ಶ್ರೀನಗರ ಕಿಟ್ಟಿ ಅಭಿನಯದ 'ಗೌಳಿ' ರಿಲೀಸ್ ಡೆಟ್ ಫಿಕ್ಸ್
ಸೆನ್ಸಾರ್ ಮಂಡಳಿ ಮೂಲಕ ಯು/ಎ ಪ್ರಮಾಣಪತ್ರ ಪಡೆದಿರುವ ಶ್ರೀನಗರ ಕಿಟ್ಟಿ ಅಭಿನಯದ ಮುಂದಿನ ಸಿನಿಮಾ 'ಗೌಳಿ' ರಿಲೀಸ್ ಡೆಟ್ ಫಿಕ್ಸ್ ಆಗಿದೆ. ಸೂರ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರ ಫೆಬ್ರವರಿ 24 ರಂದು ತೆರೆಗೆ ಅಪ್ಪಳಿಸಲಿದೆ.
Published: 11th February 2023 06:27 PM | Last Updated: 11th February 2023 07:42 PM | A+A A-

ಶ್ರೀನಗರ ಕಿಟ್ಟಿ
ಸೆನ್ಸಾರ್ ಮಂಡಳಿ ಮೂಲಕ ಯು/ಎ ಪ್ರಮಾಣಪತ್ರ ಪಡೆದಿರುವ ಶ್ರೀನಗರ ಕಿಟ್ಟಿ ಅಭಿನಯದ ಮುಂದಿನ ಸಿನಿಮಾ 'ಗೌಳಿ' ರಿಲೀಸ್ ಡೆಟ್ ಫಿಕ್ಸ್ ಆಗಿದೆ. ಸೂರ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರ ಫೆಬ್ರವರಿ 24 ರಂದು ತೆರೆಗೆ ಅಪ್ಪಳಿಸಲಿದೆ.
ಗೌಳಿ (ಹಾಲುಗಾರ ಎಂದರ್ಥ) ನಿರ್ದೇಶಕರು ಚೊಚ್ಚಲ ಚಿತ್ರದಲ್ಲೇ ಆಕ್ಷನ್ ಥ್ರಿಲ್ಲರ್ ಕಥೆಗೆ ಆಕ್ಷನ್-ಕಟ್ ಹೇಳಿದ್ದು, ಕಿಟ್ಟಿಯನ್ನು ವಿಶಿಷ್ಟ ಪಾತ್ರದಲ್ಲಿ ತೋರಿಸಿದ್ದಾರೆ. ಚಿತ್ರದಲ್ಲಿ ಪವನ ಗೌಡ ನಾಯಕಿಯಾಗಿ ನಟಿಸಿದ್ದಾರೆ.
ಸೋಹನ್ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ರಘು ಸಿಂಗಂ ನಿರ್ಮಿಸಿರುವ ಈ ಚಿತ್ರದಲ್ಲಿ ಯಶ್ ಶೆಟ್ಟಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಟಗರು ಖ್ಯಾತಿಯ ಶರತ್ ಲೋಹಿತಾಶ್ವ ಮತ್ತು ಸುಧಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆಯ
ಚಿತ್ರಕ್ಕೆ ಶಶಾಂಕ್ ಶೇಷಗಿರಿ ಸಂಗೀತ ಸಂಯೋಜನೆ ಮಾಡಲಿದ್ದು, ಪ್ರಜ್ವಲ್ ಗೌಡ ಅವರ ಛಾಯಾಗ್ರಹಣ ಇದೆ. ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸಿರುವ ವೀರಂ ಸೇರಿದಂತೆ ಇತರ ಚಿತ್ರಗಳಲ್ಲಿ ಶ್ರೀನಗರ ಕಿಟ್ಟಿ ಅಭಿನಯಿಸುತ್ತಿದ್ದಾರೆ. ಸುನಿ ಅವರ ನಿರ್ದೇಶನದ ಅವತಾರ ಪುರುಷ 2 ಚಿತ್ರದಲ್ಲೂ ಕಿಟ್ಟಿ ನಟಿಸಿದ್ದು, ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ.