'ಆರ್ಕೆಸ್ಟ್ರಾ ಮೈಸೂರು' ವಿಶೇಷ ಸಿನಿಮಾವಾಗಲಿದೆ: ಧನಂಜಯ್

ಧನಂಜಯ್ ಅವರ ಹೊಸ ಸಿನಿಮಾ  'ಆರ್ಕೆಸ್ಟ್ರಾ ಮೈಸೂರು' ಸಾಂಪ್ರದಾಯಿಕ ಬ್ಯಾಂಡ್  (ವಾದ್ಯಗಳು) ಆಧಾರಿತ ಚಿತ್ರವಾಗಿದೆ. ರಾಜ್ಯೋತ್ಸವ ಮತ್ತು ಗಣೇಶೋತ್ಸವ ಸಂದರ್ಭಗಳಲ್ಲಿ ಇವುಗಳ ಜನಪ್ರಿಯತೆ ಹೆಚ್ಚು.
'ಆರ್ಕೆಸ್ಟ್ರಾ ಮೈಸೂರು' ತಂಡದೊಂದಿಗೆ ಧನಂಜಯ್
'ಆರ್ಕೆಸ್ಟ್ರಾ ಮೈಸೂರು' ತಂಡದೊಂದಿಗೆ ಧನಂಜಯ್

ಧನಂಜಯ್ ಅವರ ಹೊಸ ಸಿನಿಮಾ  'ಆರ್ಕೆಸ್ಟ್ರಾ ಮೈಸೂರು' ಸಾಂಪ್ರದಾಯಿಕ ಬ್ಯಾಂಡ್  (ವಾದ್ಯಗಳು) ಆಧಾರಿತ ಚಿತ್ರವಾಗಿದೆ. ರಾಜ್ಯೋತ್ಸವ ಮತ್ತು ಗಣೇಶೋತ್ಸವ ಸಂದರ್ಭಗಳಲ್ಲಿ ಇವುಗಳ ಜನಪ್ರಿಯತೆ ಹೆಚ್ಚು. ಮೈಸೂರಿನಲ್ಲಿ ಹುಟ್ಟಿಕೊಂಡ ಆರ್ಕೆಸ್ಟ್ರಾ ಕಥೆ ಹೇಳುವ ಈ ಚಿತ್ರ ಜನವರಿ 12 ರಂದು ತೆರೆಗೆ ಬರುತ್ತಿದ್ದು, ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಟ್ರೇಲರ್ ಮತ್ತಷ್ಟು ಹೈಪ್ ಕ್ರಿಯೇಟ್ ಮಾಡಿದೆ. 

ಮೈಸೂರಿನಿಂದ ಬಂದಿರುವ ನಟ, ನಿರ್ಮಾಪಕ ಧನಂಜಯ್ ಅವರಿಗೂ ಈ ಸಿನಿಮಾ ವಿಶೇಷವಾಗಿದೆ. ಈ ಚಿತ್ರದ ಎಲ್ಲಾ ಗೀತೆಗಳನ್ನು ಅವರೇ ಬರೆದಿದ್ದಾರೆ. ಸುನೀಲ್  ಮೈಸೂರು ನಿರ್ದೇಶಿಸಿರುವ ಚಿತ್ರದಲ್ಲಿ ಪೂರ್ಣಚಂದ್ರ ನಾಯಕ ನಟನಾಗಿ ಅಭಿನಯಿಸಿದ್ದಾರೆ.

'ಮೊದಲಿಗೆ ಭಾವನಾತ್ಮಕವಾಗಿ ಗೀತೆ ಹೇಗೆ ಬರೆಯುವುದು ಎಂಬುದು ಗೊತ್ತಿರಲಿಲ್ಲ. ಹಿಂದಿನ ಟಗರು ಸಿನಿಮಾದ ಯಶಸ್ಸಿನಿಂದ ಪ್ರೇರಿತನಾಗಿ ಚಿತ್ರದ ಎಲ್ಲಾ ಗೀತೆಗಳನ್ನು ಬರೆದಿರುವುದಾಗಿ  ಧನಂಜಯ್ ತಿಳಿಸಿದರು.  ಎಲ್ಲಾ ರೀತಿಯಲ್ಲೂ ಸಿನಿಮಾ ವಿಶೇಷವಾಗಲಿದೆ. ಸಾಮಾನ್ಯವಾಗಿ ಸಂಕ್ರಾಂತಿ ಸಂದರ್ಭದಲ್ಲಿ ಕನ್ನಡ ಚಿತ್ರಗಳು ಬಿಡುಗಡೆಯಾಗಲ್ಲ. ಆದರೆ, ನಮ್ಮ ಸಿನಿಮಾ ಹಬ್ಬದ ವೇಳೆ ಬಿಡುಗಡೆಯಾಗುತ್ತಿರುವುದಾಗಿ ಹೇಳಿದರು. 

ಅಶ್ವಿನಿ ವಿಜಯ್ ಕುಮಾರ್ ಮತ್ತು ರಘು ದೀಕ್ಷಿತ್ ಡಾಲಿ ಪಿಚ್ಚರ್ ಮತ್ತು ಕೆಆರ್ ಜಿ ಸ್ಟುಡಿಯೋ ಬ್ಯಾನರ್ ಅಡಿ ಚಿತ್ರವನ್ನು ನಿರ್ಮಿಸಿದ್ದು, ಇದು ಎಲ್ಲಾ ಕಲಾ ಪ್ರೇಮಿಗಳನ್ನು ಗಮನ ಸೆಳೆಯಲಿದೆ. 2015ರಲ್ಲಿ ನಾವೆಲ್ಲಾ ಒಟ್ಟಾಗಿ ಬಾರಿಸು ಕನ್ನಡ ಡಿಂಡಿಮ ಎಂಬ ಆಲ್ಬಂನ್ನು ಮೈಸೂರಲ್ಲಿ ಚಿತ್ರೀಕರಿಸಿದ್ದೇವು. ಆ ಗೀತೆಯ ಸ್ಪೂರ್ತಿಯಿಂದ ಈ ಸಿನಿಮಾ ಮಾಡಿದ್ದೇವೆ. ರಘು ದೀಕ್ಷಿತ್ ಸಂಗೀತ ಸಂಯೋಜಿಸಿರುವ 8 ಗೀತೆಗಳು ಚಿತ್ರದಲ್ಲಿದ್ದು, ಒಂದನ್ನು ಮೈಸೂರಿನಲ್ಲಿ ಚಿತ್ರೀಕರಿಸಲಾಗಿದೆ ಎಂದು  ಅವರು ತಿಳಿಸಿದರು.

ರಾಜಲಕ್ಷ್ಮಿ ನಾಯಕಿಯಾಗಿ ಅಭಿನಯಿಸಿದ್ದು, ಮಹೇಶ್ ಕುಮಾರ್, ರವಿ ಹುಣಸೂರು, ಸಚು, ರಾಜೀಶ್ ಬಸವಣ್ಣ, ಲಿಂಗರಾಜು ಮತ್ತು ಮಹಾದೇವ ಪ್ರಸಾದ್ ಮತ್ತಿತರರ ತಾರಬಳಗವಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com