ಬರೋಬ್ಬರಿ 250 ಕೋಟಿ ರೂ. ಗಳಿಸಿದ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ವಾರಿಸು'
ನಟ ವಿಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಇತ್ತೀಚೆಗೆ ಬಿಡುಗಡೆಯಾದ ಚಿತ್ರ ವಾರಿಸು, ಬಿಡುಗಡೆಯಾದ 11 ದಿನಗಳಲ್ಲಿಯೇ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 250 ಕೋಟಿ ರೂ.ಗಳನ್ನು ಸಂಗ್ರಹಿಸಿದೆ ಎಂದು ಚಿತ್ರದ ನಿರ್ಮಾಪಕರು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ.
Published: 26th January 2023 09:35 AM | Last Updated: 26th January 2023 09:39 AM | A+A A-

Actor Vijay
ನಟ ವಿಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಇತ್ತೀಚೆಗೆ ಬಿಡುಗಡೆಯಾದ ಚಿತ್ರ ವಾರಿಸು, ಬಿಡುಗಡೆಯಾದ 11 ದಿನಗಳಲ್ಲಿಯೇ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 250 ಕೋಟಿ ರೂ.ಗಳನ್ನು ಸಂಗ್ರಹಿಸಿದೆ ಎಂದು ಚಿತ್ರದ ನಿರ್ಮಾಪಕರು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ.
ವಂಶಿ ಪೈಡಿಪಲ್ಲಿ ನಿರ್ದೇಶನದ ವಾರಿಸು ಚಿತ್ರವನ್ನು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಜಯಸುಧಾ, ನಟಿ ರಶ್ಮಿಕಾ ಮಂದಣ್ಣ, ಶಾಮ್, ಶ್ರೀಕಾಂತ್, ಸಂಯುಕ್ತ, ಸಂಗೀತ, ಪ್ರಕಾಶ್ ರಾಜ್, ಯೋಗಿ ಬಾಬು, ಮತ್ತು ವಿಟಿವಿ ಗಣೇಶ್ ಮುಂತಾದವರು ನಟಿಸಿದ್ದಾರೆ. ಮೊದಲ ಬಾರಿಗೆ ವಂಶಿ ಮತ್ತು ವಿಜಯ್ ಜೊತೆಯಾಗಿರುವ ಚಿತ್ರ ಇದಾಗಿದೆ.
ವಾರಿಸು ಕಮರ್ಷಿಯಲ್ ಎಂಟರ್‌ಟೈನರ್ ಆಗಿದ್ದು, ಶರತ್ ಕುಮಾರ್ ನಟಿಸಿರುವ ಉದ್ಯಮಿ ಮತ್ತು ಅವರ ಮೂವರು ಪುತ್ರರ ಸುತ್ತ ಸುತ್ತುತ್ತದೆ. ವಿಜಯ್ ಕಿರಿಯ ಮಗನ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಒಬ್ಬ ವಾಣಿಜ್ಯೋದ್ಯಮಿಯಾಗಿ ಕಾಣಿಸಿಕೊಂಡಿದ್ದು, ನಂತರ ಅವರು ತನ್ನ ಕುಟುಂಬದ ವ್ಯವಹಾರವನ್ನು ನೋಡಿಕೊಳ್ಳಲು ನಿರ್ಧರಿಸುತ್ತಾರೆ. ವಾರಿಸು ಸಿನಿಮಾ ಸಿನಿ ಪ್ರಿಯರಿಂದ ಮಿಶ್ರ ಪ್ರತಿಕ್ರಿಯೆಯನ್ನೇನೋ ಗಳಿಸಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದೆ.
ಈ ಚಿತ್ರವು ತೆಲುಗಿನಲ್ಲಿ ವಾರಸಡು ಎಂಬ ಹೆಸರಿನಲ್ಲಿ ಬಿಡುಗಡೆಯಾಗಿದೆ. ಚಿತ್ರದ ಸಂಗೀತವನ್ನು ಥಮನ್ ಸಂಯೋಜಿಸಿದ್ದು, ಹಾಡುಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.