ನ್ಯಾಚುರಲ್ ಸ್ಟಾರ್ ನಾನಿ 30ನೇ ಸಿನಿಮಾದಲ್ಲಿ ಡುಯೆಟ್ ಹಾಡಲಿದ್ದಾರೆ `ಸೀತಾರಾಮಂ’ ನಟಿ ಮೃಣಾಲ್ ಠಾಕೂರ್!

ಸೀತಾರಾಮಂ ಮೂಲಕ ಸೂಪರ್ ಸಕ್ಸಸ್ ಕಂಡಿರುವ ನಟಿ ಮೃಣಾಲ್ ಠಾಕೂರ್ ಇದೀಗ  ಟಾಲಿವುಡ್‌ನತ್ತ  ಮುಖ ಮಾಡಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿಗೆ ನಾಯಕಿಯಾಗುವ ಮೂಲಕ ಹೊಸ ವರ್ಷಕ್ಕೆ ಹ್ಯಾಪಿ ನ್ಯೂಸ್ ಕೊಟ್ಟಿದ್ದಾರೆ.
ನಾನಿ ಮತ್ತು ಮೃಣಾಲ್ ಠಾಕೂರ್
ನಾನಿ ಮತ್ತು ಮೃಣಾಲ್ ಠಾಕೂರ್

ಸೀತಾರಾಮಂ ಮೂಲಕ ಸೂಪರ್ ಸಕ್ಸಸ್ ಕಂಡಿರುವ ನಟಿ ಮೃಣಾಲ್ ಠಾಕೂರ್ ಇದೀಗ ಟಾಲಿವುಡ್‌ನತ್ತ  ಮುಖ ಮಾಡಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿಗೆ ನಾಯಕಿಯಾಗುವ ಮೂಲಕ ಹೊಸ ವರ್ಷಕ್ಕೆ ಹ್ಯಾಪಿ ನ್ಯೂಸ್ ಕೊಟ್ಟಿದ್ದಾರೆ.

ಮರಾಠಿ, ಹಿಂದಿ ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಮೃಣಾಲ್ ಠಾಕೂರ್ ತೆಲುಗಿನ ಹೊಸ ಸಿನಿಮಾಗೆ ಸಹಿ ಹಾಕಿದ್ದಾರೆ. ದುಲ್ಕರ್ ಸಲ್ಮಾನ್ ಜೊತೆ ರೊಮ್ಯಾನ್ಸ್ ಮಾಡಿದ ಬಳಿಕ ನಾನಿ  ಸಿನಿಮಾಗೆ ನಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಚಿತ್ರದ ಪೋಸ್ಟರ್ ಅನೌನ್ಸ್ ಮಾಡುವ ತಮ್ಮ ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ಕೊಟ್ಟಿದ್ದಾರೆ.

ನ್ಯಾಚುರಲ್ ಸ್ಟಾರ್ ನಾನಿಗೆ ಮೃಣಾಲ್ ಠಾಕೂರ್ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ವಿಭಿನ್ನ ಪಾತ್ರದ ಮೂಲಕ ನಟಿ ಬರಲಿದ್ದಾರೆ. ತಂದೆ ಮತ್ತು ಮಗಳ ಬಂಧವನ್ನ ಸಾರುವ ಕಥೆ ಇದಾಗಿದೆ. ಸದ್ಯ ಸಿನಿಮಾಗೆ ʼನಾನಿ 30ʼ ಎಂಬ ಟೈಟಲ್ ಇಡಲಾಗಿದೆ.

ನಾನಿ ಮೂವತ್ತನೇ ಸಿನಿಮಾಗೆ ಶೌರ್ಯುವ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ನಿರ್ದೇಶಕನಾಗಿ ಇದು ಇವರ ಮೊದಲ ಸಿನಿಮಾ. ಅಪ್ಪ-ಮಗಳ ಬಾಂಧವ್ಯದ ಸುತ್ತ ಹೆಣೆಯಲಾದ ಕಥಾಹಂದರ ಒಳಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com