ಹಿರಿಯ ನಟಿ ಲೀಲಾವತಿ ಪುತ್ರ ವಿನೋದ್ ರಾಜ್ ಗೆ ಮದುವೆಯಾಗಿ ವಯಸ್ಸಿಗೆ ಬಂದ ಮಗನಿದ್ದಾನೆಯೇ?: ನಿರ್ದೇಶಕನ ಪೋಸ್ಟ್ ವೈರಲ್
ಕನ್ನಡದ ಹಿರಿಯ ನಟಿ ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಗೆ ಸಂಬಂಧಿಸಿದಂತೆ ಒಂದು ಸೆನ್ಸೇಷನಲ್ ಸುದ್ದಿಯನ್ನು ನಿರ್ದೇಶಕ ಪ್ರಕಾಶ್ ರಾಜ್ ಮೆಹು ಎಂಬುವವರು ಸೋಷಿಯಲ್ ಮೀಡಿಯಾದಲ್ಲಿ ಹೊರಹಾಕಿದ್ದು ಇದರ ಸತ್ಯಾಸತ್ಯತೆ ಬಗ್ಗೆ ಲೀಲಾವತಿಯವರು ಮತ್ತು ಅವರ ಪುತ್ರ ವಿನೋದ್ ರಾಜ್ ಅವರೇ ಹೇಳಬೇಕಾಗಿದೆ.
Published: 08th April 2023 02:24 PM | Last Updated: 10th April 2023 12:56 PM | A+A A-

ನಿರ್ದೇಶಕ ಪ್ರಕಾಶ್ ರಾಜ್ ಮೆಹು ಪೋಸ್ಟ್ ಮಾಡಿರುವ ಫೋಟೋ
ಬೆಂಗಳೂರು: ಕನ್ನಡದ ಹಿರಿಯ ನಟಿ ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಗೆ ಸಂಬಂಧಿಸಿದಂತೆ ಒಂದು ಸೆನ್ಸೇಷನಲ್ ಸುದ್ದಿಯನ್ನು ನಿರ್ದೇಶಕ ಪ್ರಕಾಶ್ ರಾಜ್ ಮೆಹು ಎಂಬುವವರು ಸೋಷಿಯಲ್ ಮೀಡಿಯಾದಲ್ಲಿ ಹೊರಹಾಕಿದ್ದು ಇದರ ಸತ್ಯಾಸತ್ಯತೆ ಬಗ್ಗೆ ಲೀಲಾವತಿಯವರು ಮತ್ತು ಅವರ ಪುತ್ರ ವಿನೋದ್ ರಾಜ್ ಅವರೇ ಹೇಳಬೇಕಾಗಿದೆ.
ವಿನೋದ್ ರಾಜ್ ಅವರು ತಮ್ಮ ಇಳಿವಯಸ್ಸಿನ ತಾಯಿ ಲೀಲಾವತಿಯವರನ್ನು ನೋಡಿಕೊಂಡು, ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡು ನೆಲಮಂಗಲ ಹತ್ತಿರ ವಾಸವಾಗಿದ್ದಾರೆ. ಅವರ ಮದುವೆ ವಿಚಾರ ಆಗಾಗ ಪ್ರಸ್ತಾಪವಾಗುತ್ತಿರುತ್ತದೆ. ಇದೀಗ ನಿರ್ದೇಶಕ ಪ್ರಕಾಶ್ ರಾಜ್ ಮೆಹು ತಮ್ಮ ಫೇಸ್ ಬುಕ್ ಪುಟದಲ್ಲಿ ಒಂದು ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ.
ಅದೇನೆಂದರೆ ವಿನೋದ್ ರಾಜ್ ಅವರಿಗೆ ಹೆಗಲೆತ್ತರಕ್ಕೆ ಬೆಳೆದ ಮಗನಿದ್ದು ಚೆನ್ನೈಯಲ್ಲಿ ಓದುತ್ತಿದ್ದಾನೆ. ವಿನೋದ್ ರಾಜ್ ಪತ್ನಿ ಮತ್ತು ಪುತ್ರ ಚೆನ್ನೈಯಲ್ಲಿ ವಾಸಿಸುತ್ತಿದ್ದಾರೆ. ಲೀಲಾವತಿಯವರ ಜೊತೆಗೆ ಕುಳಿತಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಅದರಲ್ಲಿ ಮಹಾಲಿಂಗ ಭಾಗವತರ್ ಅವರ ಪತ್ನಿ ಲೀಲಾವತಿ ಅಮ್ಮಾಳ್ ಎಂದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ಈ ಫೋಟೋ ಸಿಕ್ಕಿ ನನಗೆ ಹಲವು ಸಮಯವಾಗಿತ್ತು. ಆದರೆ ಸೂಕ್ತ ದಾಖಲೆಗಳಿಗಾಗಿ ನಾನು ಕಾಯುತ್ತಿದ್ದೆ. ಇತ್ತೀಚೆಗೆ ನನಗೆ ಗೆಳೆಯರೊಬ್ಬರು ಚೆನ್ನೈಯಿಂದ ಈ ಅಂಕಪಟ್ಟಿ ಮತ್ತು ಆಸ್ತಿ ದಾಖಲೆ ಪತ್ರಗಳನ್ನು ಕಳಿಹಿಸಿಕೊಟ್ಟಿದ್ದಾರೆ. ಹೀಗಾಗಿ ಬಹಿರಂಗಪಡಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.