ಟೋಬಿ ಫಸ್ಟ್‌ಲುಕ್ ಪೋಸ್ಟರ್‌ಗೆ ಭರ್ಜರಿ ಪ್ರತಿಕ್ರಿಯೆ; ಸಂತಸದಲ್ಲಿ ಮುಳುಗಿರುವ ರಾಜ್ ಬಿ ಶೆಟ್ಟಿ ಮಾತು...

ಚಿತ್ರದ ಪೋಸ್ಟರ್‌ಗೆ ಸಿಕ್ಕ ಪ್ರತಿಕ್ರಿಯೆಗಳ ಬಗ್ಗೆ ಸಂತಸ ವ್ಯಕ್ತಪಡಿಸುವ ರಾಜ್ ಬಿ ಶೆಟ್ಟಿ ಅವರು, ಕೆಟ್ಟ ಸಿನಿಮಾವನ್ನು ಅತಿಯಾಗಿ ಪ್ರಚಾರ ಮಾಡಬಾರದು ಅಥವಾ ಮಾರಾಟ ಮಾಡಬಾರದು. 'ಒಂದು ತಂಡವಾಗಿ, ನಾವು ತುಂಬಾ ಆತ್ಮವಿಶ್ವಾಸ ಹೊಂದಿದ್ದೇವೆ ಮತ್ತು ನಮ್ಮ ಪ್ರತಿಭೆಯನ್ನು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬಳಸಿಕೊಂಡಿದ್ದೇವೆ' ಎನ್ನುತ್ತಾರೆ.
ಅಭಿಮಾನಿಗಳೊಂದಿಗೆ ನಟ ರಾಜ್‌ ಬಿ ಶೆಟ್ಟಿ
ಅಭಿಮಾನಿಗಳೊಂದಿಗೆ ನಟ ರಾಜ್‌ ಬಿ ಶೆಟ್ಟಿ

ರಾಜ್ ಬಿ ಶೆಟ್ಟಿ ಅವರ ಮುಂಬರುವ ಚಿತ್ರ ಟೋಬಿ ಸದ್ಯ ಚರ್ಚೆಯ ವಿಷಯವಾಗಿದೆ. ಕೆಲವು ದಿನಗಳ ಹಿಂದಷ್ಟೇ ಬಿಡುಗಡೆಯಾದ ಪೋಸ್ಟರ್‌ನಲ್ಲಿ ಸಿನಿಮಾದ ಥೀಮ್ ಮ್ಯೂಸಿಕ್‌ ಜೊತೆಗೆ ಮೂಗುತಿಯನ್ನು ಹೊಂದಿರುವ ಮೇಕೆಯನ್ನು ಒಳಗೊಂಡಿತ್ತು. ಮಾರಿ.. ಮಾರಿ.. ಮಾರಿಗೆ ದಾರಿ! ಎಂದಿದ್ದ ಪೋಸ್ಟರ್ ಪ್ರೇಕ್ಷಕರ ಗಮನ ಸೆಳೆಯಿತು. ಈಗ, ಚಿತ್ರತಂಡ ಗುರುವಾರ ರಾಜ್ ಬಿ ಶೆಟ್ಟಿ ಅವರ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಳಿಸಿದೆ. 

ಒಂದು ಮೊಟ್ಟೆಯ ಕಥೆ ಎಂಬ ಕಾಮಿಡಿ ಎಂಟರ್‌ಟೈನರ್ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ರಾಜ್, ಗರುಡ ಗಮನ ವೃಷಭ ವಾಹನದ ಮೂಲಕ ಗಮನ ಸೆಳೆದರು. ಇದೀಗ ಸೇಡಿನ ಸಿನಿಮಾದಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಟೋಬಿ ಸಿನಿಮಾ ಅವರು ಕಥೆ ಬರೆದ ಹಿಂದಿನ ಚಿತ್ರಗಳಿಗಿಂತ ಭಿನ್ನವಾಗಿದ್ದು, ಕಾರವಾರ, ಕುಮಟಾ ಮತ್ತು ಅಂಕೋಲಾದಲ್ಲಿ ನಡೆದ ನೈಜ ಕಥೆಯಿಂದ ಸ್ಫೂರ್ತಿ ಪಡೆದ ಟಿಕೆ ದಯಾನಂದರ ಬರಹಗಳನ್ನು ಆಧರಿಸಿದೆ.

