ಶಿವರಾಜ್‌ಕುಮಾರ್ ಅಭಿನಯದ ಘೋಸ್ಟ್ ಚಿತ್ರಕ್ಕೆ ಬಾಲಿವುಡ್‌ನ ಅನುಪಮ್ ಖೇರ್ ಎಂಟ್ರಿ!
ಬೀರ್‌ಬಲ್ ಹಾಗೂ ಓಲ್ಡ್ ಮಾಂಕ್ ರೀತಿಯ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಶ್ರೀನಿ ಘೋಸ್ಟ್‌ಗೆ ಆಕ್ಷನ್ ಕಟ್ ಹೇಳಿದ್ದು ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಚಿತ್ರದಲ್ಲಿ ನಟಿಸಿದ್ದಾರೆ.
Published: 27th January 2023 08:40 AM | Last Updated: 29th March 2023 07:17 PM | A+A A-

ಅನುಪಮ್ ಖೇರ್
ಬೀರ್‌ಬಲ್ ಹಾಗೂ ಓಲ್ಡ್ ಮಾಂಕ್ ರೀತಿಯ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಶ್ರೀನಿ ಘೋಸ್ಟ್‌ಗೆ ಆಕ್ಷನ್ ಕಟ್ ಹೇಳಿದ್ದು ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಚಿತ್ರದಲ್ಲಿ ನಟಿಸಿದ್ದಾರೆ.
ಚಿತ್ರ ಘೋಷಣೆಯಾದಾಗಲೇ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಇನ್ನು ಈ ಚಿತ್ರದ ಸ್ಟಾರ್ ಕಾಸ್ಟ್ ಸಹ ಸದ್ದು ಮಾಡುತ್ತಿದ್ದು, ಇದೀಗ ಬಾಲಿವುಡ್‌ನ ಖ್ಯಾತ ನಟ ಅನುಪಮ್ ಖೇರ್ ಸಹ ಚಿತ್ರತಂಡವನ್ನು ಸೇರ್ಪಡೆಗೊಂಡಿದ್ದಾರೆ.
ತಮಿಳು, ಇಂಗ್ಲಿಷ್, ಮಲಯಾಳಂ ಮತ್ತು ತೆಲುಗು ಚಲನಚಿತ್ರೋದ್ಯಮಗಳಲ್ಲಿ ಕೆಲಸ ಮಾಡಿರುವ ಅನುಪಮ್, ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಘೋಸ್ಟ್ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.
ಇನ್ನು ಘೋಸ್ಟ್ ಚಿತ್ರತಂಡ ಈ ಹಿಂದೆ ಘೋಸ್ಟ್ ಥೀಮ್ ಮ್ಯೂಸಿಕ್ ಬಿಡುಗಡೆ ಮಾಡುವ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅರ್ಜುನ್ ಜನ್ಯಾ ಕಂಪೋಸ್ ಮಾಡಿದ್ದ ಈ ಬಿಜಿಎಂ ಸಿನಿ ರಸಿಕರಲ್ಲಿ ಚಿತ್ರದ ಮೇಲಿದ್ದ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿತ್ತು.
ಮೂಲಗಳ ಪ್ರಕಾರ ಅನುಪಮ್ ಘೋಸ್ಟ್ ಚಿತ್ರದಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಅವರು ಮಾರ್ಚ್‌ನಲ್ಲಿ ಸೆಟ್‌ಗೆ ಸೇರಿಕೊಳ್ಳಲಿದ್ದಾರೆ ಮತ್ತು ಅವರ ಪಾತ್ರದ ವಿವರಗಳನ್ನು ನಂತರ ಅವರ ಫಸ್ಟ್ ಲುಕ್ ಪೋಸ್ಟರ್‌ನೊಂದಿಗೆ ಬಹಿರಂಗಪಡಿಸಲಾಗುವುದು. ಮತ್ತೊಂದೆಡೆ, ವಿಶೇಷ ಪೊಲೀಸ್ ಅಧಿಕಾರಿಯಾಗಿ ಜಯರಾಮ್ ನಟಿಸಲಿದ್ದಾರೆ ಎನ್ನಲಾಗಿದೆ.
ಆನಂದ್ ಆಡಿಯೊ ಘೋಸ್ಟ್‌ನ ಆಡಿಯೊ ಹಕ್ಕುಗಳನ್ನು ಪಡೆದುಕೊಂಡಿದೆ. ಮೋಷನ್ ಪೋಸ್ಟರ್ ಅನ್ನು ASOO VFX (ಟೆಹ್ರಾನ್ ಮೂಲದ ಕಂಪನಿ) ಮೋನಿಶ್ ಮತ್ತು ರುದ್ರೇಶ್ ಒಲಮಾತಾ ಅವರೊಂದಿಗೆ ರಚಿಸಿದ್ದಾರೆ.