'ಫಸ್ಟ್ ಡೇ ಫಸ್ಟ್ ಶೋ' ಮೂಲಕ ಬೆಳ್ಳಿತೆರೆಗೆ ಮರಳಿದ ರೋಹಿತ್ ಶ್ರೀನಾಥ್
ಫಸ್ಟ್ ಡೇ ಫಸ್ಟ್ ಶೋ ಚಿತ್ರದ ಮೂಲಕ ಹಿರಿಯ ನಟ ಶ್ರೀನಾಥ್ ಅವರ ಮಗ ರೋಹಿತ್ ಅವರು ಪುನರಾಗಮ ಮಾಡುತ್ತಿದ್ದಾರೆ. ಮಣಿರತ್ನಂ ಅವರ ಚೊಚ್ಚಲ ನಿರ್ದೇಶನದ ಪಲ್ಲವಿ ಅನು ಪಲ್ಲವಿಯಲ್ಲಿ ಬಾಲ ಕಲಾವಿದರಾಗಿ ಅಭಿನಯಿಸಿ ಮಿಂಚಿದ್ದರು. ಇದೀಗ ಒಂದ್ ಕಥೆ ಹೇಳ್ಲಾ ನಿರ್ದೇಶಕ ಗಿರೀಶ್ ಜಿ ಅವರ ಮುಂದಿನ ಚಿತ್ರದೊಂದಿಗೆ ಬೆಳ್ಳಿತೆರೆಗೆ ಮರಳಲಿದ್ದಾರೆ.
ಗಿರೀಶ್ ಅವರು ಚಿತ್ರ ವಾವ್ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದು ಶೀಘ್ರದಲ್ಲೇ OTTಯಲ್ಲಿ ಬಿಡುಗಡೆಯಾಗುತ್ತಿದ್ದು Zee5 ನಲ್ಲಿ ಪ್ರದರ್ಶನವಾಗಲಿದೆ. ಇನ್ನು ಈ ಚಿತ್ರನಿರ್ಮಾಪಕರು ತಮ್ಮ ಮುಂದಿನ ಚಿತ್ರ ಶಾಲಿವಾಹನ ಶಾಖೆಯನ್ನು ಪೂರ್ಣಗೊಳಿಸಿದ್ದಾರೆ. ಇದು ಸೆನ್ಸಾರ್ ಕಳುಹಿಸಲಾಗಿದೆ. ಕಮರ್ಷಿಯಲ್ ಥ್ರಿಲ್ಲರ್ ಎಂದು ಬಿಂಬಿಸಲಾದ ಫಸ್ಟ್ ಡೇ ಫಸ್ಟ್ ಶೋಗೆ ಊರ್ಮಿಳಾ ಕಿರಣ್ ಸಾಥ್ ನೀಡಿದ್ದಾರೆ.
ಫಸ್ಟ್ ಡೇ ಫಸ್ಟ್ ಶೋ ಚಿತ್ರರಂಗದಲ್ಲಿ ಜನಪ್ರಿಯ ನುಡಿಗಟ್ಟು, ಪೈರಸಿಯಿಂದಾಗಿ ಚಲನಚಿತ್ರ ನಿರ್ಮಾಣ ತಂಡವು ಹಲವಾರು ಸವಾಲುಗಳನ್ನು ಹೇಗೆ ಎದುರಿಸುತ್ತದೆ ಎಂಬುದನ್ನು ಚಿತ್ರದಲ್ಲಿ ವಿವರಿಸಲಾಗಿದೆ. ಚಲನಚಿತ್ರವನ್ನು ಬಿಡುಗಡೆ ಮಾಡಲು ಹಲವು ಸವಾಲುಗಳನ್ನು ಎದುರಿಸುತ್ತಿರುವ ತಂತ್ರಜ್ಞರು ಮತ್ತು ಸಿಬ್ಬಂದಿಗಳ ಜೀವನವನ್ನು ಇದು ಗುರುತಿಸುತ್ತದೆ.
ಫಸ್ಟ್ ಡೇ ಫಸ್ಟ್ ಶೋನಲ್ಲಿ ನಿರ್ದೇಶಕ ಗಿರೀಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಬಿಎಂ ವೆಂಕಟೇಶ್, ಅನಿರುಧಾ ಶಾಸ್ತ್ರಿ ಮತ್ತು ಹರೀಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬೆಂಗಳೂರು ಮತ್ತು ಚೆನ್ನೈನ ವಿವಿಧ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