'ನೀನು ಎಷ್ಟೇ ಬಕೆಟ್ ಹಿಡಿದ್ರೂ....': ಸಂಕ್ರಾಂತಿ ಹಬ್ಬಕ್ಕೆ ಶುಭಕೋರಿದ ರಶ್ಮಿಕಾ ಮಂದಣ್ಣ ಮತ್ತೆ ಟ್ರೋಲ್!
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ ಭಾಷೆಯ ಅಭಿಮಾನಿಗಳಿಗೂ ಶುಭಾಶಯ ಕೋರಿದ್ದಾರೆ.
Published: 16th January 2023 11:52 AM | Last Updated: 16th January 2023 02:21 PM | A+A A-

ರಶ್ಮಿಕಾ ಮಂದಣ್ಣ
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ ಭಾಷೆಯ ಅಭಿಮಾನಿಗಳಿಗೂ ಶುಭಾಶಯ ಕೋರಿದ್ದಾರೆ.
'Happy Sankranti!' ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ. ಕನ್ನಡವನ್ನು ಮೊದಲು ಬರೆದಿರುವುದಕ್ಕೆ ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ. ಪಂಚ ಭಾಷೆಯಲ್ಲಿ ಸಿನಿಮಾ ಮಾಡುತ್ತಿರುವ ರಶ್ಮಿಕಾ ಮಂದಣ್ಣ ಭಾರತದಲ್ಲಿರುವ ಪ್ರಮುಖ ಭಾಷೆಗಳಲ್ಲಿ ವಿಶ್ ಮಾಡಿದ್ದಾರೆ. ಕನ್ನಡ, ತಮಿಳು, ತೆಗುಲು, ಮಲಯಾಳಂ, ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.
ಸಂಕ್ರಾಂತಿಯ ಶುಭಾಶಯಗಳು!
அனைவருக்கும் இனிய பொங்கல் திருநாள் நல்வாழ்த்துக்கள்!
संक्रांति की शुभकामनाएं!
సంక్రాంతి శుభాకాంక్షలు!
പൊങ്കൽ ആശംസകൾ!
Happy Sankranti! pic.twitter.com/EWoLBtLd21— Rashmika Mandanna (@iamRashmika) January 15, 2023
ನೇಕರು ಪಾಸಿಟಿವ್ ಕಾಮೆಂಟ್ ಮಾಡಿದ್ದರೆ ಇನ್ನೂ ಕೆಲವರು 'ನೀ ಏಷ್ಟೇ ಬಕೆಟ್ ಹಿಡಿದ್ರು ನಾವ ಮಾತ್ರಾ ನೀ ಮಾತಾಡಿದು, ಮಾಡಿದ್ದು ಮರೆಯೋಕ್ಕೆ ಆಗಲ್ಲಾ ನಮ್ಗೆ ನಾವು ಕನ್ನಡಿಗರು ಎಲ್ಲಾದರು ಇರೂ ಎಂತಾದರು ಇರು ಎಂದೆಂದಿಗೂ ನೀ ಮೊದಲು ಕನ್ನಡಿಗನಾಗಿರು' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ನೀ ಏಷ್ಟೇ ಬಕೆಟ್ ಹಿಡಿದ್ರು
—
ನಾವ ಮಾತ್ರಾ ನೀ ಮಾತಾಡಿದು, ಮಾಡಿದ್ದು ಮರೆಯೋಕ್ಕೆ ಆಗಲ್ಲಾ ನಮ್ಗೆ ನಾವು ಕನ್ನಡಿಗರು
ಎಲ್ಲಾದರು ಇರೂ
ಎಂತಾದರು ಇರು
ಎಂದೆಂದಿಗೂ ನೀ ಮೊದಲು ಕನ್ನಡಿಗನಾಗಿರು
pic.twitter.com/jUIRMujLhq