ರಾಜ್ ಅವರು ತಮ್ಮ 12 ವರ್ಷಗಳ ಸಹವರ್ತಿ ಬಸಿಲ್ ಎಎಲ್ ಚಳಕ್ಕಲ್ ಅವರೊಂದಿಗೆ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಬಸಿಲ್ ಇದೇ ಮೊದಲ ಬಾರಿಗೆ ನಿರ್ದೇಶನಕ್ಕಿಳಿದಿದ್ದಾರೆ. ಚಿತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ಚೈತ್ರ ಜೆ ಆಚಾರ್ ಮತ್ತು ಸಂಯುಕ್ತಾ ಹೊರ್ನಾಡ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ಆಗಸ್ಟ್ 25ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 

<strong>ಟೋಬಿ ಫಸ್ಟ್ ಲುಕ್ ಪೋಸ್ಟರ್</strong>
ಟೋಬಿ ಫಸ್ಟ್ ಲುಕ್ ಪೋಸ್ಟರ್

ರಾಜ್ ಅವರ ಪ್ರಕಾರ, ಟೋಬಿ ಸಿನಿಮಾ ಗ್ರ್ಯಾಂಡ್ ಮಾಸ್ ಎಂಟರ್‌ಟೈನರ್ ಆಗಿದ್ದು, ಮಿಥುನ್ ಮುಕುಂದನ್ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದರೆ, ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ ಮತ್ತು ಸಂಕಲನವನ್ನು ನಿರ್ವಹಿಸುತ್ತಿದ್ದಾರೆ. ಟೋಬಿ ಸಿನಿಮಾ ಬಗ್ಗೆ ವಿಶ್ವಾಸ ಹೊಂದಿರುವ ರಾಜ್, ಆರಂಭದಲ್ಲಿ ಕನ್ನಡದಲ್ಲಿ ಚಿತ್ರ ಬಿಡುಗಡೆಗೆ ಯೋಜಿಸಿದ್ದಾರೆ ಮತ್ತು ನಂತರ ಅದನ್ನು ಇತರ ಭಾಷೆಗಳಲ್ಲಿ ಬಿಡುಗಡೆ ಮಾಡಲು ಯೋಜಿಸಿದ್ದಾರೆ.

ಸಿನಿಮಾ ಎಕ್ಸ್‌ಪ್ರೆಸ್ ಜೊತೆಗಿನ ಅವರ ಸಂವಾದದಲ್ಲಿ, ಚಿತ್ರದ ಪೋಸ್ಟರ್‌ಗೆ ಸಿಕ್ಕ ಪ್ರತಿಕ್ರಿಯೆಗಳ ಬಗ್ಗೆ ಸಂತಸ ವ್ಯಕ್ತಪಡಿಸುವ ಅವರು, ಕೆಟ್ಟ ಸಿನಿಮಾವನ್ನು ಅತಿಯಾಗಿ ಪ್ರಚಾರ ಮಾಡಬಾರದು ಅಥವಾ ಮಾರಾಟ ಮಾಡಬಾರದು. 'ಒಂದು ತಂಡವಾಗಿ, ನಾವು ತುಂಬಾ ಆತ್ಮವಿಶ್ವಾಸ ಹೊಂದಿದ್ದೇವೆ ಮತ್ತು ನಮ್ಮ ಪ್ರತಿಭೆಯನ್ನು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬಳಸಿಕೊಂಡಿದ್ದೇವೆ' ಎನ್ನುತ್ತಾರೆ.

