'ಮಾರ್ಗರೇಟ್ ಲವರ್ ಆಫ್ ರಾಮಾಚಾರಿ'ಯಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ ಅಭಿಲಾಷ್, ಸೋನಲ್ ಮೊಂತೆರೋ
ಪುಟ್ಟಣ್ಣ ಕಣಗಾಲ್ ಅವರ ಸಾರ್ವಕಾಲಿಕ ಶ್ರೇಷ್ಠ ನಾಗರಹಾವು ಚಿತ್ರದಲ್ಲಿನ ಪಾತ್ರದ ಹೆಸರನ್ನು ಇಟ್ಟುಕೊಂಡು ಈಗಾಗಲೇ ರಾಮಾಚಾರಿ ಮತ್ತು ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಎಂಬ ಶೀರ್ಷಿಕೆಯ ಚಿತ್ರಗಳು ಬಂದಿದ್ದರೂ, ಇದೇ ಚಿತ್ರದಿಂದ ಸ್ಫೂರ್ತಿ ಪಡೆದ ಇತ್ತೀಚಿನ ಚಿತ್ರ ಮಾರ್ಗರೇಟ್ ಲವರ್ ಆಫ್ ರಾಮಾಚಾರಿ.
Published: 19th April 2023 11:38 AM | Last Updated: 19th April 2023 01:48 PM | A+A A-

ಅಭಿಲಾಷ್ - ಸೋನಲ್ ಮೊಂತೆರೋ
ಪುಟ್ಟಣ್ಣ ಕಣಗಾಲ್ ಅವರ ಸಾರ್ವಕಾಲಿಕ ಶ್ರೇಷ್ಠ ನಾಗರಹಾವು ಚಿತ್ರದ ಪ್ರಭಾವ ಇನ್ನೂ ಕಡಿಮೆಯಾಗಿಯೇ ಇಲ್ಲ ಎಂಬುದು ಸ್ಪಷ್ಟವಾಗಿದೆ. ಚಿತ್ರದಲ್ಲಿನ ಪಾತ್ರದ ಹೆಸರನ್ನು ಇಟ್ಟುಕೊಂಡು ಈಗಾಗಲೇ ರಾಮಾಚಾರಿ ಮತ್ತು ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಎಂಬ ಶೀರ್ಷಿಕೆಯ ಚಿತ್ರಗಳು ಬಂದಿದ್ದರೂ, ಇದೇ ಚಿತ್ರದಿಂದ ಸ್ಫೂರ್ತಿ ಪಡೆದ ಇತ್ತೀಚಿನ ಚಿತ್ರ ಮಾರ್ಗರೇಟ್ ಲವರ್ ಆಫ್ ರಾಮಾಚಾರಿ.
ಗಿರಿಧರ್ ಕುಂಬಾರ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಅಭಿಲಾಷ್ ಅವರು ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಪ್ರವೇಶಿಸುತ್ತಿದ್ದಾರೆ. ರಂಗಭೂಮಿ ಕಲಾವಿದನಾಗಿ ವೃತ್ತಿ ಜೀವನ ಆರಂಭಿಸಿದ ನಟ, ಕೆಜಿಎಫ್, ಲವ್ ಮಾಕ್‌ಟೇಲ್, ಬಡವ ರಾಸ್ಕಲ್ ಮತ್ತು ಗುರುದೇವ್ ಹೊಯ್ಸಳ ಮುಂತಾದ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ನಟಿ ಸೋನಲ್ ಮೊಂತೆರೋ ಮೀರಾ ರಾಘವ್ ರಾಮ್ ಅಲಿಯಾಸ್ ಮ್ಯಾಗಿ ಪಾತ್ರದಲ್ಲಿ ನಟಿಸುತ್ತಿದ್ದು, ಅಭಿಲಾಷ್ ರಾಮಾಚಾರಿ ಅಲಿಯಾಸ್ ರಾಮು ಪಾತ್ರದಲ್ಲಿ ನಟಿಸುತ್ತಿದ್ದಾರೆ ಮತ್ತು ರಾಮಾಚಾರಿಯ ಎದುರಾಳಿಯಾಗಿ ಜಯಂತ ಅಲಿಯಾಸ್ ಜಲೀಲಾ ಕಾಣಿಸಿಕೊಳ್ಳಲಿದ್ದಾರೆ. ಮಾರ್ಗರೇಟ್ ಲವರ್ ಆಫ್ ರಾಮಾಚಾರಿ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ರವಿಶಂಕರ್ ಮತ್ತು ಅವಿನಾಶ್ ನಟಿಸಿದ್ದಾರೆ.
ಇದನ್ನೂ ಓದಿ: ರೋಲೆಕ್ಸ್‌ನಲ್ಲಿ ನಟ ಕೋಮಲ್ ಜೊತೆಗೆ ನಟಿಸಲಿದ್ದಾರೆ ಸೋನಲ್ ಮೊಂತೆರೋ
ವನಿತಾ ಎಚ್‌ಎನ್ ಅವರ ನಿಹಾಂತ್ ಪ್ರೊಡಕ್ಷನ್ಸ್‌ನ ಬೆಂಬಲದೊಂದಿಗೆ, ತೆಲುಗು ಸಿನಿಮಾಟೋಗ್ರಾಫರ್ ಕೊಳಂಚಿ ರಾಕೇಶ್ ಅವರು ಈ ಯೋಜನೆಯೊಂದಿಗೆ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡಲಿದ್ದಾರೆ.
'ನಾವು ನಾಗರಹಾವು ಚಿತ್ರದಿಂದ ಉಲ್ಲೇಖವನ್ನು ತೆಗೆದುಕೊಂಡಿದ್ದೇವೆ. ಆದರೆ, ಇದು ವಿಭಿನ್ನ ಕಥೆಯಾಗಿದೆ ಮತ್ತು ಚಿತ್ರದುರ್ಗದಲ್ಲಿ ಚಿತ್ರೀಕರಣಗೊಳ್ಳಲಿದೆ. ಇದು ಮಾರ್ಗರೇಟ್ ಲವರ್ ಆಫ್ ರಾಮಾಚಾರಿ ಚಿತ್ರಕ್ಕೆ ಶೀರ್ಷಿಕೆ ನೀಡಲು ಒಂದು ಕಾರಣವಾಗಿದೆ' ಎಂದು ಅಭಿಲಾಷ್ ಹೇಳುತ್ತಾರೆ.
ಏಪ್ರಿಲ್ 24 ರಂದು ಚಿತ್ರದ ಮುಹೂರ್ತ ನೆರವೇರಲಿದೆ ಮತ್ತು ಚಿತ್ರವು ಮೇ 11 ರಂದು ಅಧಿಕೃತವಾಗಿ ಸೆಟ್ಟೇರಲಿದೆ. 'ಸ್ಕ್ರಿಪ್ಟ್ ಕೆಲಸಕ್ಕೆ 3 ವರ್ಷಗಳನ್ನು ತೆಗೆದುಕೊಂಡಿದೆ. ಏಕೆಂದರೆ ಇದೊಂದು ಗಂಭೀರವಾದ ವಿಷಯವಾಗಿದ್ದು, ಒಪ್ಪಿಗೆಯ ಪ್ರಾಮುಖ್ಯತೆಯ ಸುತ್ತ ಸುತ್ತುತ್ತದೆ' ಎನ್ನುತ್ತಾರೆ.