ರಾಜ್ ಶೆಟ್ಟಿ ನಟನೆಯ 'ಟೋಬಿ' ಚಿತ್ರದ ಟ್ರೇಲರ್ ರಿಲೀಸ್; ಭರ್ಜರಿ ರೆಸ್ಪಾನ್ಸ್!
ಕರಾವಳಿ ಮೂಲದ ರಾಜ್ ಬಿ ಶೆಟ್ಟಿ ತಮ್ಮ ಅದ್ಭುತ ನಟನೆ, ವಿಶಿಷ್ಟ ಚಿತ್ರಗಳ ಮೂಲಕ ಕನ್ನಡ ಚಿತ್ರಪ್ರೇಮಿಗಳ ಮನೆಮಾತಾಗಿದ್ದಾರೆ. ಅವರು ಇತ್ತೀಚೆಗೆ ಒಂದು ಮಾತು ಹೇಳಿದ್ದರು.
Published: 05th August 2023 01:42 PM | Last Updated: 05th August 2023 01:56 PM | A+A A-

ಟೋಬಿ ಚಿತ್ರದ ಪೋಸ್ಟರ್
ಕರಾವಳಿ ಮೂಲದ ರಾಜ್ ಬಿ ಶೆಟ್ಟಿ ತಮ್ಮ ಅದ್ಭುತ ನಟನೆ, ವಿಶಿಷ್ಟ ಚಿತ್ರಗಳ ಮೂಲಕ ಕನ್ನಡ ಚಿತ್ರಪ್ರೇಮಿಗಳ ಮನೆಮಾತಾಗಿದ್ದಾರೆ. ಅವರು ಇತ್ತೀಚೆಗೆ ಒಂದು ಮಾತು ಹೇಳಿದ್ದರು. ನೀವು ಕಲಾವಿದನನ್ನು ನೋಯಿಸಿದಾಗ, ಕೋಪದ ಕವಿತೆಯೊಂದು ಹೊರಹೊಮ್ಮುತ್ತದೆ ಎಂದು, ಅಂದರೆ ಭಾವನಾತ್ಮಕವಾಗಿ ಕಲಾವಿದ ಹೇಗೆ ಒಂದು ಕಟುವಾದ ಪಾತ್ರವನ್ನು ಸೃಷ್ಟಿಸುತ್ತಾನೆ ಎಂಬುದು ಅವರ ಮಾತಿನ ಅರ್ಥವಾಗಿತ್ತು.
ಕಲಾವಿದನ ಆಕ್ರೋಶ, ಸಿಟ್ಟಿನ ಸಿನಿಮೀಯ ಸೃಷ್ಟಿ ಟೋಬಿಯಾಗಿ ರೂಪಾಂತರಗೊಂಡಿದ್ದು, ಇದೇ ತಿಂಗಳು 25ರಂದು ಸಿನಿಪ್ರೇಕ್ಷಕರ ಮುಂದೆ ಬರುತ್ತಿದೆ. ಇದರ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಿನ್ನೆ ಬೆಂಗಳೂರಿನಲ್ಲಿ ನಡೆಯಿತು.
3-ನಿಮಿಷಗಳ ವೈಶಿಷ್ಟ್ಯವು ವಿಮೋಚನೆಗೊಂಡ ಪಾತ್ರದ ಸುತ್ತ ಕೇಂದ್ರೀಕೃತವಾಗಿರುವ ಕಥೆಯ ಒಂದು ನೋಟವನ್ನು ಟ್ರೇಲರ್ ನೀಡುತ್ತದೆ, ಟೋಬಿ ಎಂದರೆ ಸಾಮಾನ್ಯವಾಗಿ ಕುರಿ ಎಂದು ಕರೆಯಲಾಗುತ್ತದೆ. ಕಠೋರವಾದ ಅದೃಷ್ಟದಿಂದ ಪಾರಾಗಿ, 'ಕುರಿ' ತನ್ನ ಪ್ರಶಾಂತ ಹಳ್ಳಿಗೆ ಶಕ್ತಿಯುತ ಪರಿವರ್ತಕ ಪ್ರಯಾಣವನ್ನು ಪ್ರಾರಂಭಿಸುವುದು ಒಂದು ಎಳೆ ಕಥೆಯಾಗಿದೆ.