ಕುತೂಹಲಕಾರಿಯಾಗಿ, ರಾಜ್ ಈ ಚಿತ್ರಕ್ಕಾಗಿ ಮೂಗು ಚುಚ್ಚಿದ್ದಾರೆ. 'ಕೆಲವೊಮ್ಮೆ, ವಿಷಯಗಳು ನಿಮ್ಮ ನಿಯಂತ್ರಣದಲ್ಲಿರುವಾಗ, ನೀವು ಅದನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ಆ ಪಾತ್ರವನ್ನು ನಿಜವಾಗಿಯೂ ಅನುಭವಿಸಬೇಕು. ದೊಡ್ಡ ಮೂಗುತಿಯನ್ನು ಧರಿಸಲು, ನಿಮ್ಮ ಮನಸ್ಸು ತೊಂದರೆಗೊಳಗಾಗಬೇಕು ಅಥವಾ ಸವಾಲನ್ನು ಎದುರಿಸಬೇಕು. ಆ ಜಾಗವನ್ನು ತಲುಪಲು, ಕೃತಕ ಮೂಗುತಿಯನ್ನು ಧರಿಸಲು ನನಗೆ ಸಾಧ್ಯವಾಗಲಿಲ್ಲ ಮತ್ತು ನಾನು ನಿಜವಾಗಿಯೂ ಮೂಗುತಿ ಧರಿಸಿದಾಗ ಅದು ಚೆನ್ನಾಗಿ ಕೆಲಸ ಮಾಡಿದೆ' ಎಂದು ಅವರು ಹೇಳುತ್ತಾರೆ.

ರಾಜ್ ಪ್ರಕಾರ, ಪ್ರತಿಯೊಂದು ಅನುಭವವು ಕಲಾವಿದನೊಳಗೆ ಧನಾತ್ಮಕವಾಗಿ ಅಥವಾ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ. 'ಕೆಲವು ಹಂತದಲ್ಲಿ, ನನ್ನಲ್ಲಿರುವ ಕಲಾವಿದ ಕೋಪದಿಂದ ಉತ್ತೇಜಿತನಾಗಿದ್ದನು ಮತ್ತು ಅದು ಟೋಬಿಯನ್ನು ಮಾಡಲು ನೆರವಾಯಿತು. ನಾನು ಇಷ್ಟು ದೀರ್ಘಕಾಲ ಇದನ್ನು ಹಾಗೆಯೇ ಇಟ್ಟುಕೊಂಡು ನನ್ನೊಂದಿಗೆ ತಂದಿಲ್ಲ. ನಾನು ತುಂಬಾ ಕಂಪೋಸ್ಡ್ ಆಗಿದ್ದೆ. ಆದರೆ, ಆ ಹಿಡಿತವೇ ಒಳ್ಳೆಯ ವಿಷಯದೊಂದಿಗೆ ಬಂದಿದೆ. ಒಂದು ವೇಳೆ, ನೀವು ಅದನ್ನು ಡಿಸ್ಟರ್ಬ್ ಮಾಡಿದರೆ, ಪರಿಣಾಮಗಳು ಇರುತ್ತವೆ ಮತ್ತು ಟೋಬಿ ಕೂಡ ಹಾಗೆಯೇ ವಿಕಸನಗೊಂಡಿತು' ಎಂದು ವಿವರಿಸುತ್ತಾರೆ. 

ಇನ್ನೆರಡು ತಿಂಗಳುಗಳ ಕಾಲ ತಮ್ಮ ಚಿತ್ರದ ಪ್ರಚಾರಕ್ಕಾಗಿ ಹೆಚ್ಚುವರಿ ಮೈಲಿ ಹೋಗಲು ಸಿದ್ಧರಾಗಿರುವ ರಾಜ್, ನನ್ನ ಚಿತ್ರಗಳನ್ನು ನೋಡಲು ಜನರು ಎರಡು ವರ್ಷಗಳ ಕಾಲ ಕಾಯುವಷ್ಟು ದೊಡ್ಡ ಸ್ಟಾರ್ ನಾನೆಂದು ನಾನು ನಂಬುವುದಿಲ್ಲ. 'ಚಿತ್ರದ ಕಂಟೆಂಟ್ ವೀಕ್ಷಕರ ಆಸಕ್ತಿಯನ್ನು ಸೆರೆಹಿಡಿಯುವ ಸಾಮರ್ಥ್ಯವನ್ನು ಹೊಂದಿರುತ್ತದೆ. ನಾನು ನಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ಪ್ರತಿಬಿಂಬಿಸುವ ಚಲನಚಿತ್ರಗಳನ್ನು ಮಾಡುತ್ತೇನೆ ಮತ್ತು ಉತ್ಪ್ರೇಕ್ಷೆ ಮಾಡುವುದು ಅಥವಾ ಆಡಂಬರದ ಕ್ಷಣಗಳನ್ನು ಹೇಗೆ ರಚಿಸುವುದು ಎಂದು ನನಗೆ ತಿಳಿದಿಲ್ಲ' ಎಂದು ಅವರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com