ಆರ್.ಚಂದ್ರು ನಿರ್ದೇಶನದ 'ಕಬ್ಜ' ಒಟಿಟಿ ರಿಲೀಸ್ ಡೇಟ್ ಫಿಕ್ಸ್!
ಆರ್ ಚಂದ್ರು ನಿರ್ದೇಶಿಸಿ- ಉಪೇಂದ್ರ, ಕಿಚ್ಚ ಸುದೀಪ್ ಮತ್ತು ಶಿವರಾಜಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿರುವ ಕಬ್ದ ಸಿನಿಮಾ ಮಾರ್ಚ್ 17 ರಂದು ಥಿಯೇಟರ್ ಗಳಲ್ಲಿ ರಿಲೀಸ್ ಆಗಿತ್ತು.
Published: 12th April 2023 12:04 PM | Last Updated: 12th April 2023 03:30 PM | A+A A-

ಕಬ್ಜ ಸಿನಿಮಾ ಸ್ಚಿಲ್
ಆರ್ ಚಂದ್ರು ನಿರ್ದೇಶಿಸಿ- ಉಪೇಂದ್ರ, ಕಿಚ್ಚ ಸುದೀಪ್ ಮತ್ತು ಶಿವರಾಜಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿರುವ ಕಬ್ದ ಸಿನಿಮಾ ಮಾರ್ಚ್ 17 ರಂದು ಥಿಯೇಟರ್ ಗಳಲ್ಲಿ ರಿಲೀಸ್ ಆಗಿತ್ತು.
ಸಿನಿಮಾ ಇನ್ನೂ ಹಲವಾರು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ನಡುವೆಯೂ ಓಟಿಟಿಯಲ್ಲಿ ಕಬ್ಜ ಲಭ್ಯವಾಗಲಿದೆ. ಮೊನ್ನೆಗೆ ಕಬ್ಜ ರಿಲೀಸ್ ಆಗಿ 25 ದಿನಗಳನ್ನು ಪೂರೈಸಿದೆ. 50ನೇ ದಿನದತ್ತ ಮುನ್ನುಗ್ಗಿದೆ. ಈ ಮಧ್ಯೆಯೂ ಸಿನಿಮಾ ಏಪ್ರಿಲ್ 14 ರಂದು ಅಮೆಜಾನ್ ಪ್ರೈಂ ವಿಡಿಯೋನಲ್ಲಿ ಲಭ್ಯವಾಗಲಿದೆ.
ಏಪ್ರಿಲ್ 14 ರಂದು ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಕನ್ನಡದ ಜೊತೆಗೆ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಪ್ರದರ್ಶನವಾಗಲಿದೆ. ಸ್ವಾತಂತ್ರ್ಯ ಪೂರ್ವದ ಅವಧಿಯಲ್ಲಿ, ಅದರೆ 1942 ರಲ್ಲಿ, ಕಬ್ಜ ಸರಳ ವ್ಯಕ್ತಿಯ ಕಥೆಯನ್ನು ವಿವರಿಸುತ್ತದೆ.
ಪರಿಸ್ಥಿತಿಗಳ ಕಾರಣದಿಂದಾಗಿ ದೇಶದ ಅತ್ಯಂತ ಭಯಾನಕ ದರೋಡೆಕೋರರಾಗಿ ಬೆಳೆಯುತ್ತಾನೆ. ಹತ್ಯೆಯಾದ ಸ್ವಾತಂತ್ರ್ಯ ಹೋರಾಟಗಾರನ ಕಿರಿಯ ಮಗ ಅರ್ಕೇಶ್ವರ (ಉಪೇಂದ್ರ) ತನ್ನ ಅಣ್ಣನನ್ನು ಹಿಂಸೆಯಿಂದ ಕಳೆದುಕೊಳ್ಳುತ್ತಾನೆ.
ಕುಟುಂಬದಲ್ಲಿ ಉಂಟಾದ ನಷ್ಟದಿಂದಾಗಿ ಆತ ಭೂಗತ ಜಗತ್ತಿನ ನಿರ್ವಿವಾದ ರಾಜನಾಗುತ್ತಾನೆ. ಚಿತ್ರದಲ್ಲಿ ಶ್ರಿಯಾ ಶರಣ್, ಕಾಮರಾಜನ್, ಅನೂಪ್ ರೇವಣ್ಣ, ಕಬೀರ್ ದುಹಾನ್ ಸಿಂಗ್, ಡ್ಯಾನಿಶ್ ಅಖ್ತರ್ ಸೈಫಿ, ಪ್ರದೀಪ್ ರಾವತ್, ಜಯಪ್ರಕಾಶ್ ಮತ್ತು ಕೋಟಾ ಶ್ರೀನಿವಾಸ್ ಮುಂತಾದವರು ನಟಿಸಿದ್ದಾರೆ.
ಕಬ್ಜ ಸಿನಿಮಾಗೆ, ರವಿ ಬಸ್ರೂರ್ ಅವರ ಸಂಗೀತ ಮತ್ತು ಎಜೆ ಶೆಟ್ಟಿ ಮತ್ತು ಮಹೇಶ್ ರೆಡ್ಡಿ ಅವರ ಛಾಯಾಗ್ರಹಣವ ಮತ್ತು ಸಂಕಲನವಿದೆ. ಚಿತ್ರದ ಸಾಹಸಗಳನ್ನು ರವಿವರ್ಮ, ವಿಕ್ರಮ್ ಮೋರ್ ಮತ್ತು ವಿಜಯ್ ನೃತ್ಯ ಸಂಯೋಜನೆ ಮಾಡಿದ್ದಾರೆ.