ಈ ಚಿತ್ರವನ್ನು ರಾಜ್ ಅವರ ಗೆಳೆಯ ಬಾಸಿಲ್ ಎಎಲ್ ಚಳಕ್ಕಲ್ ನಿರ್ದೇಶಿಸಿದ್ದಾರೆ. ಶೀರ್ಷಿಕೆ ಪಾತ್ರವನ್ನು ನಿರ್ವಹಿಸುವುದರ ಜೊತೆಗೆ, ರಾಜ್ ಶೆಟ್ಟಿ ಕಥೆಯನ್ನು ಬರೆದಿದ್ದಾರೆ. ಚಿತ್ರದಲ್ಲಿ ಅವರ ಪಾತ್ರವು ಮಾರಿಯ ಆತ್ಮವನ್ನು ಒಳಗೊಂಡಿರುತ್ತದೆ, ಇನ್ನು ಚೈತ್ರ ಆಚಾರ್, ಸಂಯುಕ್ತ ಹೊರನಾಡು, ದೀಪಕ್ ಶೆಟ್ಟಿ ಮತ್ತು ಗೋಪಾಲಕೃಷ್ಣ ದೇಶಪಾಂಡೆ ಮೊದಲಾದವರು ನಟಿಸಿದ್ದಾರೆ. ಟೋಬಿ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಆಳವನ್ನು ಹೊಂದಿದೆ, ಟ್ರೇಲರ್ ನಲ್ಲಿ ಒಂದು ನೋಟ ಕಾಣಬಹುದು.
ಇದನ್ನೂ ಓದಿ: ಟೋಬಿ ಫಸ್ಟ್‌ಲುಕ್ ಪೋಸ್ಟರ್‌ಗೆ ಭರ್ಜರಿ ಪ್ರತಿಕ್ರಿಯೆ; ಸಂತಸದಲ್ಲಿ ಮುಳುಗಿರುವ ರಾಜ್ ಬಿ ಶೆಟ್ಟಿ ಮಾತು...
ಅಗಸ್ತ್ಯ ಫಿಲ್ಮ್ಸ್ ಸಹಯೋಗದಲ್ಲಿ ಲೈಟರ್ ಬುದ್ಧ ಫಿಲ್ಮ್ಸ್ ನಿರ್ಮಿಸಿದ ಟೋಬಿ, ಆಗಸ್ಟ್ 25 ರಂದು ಕರ್ನಾಟಕದಾದ್ಯಂತ ತೆರೆ ಕಾಣಲಿದ್ದು ಕೆವಿಎನ್ ಪ್ರೊಡಕ್ಷನ್ಸ್ ವಿತರಿಸಲಿದೆ. ಈ ಚಿತ್ರಕ್ಕೆ ರಾಜ್ ಬಿ ಶೆಟ್ಟಿಯವರು ಸಂಗೀತ ನಿರ್ದೇಶಕ ಮಿಧುನ್ ಮುಕುಂದನ್ ಜೊತೆ ಸಹಕರಿಸಿದ್ದು, ಛಾಯಾಗ್ರಾಹಕ ಪ್ರವೀಣ್ ಶ್ರೀಯಾನ್ ಅವರ ಕ್ಯಾಮರಾ ಕೈಚಳಕವಿದೆ.
Best wishes to the entire team of #TOBY
— Rachita Ram (@RachitaRamDQ) August 4, 2023
.
.https://t.co/ilNx9BZKoo
.
.
Kudos and cheers to you @RajbShettyOMK @Chaithra_Achar_ @samyuktahornad @KvnProductions pic.twitter.com/0nY2qihmQW