ಹಾಡಿಗೆ ರಶ್ಮಿಕಾ ನೃತ್ಯ ಪ್ರದರ್ಶನ ಮಾಡಿದ್ದಾರೆ.
ಇದನ್ನೂ ಓದಿ: ಐಪಿಎಲ್ 2023: ಉದ್ಘಾಟನಾ ಪಂದ್ಯದಲ್ಲಿ 5 ವಿಕೆಟ್ ಗಳಿಂದ ಸಿಎಸ್ ಕೆ ಮಣಿಸಿದ ಗುಜರಾತ್ ಟೈಟನ್ಸ್! ಶುಭಾರಂಭ
Sound @iamRashmika gets the crowd going with an energetic performance
— IndianPremierLeague (@IPL) March 31, 2023
Drop an emoji to describe this special #TATAIPL 2023 opening ceremony pic.twitter.com/EY9yVAnSMN
ಮೂಲತ: ಕನ್ನಡದ ರಶ್ಮಿಕಾ ಮಂದಣ್ಣ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿಯೂ ಅಭಿನಯಿಸುವ ಮೂಲಕ ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಆಗಾಗ್ಗೆ ಅಷ್ಟೇ ಟ್ರೋಲ್ ಕೂಡಾ ಆಗುತ್ತಾರೆ. ಐಪಿಎಲ್ ಉದ್ಘಾಟನಾ ಸಮಾರಂಭದಲ್ಲೂ ಸಾಮಿ ಸಾಮಿ ಹಾಡಿಗೆ ನೃತ್ಯ ಮಾಡಿರುವುದಕ್ಕೆ ಕೆಲವರು 'ರಶ್ಮಿಕಾ ಮಂಗಣ್ಣ' ಎಂದು ಕರೆದು ಟ್ರೋಲ್ ಮಾಡಿದ್ದಾರೆ.
Rashmika Manganna, has spent her whole career dancing for Saami saami hook step #IPLonJioCinema | #IPL2023OpeningCeremony | #IPL2023 pic.twitter.com/H3ml14huxX
— Chirag Thoogudeepa (@MuraliChirag) March 31, 2023