ಕೆಟ್ಟ ಮೇಲೆ ಬುದ್ದಿ ಬಂತಾ? ಸಂದರ್ಶನದಲ್ಲಿ ರಕ್ಷಿತ್-ರಿಷಬ್ ಬಗ್ಗೆ ರಶ್ಮಿಕಾ ಮಾತು; 'ಶೆಟ್ರು' ಫ್ಯಾನ್ಸ್ ಗೆ ಅಚ್ಚರಿ ಜೊತೆ ಶಾಕ್!
ಕನ್ನಡ ಸಿನಿಮಾರಂಗದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಇದೀಗ ಬೇರೆ ಬೇರೆ ಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ರಶ್ಮಿಕಾ ಕಾಂತಾರ ಸಿನಿಮಾ ನೋಡಿಲ್ಲ ಎಂದು ಹೇಳಿ ಟ್ರೋಲ್ ಆಗಿದ್ದರು.
Published: 19th January 2023 09:22 AM | Last Updated: 19th January 2023 04:45 PM | A+A A-

ರಕ್ಷಿತ್, ರಶ್ಮಿಕಾ ಮತ್ತು ರಿಷಬ್
ಬೆಂಗಳೂರು: ಕನ್ನಡ ಸಿನಿಮಾರಂಗದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಇದೀಗ ಬೇರೆ ಬೇರೆ ಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ರಶ್ಮಿಕಾ ಕಾಂತಾರ ಸಿನಿಮಾ ನೋಡಿಲ್ಲ ಎಂದು ಹೇಳಿ ಟ್ರೋಲ್ ಆಗಿದ್ದರು, ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದರು.
ಆದರೆ ಈಗ ರಶ್ಮಿಕಾ, ರಕ್ಷಿತ್ ಮತ್ತು ರಿಷಬ್ ಅವರನ್ನು ಹೊಗಳಲು ಪ್ರಾರಂಭಿಸಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಈ ಬದಲಾವಣೆ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಇತ್ತೀಚಿಗಷ್ಟೆ ರಶ್ಮಿಕಾ ತೆಲುಗು ಯೂಟ್ಯೂಬ್ ವಾಹಿನಿಗೆ ಸಂದರ್ಶನ ನೀಡಿದ್ದಾರೆ. ಆಗ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಅವರನ್ನು ಹಾಡಿಹೊಗಳಿದ್ದಾರೆ. ಚಿತ್ರಕ್ಕೆ ಬರಲು ಕಾರಣನೇ ಅವರಿಬ್ಬರು ಎಂದು ಹೇಳಿದ್ದಾರೆ.
ನಿರೂಪಕಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ, 'ರಕ್ಷಿತ್ ಮತ್ತು ರಿಷಬ್ ಚಿತ್ರರಂಗದ ದಾರಿ ತೋರಿಸಿದವರು. ನನಗೆ ಅವಕಾಶ ಕೊಟ್ಟಿದ್ದು ಅವರೇ. ಇವತ್ತಿಗೂ ನಾನು ನನ್ನ ವೃತ್ತಿ ಜೀವನದಲ್ಲಿ ಅತ್ಯುತ್ತಮ ವ್ಯಕ್ತಿಗಳ ಜೊತೆ ಕೆಲಸ ಮಾಡಿದ್ದೀನಿ' ಎಂದು ಹೇಳಿದ್ದಾರೆ. ರಶ್ಮಿಕಾ ಅವರ ಈ ಮಾತು ಕನ್ನಡ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ರಿಷಬ್ ಮತ್ತು ರಕ್ಷಿತ್ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಇದನ್ನೂ ಓದಿ: 'ನೀನು ಎಷ್ಟೇ ಬಕೆಟ್ ಹಿಡಿದ್ರೂ....': ಸಂಕ್ರಾಂತಿ ಹಬ್ಬಕ್ಕೆ ಶುಭಕೋರಿದ ರಶ್ಮಿಕಾ ಮಂದಣ್ಣ ಮತ್ತೆ ಟ್ರೋಲ್!
ಅದೇ ಸಂದರ್ಶನದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಗ್ಗೆಯೂ ಮಾತನಾಡಿದ್ದಾರೆ. ಅಂಜನಿ ಪುತ್ರ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಿದ್ದರು. ವುನೀತ್ ಜೊತೆ ನಟಿಸಿದ್ದು ತನ್ನ ಪುಣ್ಯ ಎಂದು ಹೇಳಿದ್ದಾರೆ. `ಅಂಜನಿಪುತ್ರ’ ಚಿತ್ರದಲ್ಲಿ ಪುನೀತ್ ಜೊತೆ ನಟಿಸಿದೆ. ಅವರು ವಿಶಾಲವಾಗಿ ಹೇಗೆ ಆಲೋಚಿಸೋದು ಎಂಬ ಬಗ್ಗೆ ಹೇಳಿಕೊಟ್ಟರು. ನಾನು ನಾಲ್ಕು ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನೇ ಅಚ್ಚರಿಗೊಳ್ಳುತ್ತೇನೆ. ನನ್ನ ಕಡೆಯಿಂದ ಅವರಿಗೆ ಧನ್ಯವಾದ ಎಂದಿದ್ದಾರೆ ರಶ್ಮಿಕಾ.