ನಾನು ಓಡಿ ಹೋಗಿಯಂತೂ ಮದುವೆ ಆಗುವುದಿಲ್ಲ: ಎರಡನೇ ವಿವಾಹದ ಸುದ್ದಿ ಬಗ್ಗೆ ನಟಿ ಪ್ರೇಮಾ ಕಿಡಿ
ಜೀವನಕ್ಕೆ ಮದುವೆ ಕೂಡಾ ಬೇಕು. ಆದರೆ ಅದಕ್ಕೆ ಕಂಕಣ ಭಾಗ್ಯ ಬೇಕು. ನಾನೇನು ಓಡಿ ಹೋಗಿ ಮದುವೆಯಾಗುವುದಿಲ್ಲ. ಅಂತದ್ದೇನೂ ನಾನು ಮಾಡಿಲ್ಲ. ಚಿತ್ರರಂಗದಲ್ಲಿ ನನಗೆ ಒಳ್ಳೆಯ ಹೆಸರು ಇದೆ.
Published: 25th January 2023 09:40 AM | Last Updated: 25th January 2023 03:53 PM | A+A A-

ಪ್ರೇಮಾ
ಬೆಂಗಳೂರು: ಜೀವನಕ್ಕೆ ಮದುವೆ ಕೂಡಾ ಬೇಕು. ಆದರೆ ಅದಕ್ಕೆ ಕಂಕಣ ಭಾಗ್ಯ ಬೇಕು. ನಾನೇನು ಓಡಿ ಹೋಗಿ ಮದುವೆಯಾಗುವುದಿಲ್ಲ. ಅಂತದ್ದೇನೂ ನಾನು ಮಾಡಿಲ್ಲ. ಚಿತ್ರರಂಗದಲ್ಲಿ ನನಗೆ ಒಳ್ಳೆಯ ಹೆಸರು ಇದೆ. ನಾನು ಮದುವೆ ಆದರೆ ನಿಮ್ಮೆಲ್ಲರಿಗೂ ತಿಳಿಯುತ್ತೆ. ನಿಮ್ಮೆಲ್ಲರಿಗೂ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಸ್ಯಾಂಡಲ್‌ವುಡ್ ನಟಿ ಪ್ರೇಮಾ ಎರಡನೇ ಮದುವೆಗೆ ರೆಡಿಯಾಗುತ್ತಿದ್ದಾರೆ ಎಂಬ ಮಾತು ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದೆ. ಚಿತ್ರರಂಗದಲ್ಲಿ ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಪ್ರೇಮಾ 2016ರಲ್ಲಿ ಜೀವನ್ ಅಪ್ಪಚ್ಚು ಅವರಿಂದ ಡಿವೋರ್ಸ್ ಪಡೆದಿದ್ದರು. ಅವರು ಎರಡನೇ ಮದುವೆಯಾಗುತ್ತಿದ್ದಾರೆ ಎಂಬ ಮಾತು ಇತ್ತೀಚೆಗೆ ಕೇಳಿಬಂದಿತ್ತು.
ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರೇಮಾ, ''ತಮ್ಮ ಎರಡನೇ ಮದುವೆ ವಿಚಾರವನ್ನು ಅಲ್ಲಗಳೆದಿದ್ದಾರೆ. ನಾವು ನಾನಾ ಕಾರಣಗಳಿಂದ ದೇವಸ್ಥಾನಕ್ಕೆ ಭೇಟಿ ನೀಡುತ್ತೇವೆ. ಆದರೆ ನೀವೆಲ್ಲರೂ ನಾನು ಮದುವೆ ಮಾಡಿಕೊಳ್ಳುತ್ತಿದ್ದೇನೆ ಎಂದು ಸುದ್ದಿ ಹಬ್ಬಿಸಿದ್ದೀರಿ. ಇದರಿಂದ ನನಗೆ ಬೇಸರವಾಗಿದೆ. ನಾನು ಬಹಳ ದಿನಗಳಿಂದ ಕೊರಗಜ್ಜ ದೇವಸ್ಥಾನಕ್ಕೆ ಭೇಟಿ ನೀಡಬೇಕು ಎಂದುಕೊಂಡಿದ್ದೆ.
ಇದನ್ನೂ ಓದಿ: ಕಂಕಣ ಭಾಗ್ಯ ಕರುಣಿಸುವಂತೆ ಕೊರಗಜ್ಜನ ಮುಂದೆ ನಟಿ ಪ್ರೇಮಾ ಪ್ರಾರ್ಥನೆ?
ಆತ್ಮೀಯರೊಬ್ಬರ ಮದುವೆಗೆ ಆ ಜಾಗಕ್ಕೆ ಹೋಗಿದ್ದರಿಂದ ಹತ್ತಿರದಲ್ಲಿದ್ದ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದೆ. ಆದರೆ ಅಲ್ಲಿ ನಾನು ಮದುವೆ ಬಗ್ಗೆ ಯಾವ ಪ್ರಸ್ತಾಪ ಕೂಡಾ ಮಾಡಿಲ್ಲ. ಆ ವಿಡಿಯೋ ಇದ್ದರೆ ಮತ್ತೊಮ್ಮೆ ಗಮನಿಸಿ. ನಾನು ಕಲಾವಿದೆಯಾಗಿ ಇಲ್ಲಿ ಬಂದಿದ್ದೇನೆ. ನಾನು ಸಾಧಿಸಬೇಕಾಗಿರುವುದು ಇನ್ನೂ ಸಾಕಷ್ಟಿದೆ. ದಯವಿಟ್ಟು ಜನರಿಗೆ ಒಂದೊಳ್ಳೆ ಸಂದೇಶ ಕೊಡಿ. ಮದುವೆ ಒಂದೇ ಜೀವನ ಅಲ್ಲ.''
ಜನರು ನನಗೆ ಪ್ರೀತಿ ನೀಡಿ ಇಷ್ಟು ಎತ್ತರಕ್ಕೆ ಬೆಳೆಸಿದ್ದಾರೆ. ಇಂದು ಮುಂದೆಯೂ ಬೆಳೆಸುತ್ತಾರೆ ಎಂಬ ನಂಬಿಕೆ ಇದೆ. ಆದರೆ ಕೆಲವೊಂದು ಮಾಧ್ಯಮಗಳು ನನ್ನ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿವೆ. ಇದು ಹೆಣ್ಣುಮಕ್ಕಳ ವೈಯ್ತಕ್ತಿಕ ವಿಚಾರ. ಚಿತ್ರರಂಗದಲ್ಲಿ ಸಾಕಷ್ಟು ಅಡೆ ತಡೆಗಳು ಎದುರಾಗಿವೆ. ಆದರೆ ಅವೆಲ್ಲದಕ್ಕೂ ನಾನು ಜಗ್ಗಿಲ್ಲ, ಮುಂದೆ ಜಗ್ಗುವುದೂ ಇಲ್ಲ'' ಎಂದು ಪ್ರೇಮಾ, ತಮ್ಮ ಎರಡನೇ ಮದುವೆ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.