ಎಸ್ಎಸ್ ರಾಜಮೌಳಿಗೆ ದೊಡ್ಡ ಆಫರ್ ಕೊಟ್ಟ 'ಅವತಾರ್' ಸೃಷ್ಟಿಕರ್ತ ಜೇಮ್ಸ್ ಕ್ಯಾಮರೂನ್
ಖ್ಯಾತ ಹಾಲಿವುಡ್ ಚಿತ್ರನಿರ್ಮಾಪಕ ಜೇಮ್ಸ್ ಕ್ಯಾಮರೂನ್ ಅವರು 'RRR' ಗಾಗಿ ಜಾಗತಿಕ ಪುರಸ್ಕಾರಗಳನ್ನು ಗಳಿಸುತ್ತಿರುವ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರ ಕೆಲಸದಿಂದ ಪ್ರಭಾವಿತರಾಗಿದ್ದಾರೆ.
Published: 21st January 2023 09:07 PM | Last Updated: 27th January 2023 04:16 PM | A+A A-

ಜೇಮ್ಸ್ ಕ್ಯಾಮರೂನ್-ರಾಜಮೌಳಿ
ಖ್ಯಾತ ಹಾಲಿವುಡ್ ಚಿತ್ರನಿರ್ಮಾಪಕ ಜೇಮ್ಸ್ ಕ್ಯಾಮರೂನ್ ಅವರು 'RRR' ಗಾಗಿ ಜಾಗತಿಕ ಪುರಸ್ಕಾರಗಳನ್ನು ಗಳಿಸುತ್ತಿರುವ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರ ಕೆಲಸದಿಂದ ಪ್ರಭಾವಿತರಾಗಿದ್ದಾರೆ.
ರಾಜಮೌಳಿ ಮತ್ತು 'ಆರ್‌ಆರ್‌ಆರ್' ಚಿತ್ರದ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಇತ್ತೀಚೆಗೆ 'ಕ್ರಿಟಿಕ್ಸ್' ಚಾಯ್ಸ್ ಅವಾರ್ಡ್ಸ್'(ಸಿಸಿಎ) ನಲ್ಲಿ ಕ್ಯಾಮರೂನ್ ಅವರನ್ನು ಭೇಟಿಯಾಗಿದ್ದರು. ಈ ಚಿತ್ರವು ಸಿಸಿಎಯಲ್ಲಿ 'ನಾಟು ನಾಟು' ಗಾಗಿ ಅತ್ಯುತ್ತಮ ವಿದೇಶಿ ಚಲನಚಿತ್ರ ಮತ್ತು ಅತ್ಯುತ್ತಮ ಸಾಹಿತ್ಯ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಈ ಹಿಂದೆ ಗೋಲ್ಡನ್ ಗ್ಲೋಬ್ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ಹಾಡು ವಿಭಾಗದಲ್ಲಿ 'ನಾಟು ನಾಟು' ಕೂಡ ಪ್ರಶಸ್ತಿ ಪಡೆದಿತ್ತು. ರಾಜಮೌಳಿ ಮತ್ತು ಕ್ಯಾಮೆರಾನ್ ನಡುವಿನ ಭೇಟಿಯ ವಿಡಿಯೋವನ್ನು 'RRR' ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದು ಈ ವೀಡಿಯೋದಲ್ಲಿ ಕ್ಯಾಮರೂನ್, 'ನೀವು ಹಾಲಿವುಡ್ ನಲ್ಲಿ ಚಿತ್ರ ಮಾಡಲು ಬಯಸಿದರೆ, ಮಾತನಾಡೋಣ' ಎಂದು ರಾಜಮೌಳಿಗೆ ಕೇಳುತ್ತಿರುವ ಕಾಣಬಹುದಾಗಿದೆ.
ಇದನ್ನೂ ಓದಿ: 'RRR' ವಿಶ್ಲೇಷಿಸಿದ ಅವತಾರ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್; ನಂಬಲಾಗುತ್ತಿಲ್ಲ ಎಂದ ಎಸ್ಎಸ್ ರಾಜಮೌಳಿ
'ದಿ ಟರ್ಮಿನೇಟರ್', 'ಏಲಿಯನ್ಸ್', 'ಟೈಟಾನಿಕ್' ಮತ್ತು 'ಅವತಾರ್' ನಂತಹ ಹಿಟ್ ಚಿತ್ರಗಳ ನಿರ್ದೇಶಕ ಕ್ಯಾಮರೂನ್, RRR ನ ನಿರ್ದೇಶನ ಮತ್ತು ಕಥೆಯನ್ನು ಶ್ಲಾಘಿಸುತ್ತಿರುವುದು ವೀಡಿಯೊದಲ್ಲಿ ಕಂಡುಬರುತ್ತದೆ.
ರಾಜಮೌಳಿ ನಿರ್ದೇಶನದ RRR ಭಾರತೀಯ ಕ್ರಾಂತಿಕಾರಿಗಳ ಕಥೆಯಾಗಿದೆ. ಚಿತ್ರದಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್ ಟಿಆರ್ ಪ್ರಮುಖ ಪಾತ್ರದಲ್ಲಿದ್ದಾರೆ. ಭಾರತ ಬ್ರಿಟಿಷರ ಆಳ್ವಿಕೆಯಲ್ಲಿದ್ದ 1920ರ ದಶಕದಲ್ಲಿ ಈ ಚಲನಚಿತ್ರವನ್ನು ಮಾಡಲಾಗಿದೆ. ಅಜಯ್ ದೇವಗನ್ ಮತ್ತು ಆಲಿಯಾ ಭಟ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ.
"If you ever wanna make a movie over here, let's talk"- #JamesCameron to #SSRajamouli.
— RRR Movie (@RRRMovie) January 21, 2023
Here’s the longer version of the two legendary directors talking to each other. #RRRMovie pic.twitter.com/q0COMnyyg2