ಆ ಕಾಲದ ದಿನ ಪತ್ರಿಕೆಗಳ ಕಟಿಂಗ್‌ ಕಾಟೇರ ಚಿತ್ರದ ಸಂಭಾಷಣೆ ಬರೆಯಲು ಸಹಾಯ ಮಾಡಿತು: ಮಾಸ್ತಿ

ಕಡ್ಡಿಪುಡಿ, ಟಗರು, ಸಲಗ ಚಿತ್ರಗಳ ಸಂಭಾಷಣೆ ಬರೆದ ಮಾಸ್ತಿ ಅವರು ಈಗ ಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಕಾಟೇರದಲ್ಲಿ ಜೊತೆಯಾಗಿದ್ದಾರೆ. ಕಾಟೇರ ಚಿತ್ರದ ನಿರ್ದೇಶಕ ತರುಣ್ ಅವರು ಜಡೇಶಾ ಅವರ ಗುರು ಶಿಷ್ಯರು ಚಿತ್ರದ ಮೂಲಕ...
ಮಾಸ್ತಿ
ಮಾಸ್ತಿ
Updated on

ಕಡ್ಡಿಪುಡಿ, ಟಗರು, ಸಲಗ ಚಿತ್ರಗಳ ಸಂಭಾಷಣೆ ಬರೆದ ಮಾಸ್ತಿ ಅವರು ಈಗ ಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಕಾಟೇರದಲ್ಲಿ ಜೊತೆಯಾಗಿದ್ದಾರೆ. ಕಾಟೇರ ಚಿತ್ರದ ನಿರ್ದೇಶಕ ತರುಣ್ ಅವರು ಜಡೇಶಾ ಅವರ ಗುರು ಶಿಷ್ಯರು ಚಿತ್ರದ ಮೂಲಕ ಪರಿಚಯವಾದರು. ಆ ಚಿತ್ರಕ್ಕೂ ನಾನೇ ಸಂಭಾಷಣೆ ಬರೆದಿದ್ದೆ ಎಂದು ಮಾಸ್ತಿ ಹೇಳಿಕೊಂಡಿದ್ದಾರೆ.

1970 ರ ದಶಕದ ಕಾಟೇರಾಗೆ ಸಂಭಾಷಣೆ ಬರೆಯುವುದು ಸವಾಲಿನ ಕೆಲಸವಾಗಿತ್ತು. "ಹಿಂದಿನದನ್ನು ತಿಳಿದುಕೊಳ್ಳಲು ನಾನು ಆ ಕಾಲದ ಲೇಖನಗಳನ್ನು ವ್ಯಾಪಕವಾಗಿ ಸಂಶೋಧಿಸಿದ್ದೇನೆ. ಗ್ರಾಮೀಣ ಹಿನ್ನೆಲೆಗೆ ಸರಿಹೊಂದುವಂತೆ ಪ್ರತಿ ಸಾಲನ್ನು ಬರೆಯಲು ತಿಂಗಳುಗಟ್ಟಲೆ ಸಮಯ ತೆಗೆದುಕೊಂಡಿದ್ದೇನೆ" ಎಂದು ಮಾಸ್ತಿ ತಿಳಿಸಿದ್ದಾರೆ.

ತರುಣ್ ಅತ್ಯುತ್ತಮ ನಿರ್ದೇಶಕ ಎಂದು ಶ್ಲಾಘಿಸಿದ ಮಾಸ್ತಿ, "1970 ರ ದಶಕದಿಂದ ಇಲ್ಲಿಯವರೆಗೆ, ಗಮನಾರ್ಹ ಬದಲಾವಣೆಯಾಗಿದೆ. ಆಗ, ತಂತ್ರಜ್ಞಾನ ಪ್ರಚಲಿತವಾಗಿರಲಿಲ್ಲ ಮತ್ತು ಎಲ್ಲವೂ ಲಿಖಿತ ದಾಖಲೆಗಳ ಮೇಲೆ ಅವಲಂಬಿತವಾಗಿದೆ. ಪ್ರೇಮ ಪತ್ರಗಳನ್ನು ಸಹ ಕೈಯಿಂದ ಬರೆಯಲಾಗಿತ್ತು. ಹಾಗಾಗಿ, ನನ್ನ ಡೈಲಾಗ್‌ಗಳನ್ನು ಹಳ್ಳಿಯ ಸನ್ನಿವೇಶದಲ್ಲಿ ಪ್ರತಿಧ್ವನಿಸುವಂತೆ ಮಾಡಿದೆ. ಸಾಧಾರಣವಾಗಿ ಒಂದೂವರೆ ತಿಂಗಳೊಳಗೆ ಒಂದು ಸಿನಿಮಾಗೆ ಸಂಭಾಷಣೆ ಬರೆದು ಮುಗಿಸುತ್ತೇನೆ. ಆದರೆ ಕಾಟೇರಕ್ಕೆ ಐದು ತಿಂಗಳು ಹಿಡಿಯಿತು. ಪ್ರತಿಯೊಂದು ಸಂಭಾಷಣೆಯು ಕಥೆ ಮತ್ತು ಯುಗದೊಂದಿಗೆ ಸಿಂಕ್ರೊನೈಸ್ ಮಾಡಬೇಕಾಗಿತ್ತು ಮತ್ತು ಆ ಲೈನ್ ಗಳು ದರ್ಶನ್ ಅವರಂತಹ ನಟರಿಗೆ ಹೊಂದಿಕೆಯಾಗಬೇಕಾಗಿತ್ತು ಎಂದಿದ್ದಾರೆ.

ಕುತೂಹಲಕಾರಿ ವಿಚಾರ ಎಂದರೆ ಕಾಟೇರ ಚಿತ್ರದಲ್ಲಿ ಎಲಿವೇಶನ್ ಡೈಲಾಗ್‌ಗಳಿಗೆ ಹೆಚ್ಚು ಅವಕಾಶವಿಲ್ಲ ಎಂದ ಮಾಸ್ತಿ, "ನಾವು ಪಾತ್ರಕ್ಕೆ ತಕ್ಕಂತೆ ಲೈನ್ ಗಳನ್ನು ಬರೆಯಬೇಕಾಗಿತ್ತು. ಈ ಸಂದರ್ಭದಲ್ಲಿ ದರ್ಶನ್ ಅವರ ರೈತ ನಾಯಕನ ಪಾತ್ರಕ್ಕೆ ಸರಿ ಹೊಂದುವಂತಹ ಸಂಭಾಷಣೆ ಇದೆ”ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com